ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಲೀನಕ್ಕೆ ಕೇಂದ್ರ ಅಸ್ತು

ಶತಮಾನೋತ್ಸವ ಕಂಡಿದ್ದ ಕರ್ನಾಟಕದ ಹೆಮ್ಮೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ ಬಿಎಂ) ತನ್ನ ಹೆಸರನ್ನು ಕಳೆದುಕೊಳ್ಳಲಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 15: ಭಾರತೀಯ ಸ್ಟೇಟ್ ಬ್ಯಾಂಕ್ ನ (ಎಸ್ ಬಿಐ) ಐದು ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮಂಗಳವಾರ ರಾತ್ರಿ ನಡೆದ ಸಂಪುಟ ಸಭೆಯಲ್ಲಿಈ ವಿಲೀನ ಯೋಜನೆಗೆ ಹಸಿರು ನಿಶಾನೆ ನೀಡಲಾಯಿತು.

ಅದರಂತೆ, ಎಸ್ ಬಿಐನ ಅದು ಸಹವರ್ತಿ ಬ್ಯಾಂಕುಗಳಾದ - ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಸ್ಟೇಟ್ ಬ್ಯಾಂಕ್ ಆಫ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹಾಗೂ ಸ್ಟೇಟ್ ಬ್ಯಾಂಕ್ ಪಟಿಯಾಲಾ, ಶೀಘ್ರದಲ್ಲೇ ಎಸ್ ಬಿಐನೊಂದಿಗೆ ವಿಲೀನಗೊಳ್ಳಲಿವೆ. ಆದರೆ, ಎಸ್ ಬಿಐನ ಮತ್ತೊಂದು ಸಹವರ್ತಿ ಬ್ಯಾಂಕ್ ಆದ ಭಾರತೀಯ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸದಿರಲು ನಿರ್ಧರಿಸಲಾಗಿದೆ.

Central Government clears merger of 5 associate banks with state bank of India

ಮಂಗಳವಾರದ ಸಚಿವ ಸಂಪುಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ, ''ಸಹವರ್ತಿ ಬ್ಯಾಂಕುಗಳ ವಿಲೀನದಿಂದಾಗಿ ಎಸ್ ಬಿಐ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮುವುದಲ್ಲದೆ, ಈ ಎಲ್ಲಾ ಬ್ಯಾಂಕುಗಳಲ್ಲಿ ಪ್ರತಿ ವರ್ಷ ಆಗುತ್ತಿದ್ದ ವ್ಯಾವಹಾರಿಕ ಖರ್ಚು ಅಧಿಕ ಮಟ್ಟದಲ್ಲಿ ಕಡಿಮೆಯಾಗಲಿದೆ'' ಎಂದಿದ್ದಾರೆ.

ವಿಲೀನದಿಂದಾಗಿ, ಮೊದಲ ಆರ್ಥಿಕ ವರ್ಷದಲ್ಲಿ 1,000 ಕೋಟಿ ರು. ನಷ್ಟು ಉಳಿತಾಯವಾಗಲಿದೆ ಎಂದು ಜೇಟ್ಲಿ ತಿಳಿಸಿದರು.

English summary
The Cabinet of Central Government of India has approved the merger of five associate banks with the State Bank of India (SBI). The merger does not include Bharatiya Mahila Bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X