ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಟ್ಯೂಬ್ ಗೆ ಸೆಡ್ಡು ಹೊಡೆಯಲು ಫೇಸ್ಬುಕ್ ನಿಂದ 'ವಾಚ್'

By Sachhidananda Acharya
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಗೂಗಲ್ ಮಾಲಿಕತ್ವದ ವಿಡಿಯೋ ತಾಣ ಯೂಟ್ಯೂಬ್ ಗೆ ಸಡ್ಡು ಹೊಡೆಯಲು ಫೇಸ್ಬುಕ್ ಸಜ್ಜಾಗಿದೆ. ಇದಕ್ಕಾಗಿ 'ವಾಚ್' (Watch) ಎಂಬ ವೀಡಿಯೋ ಪ್ಲಾಟ್ ಫಾರಂನ್ನು ಫೇಸ್ಬುಕ್ ಬಿಡುಗಡೆ ಮಾಡಲಿದೆ.

ಅಮೆರಿಕಾದಲ್ಲಿ ಕಳೆದ ವರ್ಷ ವಿಡಿಯೋ ಟ್ಯಾಬ್ ಆಯ್ಕೆಯನ್ನು ಫೇಸ್ಬುಕ್ ತನ್ನ ಬಳಕೆದಾರರಿಗೆ ಬಿಡುಗಡೆ ಮಾಡಿತ್ತು. ಈ ಆಯ್ಕೆ ಮೂಲಕ ಫೇಸ್ಬುಕ್ ಬಳಕೆದಾರರು ನ್ಯೂಸ್ ಫೀಡ್ ನಂತೆ ನೇರವಾಗಿ ವಿಡಿಯೋಗಳನ್ನು ನೋಡಬಹುದಾಗಿತ್ತು.

Competitor to YouTube, Facebook launches 'Watch'

ಇದೀಗ "ಇದೇ ಆಯ್ಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ, ಸರಳವಾಗಿ 'ವಾಚ್' ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದೇವೆ. ಇದು ಮೊಬೈಲ್, ಡೆಸ್ಕ್ ಟಾಪ್, ಟ್ಯಾಬ್ಲೆಟ್ ಎಲ್ಲದರಲ್ಲೂ ಲಭ್ಯವಾಗಲಿದೆ," ಎಂದು ಫೇಸ್ಬುಕ್ ಪ್ರೊಡಕ್ಟ್ ವಿಭಾಗದ ನಿರ್ದೇಶಕ ಡೇನಿಯಲ್ ಡಂಕರ್ ಬರೆದುಕೊಂಡಿದ್ದಾರೆ.

ಇಲ್ಲಿ ಲೈವ್, ಎಪಿಸೋಡ್, ರೆಕಾರ್ಡಿಂಗ್ ಶೋಗಳು ಸೇರಿದಂತೆ ಯೂಟ್ಯೂಬ್ ನಲ್ಲಿರುವ ಎಲ್ಲಾ ಆಯ್ಕೆಗಳು ಇರಲಿವೆ. ಜತೆಗೆ ಯೂಟ್ಯೂಬ್ ಚಾನಲ್, ವಾಚ್ ಲಿಸ್ಟ್ ನಂಥ ಆಯ್ಕೆಗಳು ಇರಲಿವೆ.

Competitor to YouTube, Facebook launches 'Watch'

ಯೂಟ್ಯೂಬ್ ಗ್ರಾಹಕರಿಗೆ ಸಿಗುವ ಅನುಭವ ಮತ್ತು ಪ್ರಸಾರ ಮಾಡುವ ಸಂಸ್ಥೆಗಳಿಗೆ ಇರುವ ಔದ್ಯಮಿಕ ಻ಅವಕಾಶಗಳನ್ನು ಫೇಸ್ಬುಕ್ ನಲ್ಲಿಯೂ ಸೃಷ್ಟಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಆರಂಭದಲ್ಲಿ 'ವಾಚ್' ಅಮೆರಿಕಾದ ಸೀಮಿತ ಪೇಸ್ಬುಕ್ ಬಳಕೆದಾರರಿಗೆ ಲಭ್ಯವಾಗಲಿದೆ, ಅಲ್ಲಿಯ ಫೇಸ್ಬುಕ್ ಬಳಕೆದಾರರ ಻ಅಭಿಪ್ರಾಯಗಳನ್ನು ನೋಡಿಕೊಂಡು ಇದನ್ನು ನಾವು ವಿಶ್ವದಾದ್ಯಂತ ವಿಸ್ತರಿಸಲಿದ್ದೇವೆ ಎಂದು ಡೇನಿಯಲ್ ಡಂಕರ್ ಹೇಳಿದ್ದಾರೆ.

English summary
The social media giant Facebook wants to launch 'Watch' in an apparent bid to take on Google owned YouTube. 'Watch' is a redesigned video platform for creators and publishers in Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X