ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಕಾಲ್ ಸೆಂಟರ್ ಜೂನ್ 25ರಿಂದ ಆರಂಭ

|
Google Oneindia Kannada News

ನವದೆಹಲಿ, ಜೂನ್ 22: ಜಿಎಸ್ ಟಿಗೆ ಸಂಬಂಧಿಸಿದ ಹಾಗೆ ತೆರಿಗೆ ಪಾವತಿದಾರರು ಹಾಗೂ ತೆರಿಗೆ ಅಧಿಕಾರಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಭಾನುವಾರದಿಂದ ಎರಡು ಕಾಲ್ ಸೆಂಟರ್ ಆರಂಭವಾಗಲಿದೆ. ಜಿಎಸ್ ಟಿ ನೆಟ್ ವರ್ಕ್ ಎಂಬ ಐಟಿ ಕಂಪೆನಿಯು ಮಾಹಿತಿ ತಂತ್ರಜ್ಞಾನದ ನೆರವು ನೀಡಲಿದೆ.

ಜುಲೈ ಒಂದರಿಂದ ಜಿಎಸ್ ಟಿ ಜಾರಿಗೆ ಬರಲಿದೆ. ಆಗ ಜಿಎಸ್ ಟಿ ನೆಟ್ ವರ್ಕ್ ಪ್ರಮುಖ ಪಾತ್ರ ವಹಿಸಲಿದೆ. ಏಕೆಂದರೆ ರಸೀದಿಗಳು, ಕಂಪೆನಿಗಳ ವ್ಯವಹಾರದ ಮಾಹಿತಿಗಳನ್ನು ನಿರ್ವಹಿಸಬೇಕಾಗುತ್ತದೆ. ಅಂದಹಾಗೆ ಕಾಲ್ ಸೆಂಟರ್ ಆರಂಭದ ವಿಚಾರದಲ್ಲಿ ಈ ಕಂಪೆನಿಗೆ ಇನ್ಫೋಸಿಸ್ ಹಾಗೂ ಟೆಕ್ ಮಹೀಂದ್ರಾ ಜತೆ ಪಾಲುದಾರಿಕೆ ಇದೆ.

ಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆ

ಸೇರ್ಪಡೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ತೆರಿಗೆದಾರರು ಕಾಲ್ ಸೆಂಟರ್ ಸಂಖ್ಯೆ 0120-4888999ಗೆ ಕರೆ ಮಾಡಬಹುದು. ಸದ್ಯಕ್ಕೆ ಕಾಲ್ ಸೆಂಟರ್ ನಲ್ಲಿ ಇನ್ನೂರು ಮಂದಿ ಕೆಲಸ ಮಾಡಲಿದ್ದಾರೆ. ಆ ಸಂಖ್ಯೆಯನ್ನು ನಾನೂರಕ್ಕೆ ಏರಿಸುವ ಗುರಿ ಇದೆ.

GST

ಹಲವು ತೆರಿಗೆ ಪಾವತಿದಾರರಿಗೆ ಸಹಾಯದ ಅಗತ್ಯ ಇರುವುದರಿಂದ ಕಾಲ್ ಸೆಂಟರ್ ಜೂನ್ ಇಪ್ಪತ್ತೈದರಿಂದ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ. ಆ ಮೂಲಕ ತೆರಿಗೆದಾರರ ನೋಂದಣಿ ಸಲೀಸಾಗಿ ಆಗಲು ಅನುಕೂಲ ಆಗುತ್ತದೆ ಎಂದು ಜಿಎಸ್ ಟಿಎನ್ ಹೇಳಿಕೆಯಲ್ಲಿ ತಿಳಿಸಿದೆ.

ಜಿಎಸ್ ಟಿಗೆ ಮುನ್ನ ಸ್ಟಾಕ್ ಕ್ಲಿಯರೆನ್ಸ್, ಸಿಕ್ಕಾಪಟ್ಟೆ ಡಿಸ್ಕೌಂಟ್ಜಿಎಸ್ ಟಿಗೆ ಮುನ್ನ ಸ್ಟಾಕ್ ಕ್ಲಿಯರೆನ್ಸ್, ಸಿಕ್ಕಾಪಟ್ಟೆ ಡಿಸ್ಕೌಂಟ್

ಪ್ರತಿ ತಿಂಗಳು 2.6 ಬಿಲಿಯನ್ ವ್ಯವಹಾರಗಳನ್ನು ನಿರ್ವಹಿಸುವಷ್ಟರ ಮಟ್ಟಿಗೆ ಜಿಎಸ್ ಟಿಎನ್ ಪೋರ್ಟಲ್ ಸಿದ್ಧವಾಗಿದೆ. ಇನ್ನು ಕೇಂದ್ರ ಹಾಗೂ ರಾಜ್ಯ ತೆರಿಗೆ ಅಧಿಕಾರಿಗಳಿಗೆ ನೆರವು ನೀಡಲು ಮತ್ತೊಂದು ಕಾಲ್ ಸೆಂಟರ್ ಆರಂಭಿಸಿದೆ. ಅದರ ಸಂಖ್ಯೆ 0124-4479900 ಇದೆ.

English summary
GST Network, the company providing IT backbone for the GST, will launch two call centres on Sunday to handle queries from taxpayers and tax officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X