ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಜಾಲದಿಂದ 10 ಕೋಟಿ ಎಲ್‍ಇಡಿ ಬಲ್ಬ್ ಗಳ ವಿತರಣೆ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕೇಂದ್ರ ಸರ್ಕಾರದ ಉನ್ನತ ಜ್ಯೋತಿ ಎಲ್ಲರಿಗೂ ಕೈಗೆಟುಕುವವ ಎಲ್‍ಇಡಿ(ಉಜಾಲ) ಯೋಜನೆಯಡಿ ದೇಶಾದ್ಯಂತ 10 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಣೆ ಮಾಡಲಾಗಿದೆ. ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ರ ಜನವರಿಯಲ್ಲಿ ಉದ್ಘಾಟನೆ ಮಾಡಿದ್ದರು.

ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉಳಿತಾಯ ಮಾಡುವಲ್ಲಿ ಹೆಚ್ಚು ಕೊಡುಗೆ ನೀಡುತ್ತಿರುವುದೆಂದರೆ ಗೃಹಬಳಕೆಯ ವಿದ್ಯುತ್ ಬಳಕೆದಾರರು. ಭಾರತದಲ್ಲಿ 10 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಣೆ ಮಾಡುವ ಮೂಲಕ ವಾರ್ಷಿಕವಾಗಿ 1,298 ಕೋಟಿ ಕೆಡಬ್ಲ್ಯೂಎಚ್(ಕಿಲೋವ್ಯಾಟ್ ಗಂಟೆಗಳು) ಉಳಿತಾಯವಾಗುತ್ತದೆ.[ರಾಜ್ಯದಲ್ಲಿ ಕೇವಲ 80 ರೂಪಾಯಿ!]

ಇದರಿಂದ 2,600 ಮೆಗಾವ್ಯಾಟ್ ನಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಇದೆಲ್ಲಕ್ಕಿಂತ ಪ್ರಮುಖವಾಗಿ ದಏಶ ಸಿಒ2 ಮಾಲಿನ್ಯವನ್ನು ವಾರ್ಷಿಕವಾಗಿ 1 ಕೋಟಿ ಟನ್‍ನಷ್ಟು ಕಡಿಮೆ ಮಾಡಬಹುದು. ಕೇಂದ್ರ ಸರ್ಕಾರದ ಈ ಉಜಾಲ ಯೋಜನೆಯನ್ನು ಇಂಧನ ಇಲಾಖೆಯ ಸಹಯೋಗದಲ್ಲಿ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್(ಇಇಎಸ್‍ಎಲ್) ಜಾರಿಗೆ ತಂದಿದೆ. [ಬೆಂಗಳೂರಲ್ಲಿ ಎಲ್ ಇಡಿ ಬಲ್ಬ್ ಎಲ್ಲೆಲ್ಲಿ ಸಿಗುತ್ತೆ?]

ಈ ಹೊಸ ಮೈಲುಗಲ್ಲು ಸ್ಥಾಪಿಸಿದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಇಂಧನ, ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳ ಸಚಿವರಾದ ಪಿಯೂಶ್ ಗೋಯಲ್, "10 ಕೋಟಿ ಬಲ್ಬ್ ಗಳನ್ನು ವಿತರಿಸಿರುವುದು ಕೇವಲ ನಮ್ಮ ಸಾಧನೆಯಲ್ಲ. ಇದು ಗ್ರಾಹಕರ ಸಾಧನೆಯೂ ಆಗಿದೆ. [ಎಲ್ ಇಡಿ ಬಲ್ಬ್ ಬಳಕೆಯಿಂದ 9 ಅನುಕೂಲಗಳು]

ಮಾಲಿನ್ಯ ಶೇ. 30 ರಿಂದ 35 ರಷ್ಟು ಕಡಿಮೆ

ಮಾಲಿನ್ಯ ಶೇ. 30 ರಿಂದ 35 ರಷ್ಟು ಕಡಿಮೆ

ಇಂಗಾಲದಿಂದ ಆಗುತ್ತಿರುವ ಮಾಲಿನ್ಯವನ್ನು ಶೇ. 30 ರಿಂದ 35 ರಷ್ಟು ಕಡಿಮೆ ಮಾಡುವ ಸ್ಪಷ್ಟ ದೂರದೃಷ್ಟಿಯನ್ನು ಭಾರತ ಹೊಂದಿದ್ದು, ಈ ಸಾಧನೆ ಮಾಡುವ ಮೂಲಕ ಇಂಧನ ಉಳಿತಾಯ ಮಾಡಿದಂತಾಗಿದೆ. ಉಜಾಲ ಯೋಜನೆ ಮೂಲಕ ನಾವು ದೇಶ ಮತ್ತು ಜಗತ್ತಿಗೆ ನೀಡಿದ ಭರವಸೆಯನ್ನು ಜಾರಿಗೆ ತರುವಲ್ಲಿ ಬದ್ಧತೆ ತೋರಿದ್ದೇವೆ. ಇದೇ ಬದ್ಧತೆಯನ್ನು ಮುಂದುವರೆಸಿಕೊಂಡು ಹೋಗಲಿದ್ದು, ಈ ವಷಾಂತ್ಯದ ವೇಳೆಗೆ 20 ಕೋಟಿ ಎಲ್‍ಇಡಿ ಬಲ್ಬ್ ವಿತರಣೆ ಮಾಡುವ ಗುರಿ ಹೊಂದಿದ್ದೇವೆ.

ಕರ್ನಾಟಕದಲ್ಲಿ ಹೊಸಬೆಳಕು ಯೋಜನೆ

ಕರ್ನಾಟಕದಲ್ಲಿ ಹೊಸಬೆಳಕು ಯೋಜನೆ

ಭಾರತ ಸರ್ಕಾರ ಉಜಾಲದಂತಹ ಯೋಜನೆಗಳನ್ನು ಜಾರಿಗೆ ತರಲು ಬದ್ಧವಾಗಿದೆ. ರಾಜ್ಯ ಸರ್ಕಾರಗಳೂ ಈ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಜಾರಿಗೊಳಿಸುತ್ತಿವೆ. ಈಗಾಗಲೇ 13 ರಾಜ್ಯಗಳು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇಇಎಸ್‍ಎಲ್ ಇನ್ನೊಂದು ತಿಂಗಳಲ್ಲಿ ಇನ್ನೂ ಮೂರು ರಾಜ್ಯಗಳಲ್ಲಿ ಎಲ್‍ಇಡಿ ಬಲ್ಬ್ ಗಳ ವಿತರಣೆಯನ್ನು ಆರಂಭಿಸಲಿದೆ.

20 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಣೆ ಗುರಿ

20 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಣೆ ಗುರಿ

2015-16 ರಲ್ಲಿ ವಿತರಣೆಯಾದ ಎಲ್‍ಇಡಿ ಬಲ್ಬ್ ಗಳ ಸಂಖ್ಯೆ 15 ಕೋಟಿ ಮೀರಿತ್ತು. ಈ ಪೈಕಿ ಉಜಾಲ ಯೋಜನೆಯಡಿ ವಿತರಣೆಯಾಗಿದ್ದು 9 ಕೋಟಿ. ಈ ವರ್ಷ ಹೆಚ್ಚುವರಿಯಾಗಿ 20 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಿಸುವ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ. 2019 ರ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ದೇಶದಲ್ಲಿ 77 ಕೋಟಿ ಬಲ್ಬ್ ಗಳನ್ನು ಬದಲಾಯಿಸಿ ಎಲ್‍ಇಡಿ ಬಲ್ಬ್ ಗಳನ್ನು ವಿತರಿಸುವ ಗುರಿ ಇಟ್ಟುಕೊಂಡಿದೆ.

ಬಲ್ಬ್ ವಿತರಣಾ ಕಿಯೋಸ್ಕ್ ಬಗ್ಗೆ ಮಾಹಿತಿ

ಬಲ್ಬ್ ವಿತರಣಾ ಕಿಯೋಸ್ಕ್ ಬಗ್ಗೆ ಮಾಹಿತಿ

ಗ್ರಾಹಕರು ಈ ವೆಬ್ಸ್ ಸೈಟ್ www.delp.in ಭೇಟಿ ನೀಡಿ ಹತ್ತಿರದ ಬಲ್ಬ್ ವಿತರಣಾ ಕಿಯೋಸ್ಕ್ ಬಗ್ಗೆ ಮಾಹಿತಿ ಪಡೆಯಬಹುದು. ತಮ್ಮ ಮನೆಯಲ್ಲಿ ಎಲ್‍ಇಡಿ ಬಲ್ಬ್ ಉಪಯೋಗಿಸಿ ವಿದ್ಯುತ್ ಉಳಿತಾಯ ಮಾಡಿದರೆ ಮತ್ತೊಂದು ಮನೆಯ ದೀಪ ಬೆಳಗಬಹುದು. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ಚಿಂತಿಸಬೇಕು.

ರಾಜ್ಯದಲ್ಲಿ ಕೇವಲ 80 ರೂಪಾಯಿ!

ರಾಜ್ಯದಲ್ಲಿ ಕೇವಲ 80 ರೂಪಾಯಿ!

ಕೇಂದ್ರ ಸರ್ಕಾರದ ಉನ್ನತ ಜ್ಯೋತಿ(ಉಜಾಲ) ಯೋಜನೆಯಡಿ ಕೈಗೆಟುಕುವ ದರದಲ್ಲಿ ಎಲ್‍ಇಡಿ ಬಲ್ಬ್ ಗಳನ್ನು ಪೂರೈಸುತ್ತಿರುವ ಎನರ್ಜಿ ಎಫಿಸಿಯನ್ಸಿ ಸರ್ವೀಸ್ ಲಿಮಿಟೆಡ್(ಇಇಎಸ್‍ಎಲ್) ಎಲ್‍ಇಡಿ ಬಲ್ಬ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಏಪ್ರಿಲ್ 06ರಿಂದ ಕರ್ನಾಟಕದಲ್ಲಿ 80 ರುಪಾಯಿಯಂತೆ ಸಿಗಲಿದೆ.

English summary
State-run Energy Efficiency Services today achieved the landmark of distributing 10 crore LED bulbs, including 60 lakh in Delhi, within a year of launch of its scheme UJALA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X