ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು. 1ರಿಂದ ಡಿಟಿಎಚ್, ಸಿನಿಮಾ ಟಿಕೆಟ್ ದರಗಳಲ್ಲಿ ಇಳಿಮುಖ

ಜಿಎಸ್ ಟಿ ಪರಿಣಾಮವಾಗಿ ಮನರಂಜನಾ ತೆರಿಗೆಯು ಶೇ. 28ಕ್ಕೆ ನಿಗದಿಗೊಳ್ಳುವುದರಿಂದ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ ಇತರ ತೆರಿಗೆಗಳು ರದ್ದಾಗಲಿರುವುದರಿಂದ ಡಿಟಿಎಚ್, ಕೇಬಲ್ ಹಾಗೂ ಸಿನಿಮಾ ಟಿಕೆಟ್ ದರಗಳು ಕಡಿಮೆಯಾಗಲಿವೆ.

|
Google Oneindia Kannada News

ಬೆಂಗಳೂರು, ಮೇ 23: ಜುಲೈ ತಿಂಗಳ ಮೊದಲ ದಿನದಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಿನ್ನೆಲೆಯಲ್ಲಿ ಕೆಲವು ವಸ್ತುಗಳ ದರ ಕಡಿಮೆಯಾಗಲಿವೆ ಎಂಬ ವಿಚಾರ ನಮಗೆಲ್ಲಾ ಗೊತ್ತಿದೆ.

ಈ ಕಡಿಮೆಯಾಗಲಿರುವ ಸೇವೆಗಳ ಪಟ್ಟಿಗೆ ಡಿಟಿಎಚ್ ಸೇವೆಗಳೂ ಸೇರ್ಪಡೆಗೊಳ್ಳಲಿವೆ ಎಂಬ ವಿಚಾರ ಈಗ ಡಿಟಿಎಚ್ ಸೇವೆಗಳನ್ನು ನೀಡುತ್ತಿರುವವರ ಪಾಲಿಗೆ ಖುಷಿ ತಂದಿದೆ. ಅಷ್ಟೇ ಅಲ್ಲ, ಸಿನಿಮಾ ಟಿಕೆಟ್ ಕೂಡ ಇನ್ನು ಕಡಿಮೆಯಾಗುವ ಸಂಭವವಿದೆ.

Cable, DTH, Cinema tickets rates cut down due to GST from July 1st

ಈಗಾಗಲೇ ನಮಗೆ ತಿಳಿದಿರುವಂತೆ, ಜಿಎಸ್ ಟಿ ಮೂಲಕ ದೇಶಾದ್ಯಂತ ಏಕ ರೂಪದ ತೆರಿಗೆ ವ್ಯವಸ್ಥೆ ಜಾರಿಗೊಳ್ಳಲಿರುವುದರಿಂದ ಮನರಂಜನಾ ತೆರಿಗೆ ಇನ್ನು ಶೇ. 28ರಷ್ಟು ಮಾತ್ರವೇ ಇರಲಿದೆ. ಇದಕ್ಕೂ ಮಿಗಿಲಾಗಿ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ವಿಧಿಸುತ್ತಿದ್ದ ಮನರಂಜನಾ ತೆರಿಗೆಗಳು ರದ್ದಾಗಲಿವೆ. ಹಾಗಾಗಿಯೇ, ಡಿಟಿಎಚ್ ಕೇಬಲ್ ಹಾಗೂ ಸಿನಿಮಾ ಥಿಯೇಟರ್ ಗಳಲ್ಲಿನ ಟಿಕೆಟ್ ಬೆಲೆ ಇಳಿಮುಖವಾಗಲಿವೆ.

English summary
As Good and Service tax will be implementing from July 1, 2017, it is said to be, the prices of DTH and Cinema ticket rate will get reduced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X