ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ

ಏಪ್ರಿಲ್ 1ರಿಂದ ಎರಡು ಲಕ್ಷ ಮೇಲ್ಪಟ್ಟು ಆಭರಣ ಖರೀದಿಯನ್ನು ನಗದು ಮೂಲಕ ಮಾಡಿದರೆ ಶೇ 1ರಷ್ಟು ತೆರಿಗೆ ನೀಡಬೇಕಾಗುತ್ತದೆ. ಈವರೆಗೆ 5 ಲಕ್ಷ ರುಪಾಯಿ ಮೇಲ್ಪಟ್ಟ ಖರೀದಿಗೆ ತೆರಿಗೆ ಹಾಕಲಾಗುತ್ತಿತ್ತು. ಅದನ್ನು ಎರಡು ಲಕ್ಷಕ್ಕೆ ಇಳಿಸಲಾಗಿದೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಫೆಬ್ರವರಿ 20: ಏಪ್ರಿಲ್ 1ರಿಂದ ಎರಡು ಲಕ್ಷ ಮೇಲ್ಪಟ್ಟ ಮೊತ್ತಕ್ಕೆ ನಗದು ನೀಡಿ, ಆಭರಣ ಖರೀದಿಸಿದರೆ ಶೇ 1ರಷ್ಟು ತೆರಿಗೆ ಬೀಳುತ್ತದೆ. ಈ ವರೆಗೆ ಐದು ಲಕ್ಷವಿದ್ದ ಮಿತಿಯನ್ನು ಎರಡು ಲಕ್ಷಕ್ಕೆ ಇಳಿಸಲಾಗಿದೆ. ಚಿನ್ನವನ್ನು ಎಲ್ಲ ವಸ್ತುಗಳಂತೆ ಪರಿಗಣಿಸಿ, 2 ಲಕ್ಷ ರುಪಾಯಿ ಮೇಲಿನ ಖರೀದಿಗೆ ಶೇ 1ರಷ್ಟು (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ತೆರಿಗೆ ಹಾಕಲಾಗುತ್ತದೆ.

ಆರ್ಥಿಕ ಮಸೂದೆ 2017ರ ಅನ್ವಯ ಸದ್ಯದ 5 ಲಕ್ಷದ ಮಿತಿಯನ್ನು ತೆಗೆದುಹಾಕಲಾಗಿದೆ. ಮೂರು ಲಕ್ಷ ರುಪಾಯಿ ಮೇಲಿನ ನಗದು ಖರೀದಿಗೆ ಅಷ್ಟೇ ಮೊತ್ತದ ದಂಡ ಹಾಕಲು ಕೇಂದ್ರ ಬಜೆಟ್ ನಲ್ಲೇ ಪ್ರಸ್ತಾವ ಮಾಡಲಾಗಿತ್ತು. ಚಿನ್ನಕ್ಕೆ ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್ ಎಂದು ಪರಿಗಣಿಸಲು ಸಾಧ್ಯವಿರಲಿಲ್ಲ ಆದ್ದರಿಂದ ಇದೀಗ ಅದನ್ನೂ ಸಾಮಾನ್ಯ 'ಸರಕು' ಎಂಬಂತೆ ಪರಿಗಣಿಸಿ, ಶೇ 1ರಷ್ಟು ತೆರಿಗೆ ಹಾಕಲಾಗುತ್ತದೆ.[ಏಪ್ರಿಲ್ ನಿಂದ 3 ಲಕ್ಷ ರುಪಾಯಿ ಮೇಲಿನ ನಗದು ವ್ಯವಹಾರಕ್ಕೆ ಬ್ರೇಕ್!]

Buying jewellery for over Rs. 2 lakh in cash will attract 1% tax at source from April 1

ಆದರೆ, 2016-17ರ ಬಜೆಟ್ ನಲ್ಲೇ 2 ಲಕ್ಷ ರುಪಾಯಿ ಮೇಲ್ಪಟ್ಟ ಸರಕು ಹಾಗೂ ಸೇವೆಗೆ ನಗದು ಪಾವತಿಸಿದರೆ ಶೇ 1ರಷ್ಟನ್ನು ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್ ಎಂದು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಪ್ರಸ್ತಾವಿತ ಆರ್ಥಿಕ ಮಸೂದೆ 2017ಕ್ಕೆ ತಿದ್ದುಪಡಿ ತರುವ ಮೂಲಕ ಈವರೆಗೆ ಇದ್ದ ಆಭರಣ ಖರೀದಿಯ 5 ಲಕ್ಷದ ಮೇಲಿನ ಶೇ 1ರಷ್ಟು ತೆರಿಗೆಯನ್ನು ಎರಡು ಲಕ್ಷ ರುಪಾಯಿಗೆ ಇಳಿಕೆ ಮಾಡಲಾಗುವುದು.

English summary
Cash purchases of jewellery will attract 1 per cent TCS (tax collected at source) from April 1 if the amount exceeds Rs. 2 lakh, as against the current threshold of Rs. 5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X