ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿ ಕೊನೆ ದಿನಾಂಕ ವಿಸ್ತರಣೆ

By Mahesh
|
Google Oneindia Kannada News

ನವದೆಹಲಿ, ಅ.01: ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ 'ಐಟಿ- ರಿಟರ್ನ್ಸ್' ಪ್ರಕ್ರಿಯೆಯನ್ನು ವಿತ್ತ ಸಚಿವಾಲಯ ಇನ್ನಷ್ಟು ಸರಳಗೊಳಿಸಿದ ಬೆನ್ನಲ್ಲೇ ಮತ್ತೊಮ್ಮೆ ಐಟಿ ರಿಟರ್ನ್ಸ್ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಐಟಿಆರ್ ಅರ್ಜಿಗಳನ್ನು ಈಗ ಮೂರು ಪುಟಕ್ಕೆ ಇಳಿಸಲಾಗಿದ್ದು, ನೂತನ ಆದಾಯ ತೆರಿಗೆ ರಿಟರ್ನ್ ಫಾರಂಗಳನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 30ರಂದು ಐಟಿ ರಿಟರ್ನ್ಸ್ ಕೊನೆ ದಿನಾಂಕವಾಗಿತ್ತು. ಈಗ ಅರ್ಜಿ ಪಾವತಿ ಕೊನೆ ದಿನಾಂಕವನ್ನು ಅಕ್ಟೋಬರ್ 31ರ ತನಕ ವಿಸ್ತರಿಸಲಾಗಿದೆ. [ಆನ್ ಲೈನ್ ನಲ್ಲಿ ತೆರಿಗೆ ಕಟ್ಟುವುದು ಹೇಗೆ?]

ಐಟಿ ಕಾಯ್ದೆ 44ಎಬಿ ಅಡಿಯಲ್ಲಿ ಬರುವ ವಿಶೇಷ ಚಾರ್ಟೆಡ್ ಅಕೌಂಟೆಟ್ ರಿಂದ ಆಡಿಟ್ ಮಾಡಿಸಿಕೊಳ್ಳುವ ಖಾತೆಯುಳ್ಳವರು ಹೊಸ ದಿನಾಂಕದಂತೆ ತೆರಿಗೆ ಪಾವತಿಸಬಹುದಾಗಿದೆ.

Deadline For E-Filing Audit Reports Of Some Taxpayers Extended

ಸಾಮಾನ್ಯವಾಗಿ ಸಂಬಳದಾರರು, ಬಿಸಿನೆಸ್ ಹಾಗೂ ವೃತ್ತಿಪರ ಆದಾಯ ಇಲ್ಲದ ವ್ಯಕ್ತಿಗಳು ಐಟಿಆರ್ 1 ಅಥವಾ ಐಟಿಆರ್ 2 ಬಳಸಿಕೊಂಡು ಪ್ರತಿ ವರ್ಷ ಜು.31 ರೊಳಗೆ ಆದಾಯ ತೆರಿಗೆ ಪಾವತಿ ಸಲ್ಲಿಸಬೇಕಾಗುತ್ತದೆ. [ಸರಳವಾಗಿ ತೆರಿಗೆ ಪಾವತಿ ಮಾಡುವುದು ಹೇಗೆ?]

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಸಹ ಹೆಚ್ಚಿದೆ. ["ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ, ತೆರಿಗೆ ಉಳಿಸಿ"]

ಎಲ್ಲಕ್ಕಿಂತ ಮುಖ್ಯವಾಗಿ ನಗದು ಬಳಕೆಗಿಂತ ಕಾರ್ಡ್ ಬಳಕೆ ಹೆಚ್ಚಿಸಿದರೆ ಆದಾಯ ತೆರಿಗೆ ರಿಲೀಫ್ ಸಿಗಲಿದೆ ಎಂಬುದು ಎಲ್ಲರ ಕಣ್ಣರಳಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7.98 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿಯನ್ನು ವಿತ್ತ ಸಚಿವಾಲಯ ಹೊಂದಿದೆ.

English summary
Government today extended the deadline for e-filing of income returns and audit reports for a special category of taxpayers, assessed under section 44AB of the Income Tax Act, by a month to October 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X