ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2005ಕ್ಕಿಂತ ಹಳೆಯ ನೋಟುಗಳಿದ್ದರೆ ಬದಲಾಯಿಸಿ

|
Google Oneindia Kannada News

ನವದೆಹಲಿ, ಡಿ.22 : 2005ಕ್ಕಿಂತ ಹಿಂದೆ ಮುದ್ರಣವಾಗಿರುವ ನೋಟುಗಳನ್ನು ಬ್ಯಾಂಕುಗಳಿಗೆ ವಾಪಸ್ ಕೊಟ್ಟು ಅದೇ ಮೌಲ್ಯಕ್ಕೆ ಹೊಸ ನೋಟುಗಳನ್ನು ಪಡೆಯಲು ಜ.1 ಕೊನೆಯ ದಿನವಾಗಿರುತ್ತದೆ. ಆದ್ದರಿಂದ ನಿಮ್ಮ ಬಳಿ ಹಳೆಯ ನೋಟುಗಳಿದ್ದರೆ ಅದನ್ನು ಬ್ಯಾಂಕ್‌ಗೆ ವಾಪಸ್ ನೀಡಿ.

ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಳ್ಳುವಂತೆ ಹಿಂದೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದ್ದವು. ಈಗ ಇದಕ್ಕೆ ಅಂತಿಮ ಗಡುವು ನೀಡಲಾಗಿದ್ದು, ಜನವರಿ 1ರೊಳಗೆ ಗ್ರಾಹಕರು ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು.

Money

2005ಕ್ಕಿಂತ ಹಳೆಯ 100, 500, 1000 ಮುಖಬೆಲೆಯ ನೋಟುಗಳನ್ನು ಗ್ರಾಹಕರು ಬ್ಯಾಂಕ್‌ಗೆ ನೀಡಿ ಅದೇ ಮೌಲ್ಯದ ಹೊಸ ನೋಟುಗಳನ್ನು ಪಡೆಯಬಹುದಾಗಿದೆ. ಜ.1ರ ನಂತರ ಹಳೆಯ ನೋಟುಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಈಗಾಗಲೇ ಸ್ಪಷ್ಟಪಡಿಸಿದೆ. [ಪಿಎಫ್ ಪಡೆಯುವುದು ಬಹಳ ಸುಲಭ]

ನೋಟುಗಳು ವಾಪಸ್ ಏಕೆ : 2005ಕ್ಕಿಂತ ಹಿಂದೆ ಮುದ್ರಣವಾಗಿರುವ ನೋಟುಗಳ ಹಿಂಬದಿಯ ಕೆಳಭಾಗದಲ್ಲಿ ನೋಟಿನ ಮುದ್ರಿತ ವರ್ಷ ವಿರುತ್ತಿರಲಿಲ್ಲ. ನಕಲಿ ನೋಟುಗಳ ಹಾವಳಿಯೂ ಹೆಚ್ಚಾಗುತ್ತಿತ್ತು. ಆದ್ದರಿಂದ 2005ರಿಂದ ವಿವಿಧ ಮುಖಬೆಲೆಯ ನೋಟುಗಳಿಗೆ ಕೆಲವೊಂದು ಭದ್ರತಾ ಗುಣಲಕ್ಷಣಗಳನ್ನು ಸೇರ್ಪಡೆ ಮಾಡಿ, ಮುದ್ರಿತ ವರ್ಷವನ್ನು ಸೇರ್ಪಡೆ ಮಾಡಲಾಗಿದೆ.

ಆದ್ದರಿಂದ ಈಗ 2005ಕ್ಕಿಂತ ಹಿಂದೆ ಮುದ್ರಣವಾಗಿರುವ ಎಲ್ಲಾ ನೋಟುಗಳನ್ನು ಆರ್‌ಬಿಐ ಚಲಾವಣೆಯಿಂದ ಹಿಂಪಡೆದು ನಾಶಪಡಿಸುತ್ತದೆ. ಇಂತಹ ನೋಟುಗಳನ್ನು ಚಲಾವಣೆಗೆ ಬಿಡಬಾರದು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಈಗಾಗಲೇ ಸೂಚನೆ ನೀಡಿದೆ.

English summary
People have only 11 days left to exchange currency notes of various denominations, including 500 and 1,000, which were printed before 2005. The deadline for exchanging the pre-2005 notes is January 1, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X