ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಸಲ್ಲಿಕೆದಾರರು ಇದನ್ನು ಓದಲೇಬೇಕು, ಸಿಎಗಳು ಕೂಡ!

|
Google Oneindia Kannada News

ನವದೆಹಲಿ, ನವೆಂಬರ್, 27: ಐಟಿ ರಿಟರ್ನ್ಸ್‌ ಸಲ್ಲಿಕೆ ಇನ್ನು ಮುಂದೆ ಮತ್ತಷ್ಟು ಸುಲಭವಾಗಲಿದೆ. ಆದಾಯ ತೆರಿಗೆ ಲೆಕ್ಕಪತ್ರಗಳನ್ನು (ರಿಟರ್ನ್ಸ್‌) ಸಲ್ಲಿಕೆ ಮಾಡಲು ಮೊಬೈಲ್ ಅಪ್ಲಿಕೇಶನ್ ವೊಂದನ್ನು ಬಿಡುಗಡೆ ಮಾಡಲಾಗಿದೆ.

ಐಟಿ ಲೆಕ್ಕ ಪತ್ರ ಸಲ್ಲಿಕೆಯ ಅಂತರ್ಜಾಲ ತಾಣವಾಗಿರುವ 'ಕ್ಲಿಯರ್‌ ಟ್ಯಾಕ್ಸ್‌', ಈಗ 'ಟ್ಯಾಕ್ಸ್‌ ಕ್ಲೌಡ್‌' ಹೆಸರಿನ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಚಾರ್ಟರ್ಡ್‌ ಅಕೌಂಟಂಟ್‌ ಸಂಸ್ಥೆಗಳಿಗೆ ಈ ಅಪ್ಲಿಕೇಶನ್ ನೆರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗಿದೆ. [ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗಳು ಯಾವವು?]

ClearTax Simplifies Tax Returns With TaxCloud, New application

ಲೆಕ್ಕ ತಪಾಸಣೆ ಮಾಡುವವರು ಇದರ ನೆರವಿನಿಂದ ತಮ್ಮ ಗ್ರಾಹಕರ ಲೆಕ್ಕ ತಪಾಸಣೆ ಸಲ್ಲಿಕೆಯ ವಿವರಗಳನ್ನು ಯಾವುದೇ ಸಮಯದಲ್ಲಿ ಪಡೆಯಬಹುದಾಗಿದೆ. ಟ್ಯಾಕ್ಸ್‌ ಕ್ಲೌಡ್‌ ಮೊಬೈಲ್‌ ಅಪ್ಲಿಕೇಶನ್ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ನಿಂದ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.[ಅಂಗೈನಲ್ಲಿ ಆನ್ ಲೈನ್ ಶಾಪಿಂಗ್ ಮಾಡುವವರಿಗೆ 6 ಟಿಪ್ಸ್]

ಗ್ರಾಹಕರ ಲೆಕ್ಕ ಪತ್ರ ತಪಾಸಣೆ ಮಾಡುವವರಿಗೆಈ ಅಪ್ಲಿಕೇಶನ್ ಅತ್ಯುತ್ತಮವಾಗಲಿದ್ದು ಕ್ಷಣ ಮಾತ್ರದಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. 'ಕ್ಲಿಯರ್‌ ಟ್ಯಾಕ್ಸ್‌' ಪ್ರತಿದಿನ ಹೊಸ ಬಗೆಯ ಯೋಚನೆಗಳನ್ನು ಮಾಡುತ್ತಿದ್ದು ಗ್ರಾಹಕರ ಮತ್ತು ಲೆಕ್ಕ ತಪಾಸಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಸಿಇಒ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.

English summary
Now IT returns is very easy. In a move that could significantly ease the process of e-filing tax returns for enterprises, ClearTax, India's leading Income Tax Returns e-filing website, recently launched the TaxCloud mobile application​for CA firms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X