ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸ್ವಚ್ಛ ಭಾರತ ಕನಸಿಗೆ ಫೇಸ್‌ಬುಕ್ ಅಪ್ಲಿಕೇಶನ್

|
Google Oneindia Kannada News

ನವದೆಹಲಿ, ಅ. 11: ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತಮ್ಮ ಸಾಮಾನ್ಯ ಜೀನ್ಸ್‌-ಟಿ ಶರ್ಟ್‌ಗೆ ಗುಡ್‌ ಬೈ ಹೇಳಿದ್ದ ರ್ಬರ್ಗ್‌ ಸೂಟ್‌ನಲ್ಲಿ ಕಂಗೊಳಿಸಿದರು.

ಮಾರ್ಕ್ ಮಾರ್ಕ್ ಝುಕರ್ಬರ್ಗ್ ಭೇಟಿಯ ನಂತರ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 'ಇದೊಂದು ಉತ್ತಮವಾದ ಭೇಟಿಯಾಗಿತ್ತು, ನನಗೆ ಸಂತೋಷವಾಗಿದೆ. ನಾವು ವಿವಿಧ ವಿಷಯಗಳನ್ನು ಚರ್ಚೆ ಮಾಡಿದೆವು' ಎಂದು ಬರೆದಿದ್ದಾರೆ.[ಮೋದಿ ಭೇಟಿಗೆ ಸಜ್ಜಾದ ಫೇಸ್ಬುಕ್ ಸಿಇಒ]

marck

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮೋದಿ ಮಾರ್ಕ್ ಝುಕರ್ಬರ್ಗ್ ಅವರಿಗೆ ವಿವರಿಸಿದರು. ಅಲ್ಲದೇ ಫೇಸ್‌ಬುಕ್‌ನಲ್ಲಿ ತಾವು ಹಾಕಿದ್ದ ಫೋಟೊ ತೋರಿಸಿದರು. ಅಲ್ಲದೇ ಸಾಮಾಜಿಕ ಜಾಲತಾಣವನ್ನು ಜಾಗೃತಿಗೊಳಿಸುವ ಮಾಧ್ಯಮವಾಗಿ ಬಳಸಿಕೊಳ್ಳಬೇಕೆಂಬ ಚರ್ಚೆ ನಡೆಯಿತು. ಜನರನ್ನು ಸಮಾಜ ಸೇವೆಗೆ ಎಳೆಯುವಂಥ ಕೆಲಸ ಫೇಸ್ ಬುಕ್‌ನಿಂದಾಗಬೇಕು ಎಂದು ಮೋದಿ ಮಾತುಕತೆ ವೇಳೆ ಹೇಳಿದರು.

ಡಿಜಿಟಲ್‌ ಇಂಡಿಯಾ ನಿರ್ಮಾಣ, ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರ ಚಟುವಟಿಕೆ, ವಿಧ್ವಂಸಕ ಕೃತ್ಯಗಳಿಕೆ ಕಾರಣವಾಗುವ ರೀತಿ ಎಲ್ಲವೂ ಚರ್ಚಿತವಾಯಿತು. ಸ್ವಚ್ಛ ಭಾರತ ಅಭಿಯಾನದಿಂದ ಪ್ರಭಾವಿತರಾದ ಮಾರ್ಕ್ ಝುಕರ್ಬರ್ಗ್ ಫೇಸ್ ಬುಕ್‌ನಿಂದ ಈ ಬಗ್ಗೆ ಮೊಬೈಲ್‌ ಅಪ್ಲಿಕೇಶನ್ ವೊಂದನ್ನು ಸಿದ್ಧಪಡಿಸಲಾಗುವುದು. ಶೀಘ್ರವೇ ಈ ಬಗ್ಗೆ ಯೋಜನೆ ರೂಪಿಸುತ್ತೇನೆ ಎಂದರು.[ತಾಯ್ನುಡಿ ಬಳಸಿ, ತಂತ್ರಜ್ಞಾನ ಬೆಳಸಿ]

ಭಾರತಕ್ಕೆ ಮೊದಲ ಬಾರಿಗೆ ಆಗಮಿಸಿರುವ ಮಾರ್ಕ್ ಝುಕರ್ಬರ್ಗ್ ಗುರುವಾರ ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ ಸಾಮಾನ್ಯ ಜನರಿಗೂ ಅಂತರ್ಜಾಲ ಸಂಪರ್ಕ ಸುಲಭವಾಗಿ ಸಿಗುವಂತೆ ಮಾಡಬೇಕು. ಭಾರತ ಲಕ್ಷಾಂತರ ಹಳ್ಳಿಗಳನ್ನು ಹೊಂದಿದೆ. ಎಲ್ಲ ಕಡೆಯೂ ಅಂತರ್ಜಾಲ ಸಂಪರ್ಕ ಸಾಧ್ಯವಾಗಬೇಕು ಎಂದು ರವಿಶಂಕರ್‌ ಪ್ರಸಾದ್‌ ಭೇಟಿ ನಂತರ ಹೇಳಿದ್ದರು.

English summary
Facebook founder Mark Zuckerberg on Friday met Prime Minister Narendra Modi. Both of them discussed a wide range of issues revolving around the innovative use of Facebook as a platform to engage with a large audience in the service of humanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X