ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬರಿಗೈ ಅರಸ' ಮಲ್ಯ ಕಂಪನಿ ಮೇಲೆ ಸಿಬಿಐ ದಾಳಿ ಏಕೆ?

ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳಿಂದ ಸರಿ ಸುಮಾರು 9 ಸಾವಿರ ಕೋಟಿ ರು ಗೂ ಅಧಿಕ ಸಾಲ ಮಾಡಿಕೊಂಡು ಉದ್ದೇಶಿತ ಸುಸ್ತಿದಾರನಾಗಿ ದೇಶ ತೊರೆದಿರುವ ವಿಜಯ್ ಮಲ್ಯ ಅವರ ಯುಬಿ ಸಮೂಹ ಸಂಸ್ಥೆ ಮೇಲೆ ಸಿಬಿಐ ದಾಳಿ ನಡೆಸಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 23: ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳಿಂದ ಸರಿ ಸುಮಾರು 9 ಸಾವಿರ ಕೋಟಿ ರು ಗೂ ಅಧಿಕ ಸಾಲ ಮಾಡಿಕೊಂಡು ಉದ್ದೇಶಿತ ಸುಸ್ತಿದಾರನಾಗಿ ಉದ್ಯಮಿ ವಿಜಯ್ ಮಲ್ಯ ಅವರು ದೇಶ ತೊರೆದಿರುವುದು ಎಲ್ಲರಿಗೂ ತಿಳಿದಿದೆ. ಖಾಲಿ ಕೈ ಕುಬೇರ ಮಲ್ಯ ಒಡೆತನದ ಯುಬಿ ಸಮೂಹ ಸಂಸ್ಥೆ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿದ್ದು ಕುತೂಹಲಕಾರಿಯಾಗಿದೆ.['ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಂಚಿರುವ ಮಲ್ಯ']

ಸೋಮವಾರ ಬೆಳಗ್ಗೆಯಿಂದ ಯುಬಿ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದು ಯಾವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದಿರುವ ದಾಳಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.[ಮಲ್ಯ ಅವರ ಸಾಲಮನ್ನಾ ಪುಸ್ತಕಕ್ಕೆ ಸೀಮಿತ : ಜೇಟ್ಲಿ]

CBI raid at Vijay Mallya's UB group office, Bengaluru

ಆರ್ಥಿಕವಾಗಿ ದಿವಾಳಿಯಾಗಿರುವ ಮಲ್ಯ ಅವರು ಯುಬಿ ಸಮೂಹದ ಮುಖ್ಯಸ್ಥನ ಸ್ಥಾನ ತೊರೆದ ಬಳಿಕ ಸಿಕ್ಕ ಮೊತ್ತವನ್ನು ಏನು ಮಾಡಿದರು ಎಂಬ ಪ್ರಶ್ನೆ ಇತ್ತೀಚೆಗೆ ಎದ್ದಿತ್ತು. ಗುಟ್ಟಾಗಿ ಮಕ್ಕಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಂದಿತ್ತು. ಈ‌ ಹಿನ್ನೆಲೆ ಯುಬಿಸಿಟಿ ಬ್ಯಾಂಕ್ ಅಕೌಂಟ್ ‌ಗಳ ಮೇಲೆ ಸಿಬಿಐ ನಿಗಾವಹಿಸಿದ್ದು, ಸರ್ಚ್ ‌ ವಾರೆಂಟ್ ‌ಪಡೆದು ದಾಳಿ ನಡೆಸಿದೆ.

English summary
CBI officials today raided at Vijay Mallya's UB group office in Bengaluru and seized more than 12 documents and are investigating the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X