ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ದಿನಂಪ್ರತಿ ಪರಿಷ್ಕರಣೆ: ಜೂನ್ 16ರಿಂದ ಜಾರಿ

ದಿನದ ಲೆಕ್ಕಾಚಾರದಲ್ಲಿ ತೈಲ ಬೆಲೆ ಪರಿಷ್ಕರಣೆ ಜಾರಿಗೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 16ರಿಂದ ನೂತನ ಪದ್ಧತಿ ಅನುಷ್ಠಾನಕ್ಕೆ ಸರ್ಕಾರಿ ಸ್ವಾಮ್ಯದ ಕಂಪನಿಗಳ ಈ ನಿರ್ಧಾರಕ್ಕೆ ರಿಲಯನ್ಸ್ ಹಾಗೂ ಎಸ್ಸಾರ್ ಕಂಪನಿಗಳಿಂದಲೂ ಸಹಮತ.

|
Google Oneindia Kannada News

ನವದೆಹಲಿ, ಜೂನ್ 16: ಪ್ರತಿ ದಿನದ ಮಾರುಕಟ್ಟೆ ದರದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಪರಿಷ್ಕರಣೆ ಪದ್ಧತಿ ಇದೇ ತಿಂಗಳ 16ರಿಂದ ಜಾರಿಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (ಒಎಂಸಿ) ದಿನದ ಆಧಾರದಲ್ಲಿ ತೈಲ ಬೆಲೆ ಪರಿಷ್ಕರಣೆಗೆ ಒಲವು ತೋರಿದ್ದವು. ಈ ಸುದ್ದಿ ಕೆಲವು ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ, ಇದಕ್ಕೆ ದಿನಾಂಕ ನಿಗದಿಯಾಗಿರಲಿಲ್ಲ.[ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲು ಚಿಂತನೆ]

Diesel, petrol prices to change daily from June 16; dealers raise concerns

ಇದೀಗ, ದಿನಾಂಕ ನಿಗದಿಯಾಗಿದ್ದು ಜೂನ್ 16ರಿಂದ ಆ ಪದ್ಧತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಮೇ 1ರಿಂದ ಪಾಂಡಿಚ್ಚೇರಿ, ಚಂಡೀಗಢ, ಜೆಮ್ಷೆಡ್ ಪುರ, ಉದಯ್ ಪುರ ಹಾಗೂ ವಿಶಾಖಪಟ್ಟಣಂನಲ್ಲಿ ಈ ಹೊಸ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾಗಿದ್ದು ಜೂ. 16ರಿಂದ ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ತೈಲ ಕಂಪನಿಗಳು ಹೇಳಿವೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಈ ನಿರ್ಧಾರಕ್ಕೆ ಇದೀಗ ರಿಲಯನ್ಸ್ ಹಾಗೂ ಎಸ್ಸಾರ ಕಂಪನಿಗಳೂ ಸೈ ಎಂದಿದ್ದು, ಅವೂ ಸಹ ದಿನದ ಮಾರುಕಟ್ಟೆ ಆಧಾರದಲ್ಲಿ ತೈಲ ಬೆಲೆಯನ್ನು ಪರಿಷ್ಕರಿಸಲು ಮುಂದಾಗಿವೆ.

English summary
State-run oil marketing companies (OMCs) have decided to roll out the daily revision of fuel prices nationally from the second fortnight of June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X