ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಆಧಾರ್ ಆಧಾರಿತ ಪೇಮೆಂಟ್ App? ಹೇಗೆ ಕಾರ್ಯ ನಿರ್ವಹಿಸುತ್ತೆ?

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 25: ಕೇಂದ್ರ ಸರ್ಕಾರದ ದೇಶದ ಜನತೆಗೆ ಕ್ರಿಸ್ಮಸ್ ಉಡುಗೊರೆ ರೂಪವಾಗಿ ಆಧಾರ್ ಆಧಾರಿತ ಪೇಮೆಂಟ್ ಅಪ್ಲಿಕೇಷನ್ ಹೊರತಂದಿದೆ. ಡಿಜಿಟಲ್ ಇಂಡಿಯಾದ ಭಾಗವಾಗಿರುವ ಈ ಆಂಡ್ರಾಯ್ಡ್ ಆಧಾರಿತ ಆಪ್ ಮೂಲಕ ಸುಲಭವಾಗಿ ಇ ಪೇಮೆಂಟ್ ಮಾಡಬಹುದು.

ಡೆಬಿಟ್/ಕ್ರೆಡಿಟ್ ಕಾರ್ಡ್​ಗಳ ಮೂಲಕ ವ್ಯವಹರಿಸುವುದಕ್ಕೆ ಬದಲಾಗಿ ಅತ್ಯಂತ ಸುಲಭವಾಗಿ ನೂತನ ಅಪ್ಲಿಕೇಷನ್ ಬಳಸಬಹುದಾಗಿದೆ. ನಗದು ರಹಿತ ವ್ಯವಹಾರ ಜಾರಿಗೊಳಿಸಲು ಈ ಅಪ್ಲಿಕೇಷನ್ ಹೊರ ತರಲಾಗಿದೆ. ಪೇಟಿಎಂ, ಫ್ರೀಚಾರ್ಚ್ ಮುಂತಾದ ಮೊಬೈಲ್ ವ್ಯಾಲೆಟ್ ಗಳಿಗೆ ಸಮನಾಗಿ ಆಧಾರ್ ಪೇಮೆಂಟ್ ಅಪ್ಲಿಕೇಷನ್ ಬಳಸಬಹುದಾಗಿದೆ.

ಆಂಡ್ರಾಯ್ಡ್ ಫೋನ್ ನಲ್ಲಿ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್​ಸಿ ಬ್ಯಾಂಕ್ ಈ ಅಪ್ಲಿಕೇಷನ್ ರೂಪಿಸಿದೆ.

 Digital India :What is Aadhaar Payment App? How does it work

ಹೇಗೆ ಕಾರ್ಯ ನಿರ್ವಹಿಸಲಿದೆ?: ಮೊದಲಿಗೆ ಈ ಅಪ್ಲಿಕೇಷನ್ ಬಳಸಲು ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆ ಜತೆ ಜೋಡಣೆ ಮಾಡಬೇಕು. ಇನ್ನೊಂದೆಡೆ ಮಾರಾಟಗಾರರು ಈ ಅಪ್ಲಿಕೇಷನ್(Merchant App) ಬಳಸಬಹುದಾಗಿದೆ.

ಈ ಮೂಲಕ ಮಾಸ್ಟರ್, ವೀಸಾ ಕಾರ್ಡ್ ಮೂಲಕ ಹಣ ಪಾವತಿ ಮಾಡಲು ಕೊಡಬೇಕಿದ್ದ ಶುಲ್ಕಕ್ಕೆ ಕಡಿವಾಣ ಬೀಳಲಿದೆ.ಮಾರಾಟಗಾರರು ಈ ಅಪ್ಲಿಕೇಷನ್ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಕೂಡಾ ಹೊಂದಿರಬೇಕು. ಅಪ್ಲಿಕೇಷನ್ ಹಾಗೂ ಸ್ಕ್ಯಾನರ್ ಎರಡನ್ನು ಹೊಂದಿಸಿದ ಬಳಿಕ ಅಪ್ಲಿಕೇಷನ್ ಸುಲಭವಾಗಿ ಬಳಸಬಹುದಾಗಿದೆ.

ಗ್ರಾಹಕರು ಏನು ಮಾಡ್ಬೇಕು?: ಯಾವುದಾದರೂ ವಸ್ತು ಖರೀದಿ ಮಾಡುವಾಗ ಮಾರಾಟಗಾರರ ಬಳಿ ಆಧಾರ್ ಮರ್ಚೆಂಟ್ ಅಪ್ಲಿಕೇಷನ್ ಇದೆಯೇ ಎಂದು ಪ್ರಶ್ನಿಸಬೇಕು. ಅಪ್ಲಿಕೇಷನ್ ಇದ್ದರೆ, ನಿಮ್ಮ ಆಧಾರ್ ವಿವರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ನಂತರ ಆಧಾರ್ ಜತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಲಭ್ಯವಾಗುತ್ತದೆ. ಬೇಕಾದ ಬ್ಯಾಂಕ್ ಬಳಸಿ ವ್ಯವಹರಿಸಬೇಕು. ಇದರ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಮೂಲಕ ವ್ಯವಹಾರವನ್ನು ಸುರಕ್ಷಿತಗೊಳಿಸಲಾಗುತ್ತದೆ.

ಎರಡು ಖಾತೆಗಳಿದ್ದರೆ ಏನು ಮಾಡುವುದು?: ಗ್ರಾಹಕರು ಒಂದೇ ಬ್ಯಾಂಕಿನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರೆ, ಎರಡು ಖಾತೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಈ ರೀತಿ ಆಧಾರ್ ಜೋಡಣೆಯುಳ್ಳ ಬ್ಯಾಂಕ್ ಖಾತೆ ಮೂಲಕ ಸುಲಭವಾಗಿ ಯಾವುದೇ ಕುಗ್ರಾಮದಲ್ಲಿ ಬೇಕಾದರೂ ವ್ಯವಹರಿಸಬಹುದು ಎಂದು ಯುಐಎಡಿಐ ಹೇಳಿದೆ.

English summary
As a part of Digital India initiative UIDAI introduces Android based Aadhaar Payment application.You have to link your bank account with your Aadhaar details can facilitate the digital cashless transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X