ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕಾಲಿರಿಸಿದ ಡ್ಯಾನೀಶ್ ಯೂರ್ನಿವಸಲ್ ರೋಬೋಟ್ಸ್

By Mahesh
|
Google Oneindia Kannada News

ಭಾರತ, ಫೆ. 19: ಡ್ಯಾನಿಶ್ ರೋಬೋಟ್ ಉತ್ಪಾದಕ ಸಂಸ್ಥೆ ಯೂನಿವರ್ಸಲ್ ರೋಬೋಟ್ಸ್ ರೂಪಿಸಿದ ಸಹಯೋಗಿ ರೋಬೋಟ್ ಗಳನ್ನು ಭಾರತಕ್ಕೆ ಪರಿಚಯಿಸಲಾಗಿದೆ. ಡ್ಯಾನಿಶ್ ರಾಯಭಾರಿ ಪೀಟರ್ ತಕ್ಸೋಯಿ-ಜೆನ್ಸೆನ್ ನವದೆಹಲಿಯ ಲಿ ಮೆರಿಡಿಯನ್ ನಲ್ಲಿ ಉದ್ಘಾಟಿಸಿದರು.

ಮಾನವ-ರೋಬೋಟ್ ಸಹಯೋಗದ (ಕೋಬೋಟ್ಸ್ ಎಂದು ಕರೆಯಲಾಗಿದೆ) ಸದ್ಯದ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಮಾನವರ ಜತೆಗೆ ಕೆಲಸ ಮಾಡುತ್ತಾ ಅವರಿಗೆ ವಿವಿಧ ಕೆಲಸಗಳಲ್ಲಿ ಇದು ಸಹಾಯ ಮಾಡಲಿದೆ. ಕೋಬೋಟ್ಸ್ ಪುನರಾವರ್ತಿತ ಮತ್ತು ಅಸುರಕ್ಷಿತ ಪ್ರಕ್ರಿಯೆಗಳನ್ನು ಸ್ವಯಂಚಾಲಿತವಾಗಿ ಮಾಡುತ್ತದೆ ಮತ್ತು ಉತ್ಪಾದಕತೆ ಹಾಗೂ ದಕ್ಷತೆ ಹೆಚ್ಚಿಸುವುದರ ಜತೆ ಕೆಲಸದ ವಾತಾವರಣವನ್ನು ಸುರಕ್ಷಿತವಾಗಿಸುತ್ತದೆ.

ಈ ಅನುಕೂಲಗಳಿಂದಾಗಿ, ಸಣ್ಣ ಹಾಗೂ ಮಧ್ಯಮ ಗಾತ್ರ ಉದ್ಯಮಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಎಂಐಟಿ ಸಂಶೋಧಕರು ಬಿಎಂಟಬ್ಲೂೃ ಫ್ಯಾಕ್ಟರಿಯಲ್ಲಿ ಮಾನವ-ಯಂತ್ರ ಅಧ್ಯಯನ ನಡೆಸಿದಾಗ ಮಾನವರು ಮತ್ತು ರೋಬೋಟ್‍ಗಳ ಸಹಯೋಗದಿಂದ ಉತ್ಪಾದಕತೆ ಶೇ.85ರಷ್ಟು ಹೆಚ್ಚಾಗಿದೆ ಎಂದು ಕಂಡು ಬಂದಿದೆ.

Denmark's Universal Robots enters India

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೂ ರೊಬೋಟ್ ತಂತ್ರಜ್ಞಾನ ಲಭ್ಯವಾಗಿಸುವ ಉದ್ದೇಶದಿಂದ, ಯೂನಿವರ್ಸಲ್ ರೋಬೋಟ್ ಸರಳ, ಫ್ಲೆಕ್ಸಿಬಲ್ ಹಾಗೂ ಕೈಗೆಟುಕುವ ರೀತಿಯಲ್ಲಿ ರೋಬೋಟ್ ಆರ್ಮ್ ಯುಆರ್3, ಯುಆರ್5 ಮತ್ತು ಯುಆರ್10 ನಿರ್ಮಿಸಲಾಗಿದೆ. ಭಾರ ಹೊರುವ ಸಾಮಥ್ರ್ಯವನ್ನು ಕಿಲೋಗಳಲ್ಲಿ ಇದರ ಹೆಸರು ಸೂಚಿಸುತ್ತದೆ.

ಈವರೆಗೆ ಸುಮಾರು 7000 ಸಹಯೋಗಿ ರೊಬೋಟ್ ಗಳು ಮಾರಾಟಗೊಂಡಿದ್ದು, ಎಂಐಟಿ ಟೆಕ್ನಾಲಜಿ ರಿವ್ಯೂ 2015ರ 50 ಸ್ಮಾರ್ಟೆಸ್ಟ್ ಕಂಪನಿಗಳ ಪಟ್ಟಿಯಲ್ಲಿ 25ನೇ ಸ್ಥಾನ ಪಡೆದುಕೊಂಡಿದೆ. ಔದ್ಯಮಿಕ ರೋಬೋಟ್‍ಗಳು ಉದ್ಯೋಗಿಗಳ ಜತೆ ಕೆಲಸ ಮಾಡುವ ರೀತಿಯಲ್ಲಿ ಕ್ರಾಂತಿ ಯುನಿವರ್ಸಲ್ ರೊಬೋಟ್ ಗಳು ಕ್ರಾಂತಿ ಮಾಡಿವೆ.

ಯೂನಿವರ್ಸಲ್ ರೋಬೋಟ್ಸ್ ಬಗ್ಗೆ: ಯೂನಿವರ್ಸಲ್ ರೋಬೋಟ್ಸ್ ಉದ್ಯಮದ ಎಲ್ಲ ಹಂತಗಳಿಗೂ ರೋಬೋಟ್ ಟೆಕ್ನಾಲಜಿಯನ್ನು ಅಳವಡಿಸುತ್ತದೆ. ಡಿಸೆಂಬರ್ 2008ರಲ್ಲಿ ಮೊದಲ ಬಾರಿಗೆ ಯುಆರ್ ರೋಬೋಟ್ ಪರಿಚಯಿಸಿದಂದಿನಿಂದಲೂ, ವಿಶ್ವಾದ್ಯಂತ 50 ದೇಶಗಳಲ್ಲಿ 300ಕ್ಕೂ ಹೆಚ್ಚು ವಿತರಕರ ಜಾಲದ ಮೂಲಕ ನಮ್ಮ ಬಳಕೆದಾರರ ಸ್ನೇಹಿ ರೋಬೋಟ್‍ಗಳನ್ನು ಕಂಪನಿಯು ಗಮನಾರ್ಹ ಅಭಿವೃದ್ಧಿ ಕಂಡಿದೆ.

ಬಳಕೆದಾರರ ಸ್ನೇಹಿ, ಕೈಗೆಟುಕಬಹುದಾದ ರೋಬೋಟ್‍ಗಳನ್ನು ಯೂನಿವರ್ಸಲ್ ರೋಬೋಟ್ಸ್ ಒದಗಿಸುತ್ತಿದ್ದು, ಇವುಗಳು ಈ ಹಿಂದೆ ಮಾರುಕಟ್ಟೆಯಲ್ಲಿ ಅತ್ಯಂತ ಸಂಕೀರ್ಣ ಹಾಗೂ ವೆಚ್ಚದಾಯಕ ಎಂದು ಪರಿಗಣಿಸಲ್ಪಟ್ಟಿತ್ತು. ಕಂಪನಿಯು ಡೆನ್ಮಾರ್ಕ್ ನ ಒಡೆನ್ಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇಲ್ಲಿ ಎಲ್ಲ ಅಭಿವೃದ್ಧಿ ಮತ್ತು ಉತ್ಪಾದನೆ ಚಟುವಟಿಕೆ ನಡೆಯುತ್ತದೆ. ಭಾರತದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಯೂನಿವರ್ಸಲ್ ರೋಬೋಟ್ಸ್ ವೆಬ್‍ಸೈಟ್ ಸಂಪರ್ಕಿಸಿ - www.universal-robots.com

English summary
Danish robot manufacturer Universal Robots launched its operations in India on Thursday. Its collaborative robots (co-bots) range, the company said, had already seen application in the Indian auto and auto components sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X