ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾಂಪ್ ಡ್ಯೂಟಿ ಇಳಿದರೆ ಖರೀದಿದಾರರಿಗೆ ಅನುಕೂಲ

By Rajendra
|
Google Oneindia Kannada News

ಬೆಂಗಳೂರು, ಅ.29: ಆಸ್ತಿ ನೋಂದಣಿಯ ಸ್ಟಾಂಪ್ ಡ್ಯೂಟಿ ಈಗಿರುವ ಶೇ.5ರಿಂದ ಶೇ.2-1ಕ್ಕೆ ಇಳಿದರೆ ಖರೀದಿದಾರರಿಗೆ ಅನುಕೂಲ ಎಂದು ಕ್ರೆಡಾಯ್, ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಪ್ರತಿಪಾದಿಸಿದ್ದಾರೆ.

"ಮಾರ್ಗದರ್ಶಿ ಮೌಲ್ಯದ ಲೆಕ್ಕಾಚಾರಕ್ಕೆ ವೈಜ್ಞಾನಿಕ ವಿಧಾನವನ್ನು ನಾವು ಪ್ರತಿಪಾದಿಸುತ್ತಾ ಬಂದಿದ್ದೇವೆ. ಸಾಮಾನ್ಯವಾಗಿ ಶೇ.70ರಷ್ಟು ಮಾರುಕಟ್ಟೆ ಮೌಲ್ಯದಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಥಂಬ್ ರೂಲ್‍ನಡಿ ಲೆಕ್ಕಾಚಾರ ಹಾಕಲಾಗುತ್ತದೆ. ಈ ಲೆಕ್ಕಾಚಾರದಲ್ಲೇ ಕೆಲವು ಅಸಮಂಜಸ ಸಂಗತಿಗಳಿವೆ. ಇದು ಕೃತಕ ಭ್ರಾಂತಿ ಹುಟ್ಟಿಸುತ್ತದೆ ಮತ್ತು ಹಾಗಾಗಿ ರಿಯಲ್ ಎಸ್ಟೇಲ್ ಮಾರುಕಟ್ಟೆಯಲ್ಲಿ ಹಣದುಬ್ಬರದ ಒಂದು ಟ್ರೆಂಡ್ ಇರುತ್ತದೆ.

Stamp Duty
ಮಾರ್ಗದರ್ಶಿ ದರವು ಯಾವತ್ತೂ ಬೆಲೆ ಪರಿಷ್ಕರಣೆಯನ್ನು ಪರಿಗಣಿಸುವುದೇ ಇಲ್ಲ. ಹಣದುಬ್ಬರದ ಟ್ರೆಂಡ್ ಮತ್ತು ಹೆಚ್ಚಿನ ಸ್ಟಾಂಪ್ ಡ್ಯೂಟಿ ಶುಲ್ಕ ಇದೆಲ್ಲದರ ಪರಿಣಾಮವಾಗಿ ಖರೀದಿದಾರರು ರಿಜಿಸ್ಟ್ರೇಶನ್ ಗೆ ಮುಂದೆ ಬರುವುದಿಲ್ಲ. ಹೆಚ್ಚುತ್ತಿರುವ ಮಾರ್ಗದರ್ಶಿ ಮೌಲ್ಯದೊಂದಿಗೆ ಅಪೇಕ್ಷಣೀಯ ಸಂಗತಿ ಎಂದರೆ, ಸದ್ಯ ಆಸ್ತಿ ಮೌಲ್ಯದ ಶೇ.5ರಷ್ಟಿರುವ ಸ್ಟಾಂಪ್ ಡ್ಯೂಟಿ ಶೇ.1-2ಕ್ಕೆ ಇಳಿಸಬೇಕು.

ಇದು ಖರೀದಿದಾರರಿಗೆ ಅವರ ವೆಚ್ಚ ತಗ್ಗುವುದರಿಂದ ಆಸ್ತಿ ನೋಂದಣಿಗೆ ಪ್ರೋತ್ಸಾಹಿಸುತ್ತದೆ. ಸ್ಟಾಂಪ್ ಡ್ಯೂಟಿಯು ನೀಡಲಾಗುವ ಸೇವೆ ಜತೆಗೆ ಪ್ರಸಕ್ತತೆ ಹೊಂದಿರಬೇಕು. ಸ್ಟಾಂಪ್ ಡ್ಯೂಟಿ ಸಮಂಜಸವಾಗಿದ್ದಲ್ಲಿ ಆಗ ಬಹು ವಹಿವಾಟುಗಳು ಕೂಡಾ ಸಾಧ್ಯವಾಗುತ್ತದೆ'' ಎಂದು ಸುರೇಶ್ ಹರಿ ಹೇಳಿದ್ದಾರೆ.

ಇನ್ನೊಂದು ಅಗತ್ಯವಾಗಿ ಸುಧಾರಣೆಯಾಗಬೇಕಾಗಿದ್ದೇನೆಂದರೆ, ಆಸ್ತಿಯ ಮೌಲ್ಯದೊಂದಿಗೆ ನೋಂದಣಿ ಶುಲ್ಕ ಜೋಡಿಸವುದನ್ನು ತಪ್ಪಿಸಬೇಕು. ನೋಂದಣಿ ಶುಲ್ಕವನ್ನು ಸಾಮಾನ್ಯವಾಗಿ ಡಾಕ್ಯುಮೆಂಟೇಶಶನ್ ಗಾಗಿ ವಿಧಿಸಲಾಗುತ್ತದೆ. ಇದು ಎಲ್ಲಾ ರೀತಿಯ ಆಸ್ತಿಯ ವಿಧ, ಮೌಲ್ಯ ಹಾಗೂ ಗಾತ್ರಕ್ಕೂ ಒಂದೇ ಆಗಿರುತ್ತದೆ. ಹಾಗಿದ್ದ ಮೇಲೆ ಯಾಕಾಗಿ ನೋಂದಣಿ ಶುಲ್ಕವನ್ನು ಆಸ್ತಿಯ ಮೌಲ್ಯದ ಶೇಕಡಾವಾರು ಲೆಕ್ಕಾಚಾರ ಹಾಕಲಾಗುತ್ತದೆ'' ಎಂದು ಸುರೇಶ್ ಹರಿ ಪ್ರಶ್ನಿಸಿದ್ದಾರೆ.

ಇದೇ ವೇಳೆ, ಮಾತನಾಡಿದ ಬ್ರಿಗೇಡ್ ಗ್ರೂಪ್ ನ ಮಾರಾಟ ಮತ್ತು ಮಾರಕಟ್ಟೆಯ ಉಪಾಧ್ಯಕ್ಷ ವಿಶ್ವ ಪ್ರತಾಪ್ ದೇಸು, "ಸರ್ಕಾರದಿಂದ ಈ ಬದಲಾವಣೆ ಅನಪೇಕ್ಷಿತವಾಗಿತ್ತು. ಕಳೆದ ವರ್ಷದ ಮಂದ ಪ್ರಗತಿಯಿಂದ ಮಾರುಕಟ್ಟೆ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹೊಸ ಸರ್ಕಾರ ತುಸು ಸಾಂತ್ವನ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಇದು ಇನ್ನಷ್ಟು ಪ್ರತಿಬಂಧಕ ಕಾರ್ಯವಾಗಿದೆ'' ಎಂದರು. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

English summary
What is desirable with increasing guidance value is bringing down stamp duty, which is currently at 5 per cent of property value, to 1-2 per cent. This will encourage buyers to register properties in time as their costs are down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X