ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಉದ್ವಿಗ್ನ: ಕಂಪೆನಿಗಳ 2.40 ಲಕ್ಷ ಕೋಟಿ ಬಂಡವಾಳ ಖಲ್ಲಾಸ್

|
Google Oneindia Kannada News

ಮುಂಬೈ, ಸೆಪ್ಟೆಂಬರ್ 30: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಗೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಬಂಡವಾಳದಲ್ಲಿ 2.40 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

ಗಡಿ ನಿಯಂತ್ರಣ ರೇಖೆ ಆಚೆಗೆ ಉಗ್ರರ ವಿರುಧ ಸರ್ಜಿಕಲ್ ಅಟ್ಯಾಕ್ ನಡೆಸಿದ ಬಗ್ಗೆ ಸರಕಾರದಿಂದ ಘೋಷಣೆಯಾದ ನಂತರ ಸೆನ್ಸೆಕ್ಸ್ 550 ಅಂಶ ಕುಸಿಯಿತು. ಇನ್ನು ನಿಫ್ಟಿ 153 ಅಂಶ ಕುಸಿತ ಕಂಡಿತು.[ಉಗ್ರರ ನೆಲೆ ಮೇಲೆ ದಾಳಿ: ಮುಂಬೈ ಸೂಚ್ಯಂಕ 500 ಅಂಶ ಬಿತ್ತು]

sensex

ನಿಫ್ಟಿ ಸೂಚ್ಯಂಕದಲ್ಲಿ ಒಳಗೊಂಡಿರುವ 46 ಷೇರುಗಳು ಕೆಂಪಾದವು. ಅದರಲ್ಲೂ ಬಿಎಚ್ ಇಎಲ್ ಕಂಪೆನಿಯು ಶೇ 7.51ರಷ್ಟು, ಅದಾನಿ ಶೇ 4.52, ಹಿಂಡಾಲ್ಕೊ ಶೇ 4.37, ಅರೊಬಿಂದೊ ಫಾರ್ಮಾ ಶೇ 4.30, ಬ್ಯಾಂಕ್ ಆಫ್ ಬರೋಡಾ ಶೇ 3.98ರಷ್ಟು ಕುಸಿತ ಕಂಡವು. ಇನ್ನು ಭಾರ್ತಿ ಇನ್ ಫ್ರಾಟೆಲ್, ಟಿಸಿಎಸ್, ಐಟಿಸಿ, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಒಎನ್ ಜಿಸಿ ಅಲ್ಪ ಪ್ರಮಾಣದ ಏರಿಕೆ ದಾಖಲಿಸಿದವು.

ಭಾರತ-ಪಾಕಿಸ್ತಾನ ಮಧ್ಯದ ಪರಿಸ್ಥಿತಿ ಬಿಗಡಾಯಿಸಿರುವುದರ ಜತೆಗೆ ಲಾಭದ ನಗದೀಕರಣ (ಪ್ರಾಫಿಟ್ ಬುಕಿಂಗ್) ಕೂಡ ಮಾರುಕಟ್ಟೆ ಮೇಲೆ ಪ್ರಭಾವ ಬೀರಿತು ಎಂದು ಮಾರುಕಟ್ಟೆ ತಜ್ಞರಾದ ಜಿ.ಚೊಕ್ಕಲಿಂಗಂ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೆಕ್ಟರ್ ಗಳ ಪ್ರಕಾರ ಹೇಳುವುದಾದರೆ ಬಿಎಸ್ ಇ ರಿಯಾಲ್ಟಿ ಇಂಡೆಕ್ಸ್, ಪವರ್ ಹಾಗೂ ಹೆಲ್ತ್ ಕೇರ್ ಇಂಡೆಕ್ಸ್ ಗಳು ಕುಸಿತ ಕಂಡಿವೆ.[ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]

ಆದರೆ, ವಿಶ್ವದ ಇತರೆ ಮಾರುಕಟ್ಟೆಗಳಾದ ಯುರೋಪ್, ಅಮೆರಿಕಾ, ಹ್ಯಾಂಗ್ ಸೆಂಗ್, ನಿಕಿ, ಶಾಂಘೈ ಮಾರುಕಟ್ಟೆಗಳು ಏರಿಕೆ ದಾಖಲಿಸಿವೆ.

English summary
BSE listed companies lost 2.40 lakh crore capital after Surgical attack on Pakistan by Indian army. Selling pressure is also there. So, investors should act vigilantly while buying shares, said by advisors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X