ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಗೇಡ್ ಎರಡನೇ ತ್ರೈಮಾಸಿಕದಲ್ಲಿ ಶೇ.191 ಪ್ರಗತಿ

By Rajendra
|
Google Oneindia Kannada News

ಬೆಂಗಳೂರು, ನ.8: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದೈತ್ಯ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ 2014-15ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ.191ರಷ್ಟು ಪ್ರಗತಿ ಕಂಡಿದೆ. ಪ್ರಸ್ತುತ ವರ್ಷದ ಈ ಹಿಂದಿನ ತ್ರೈಮಾಸಿಕದಲ್ಲಿ ದಾಖಲಿಸಿದ್ದ 74 ದಶಲಕ್ಷ ರೂ. ಲಾಭವು ಈ ಬಾರಿ 215 ದಶಲಕ್ಷ ರೂ.ಗೆ ಏರಿದೆ. ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್‍ನ ನಿರ್ದೇಶಕರ ಮಂಡಳಿ ನವೆಂಬರ್ 4ರಂದು ಸಭೆ ಸೇರಿ 2014-15ರ 2ನೇ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಅಂಗೀಕರಿಸಿದೆ.

ಕಂಪನಿಯ ಕಾರ್ಯನಿರ್ವಹಣೆಯ ಬಗ್ಗೆ ಪ್ರತಿಕ್ರಿಯಿಸಿದ ಎಂ.ಆರ್.ಜೈಶಂಕರ್, ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಚಾಲ್ತಿಯಲ್ಲಿರುವ ಪ್ರಾಜೆಕ್ಟ್ ಗಳು ಹಾಗೂ ಹೊಸ ಪ್ರಾಜಕ್ಟ್ ಗಳ ಮಾರಾಟದ ಸಹಯೋಗದಿಂದ ಈ ತ್ರೈಮಾಸಿಕದಲ್ಲಿ ಆದಾಯ ಪರಿಗಣನೆಗೆ ಬಂದಿದ್ದು ಅದು ವಸತಿ ವಿಭಾಗದಲ್ಲಿ ಆದಾಯ ಪ್ರಗತಿಗೆ ಕೊಡುಗೆ ನೀಡಿದೆ ಎಂದರು.

Brigade Group q2 results
ಕೇಂದ್ರದಲ್ಲಿನ ಒಂದು ಸ್ಥಿರ ಸರ್ಕಾರ ಮತ್ತು ಸುಧಾರಿಸುತ್ತಿರುವ ಉದ್ಯಮ ವಾತಾವರಣವು ದೇಶದಲ್ಲಿ ಗ್ರಾಹಕರ ಭಾವನೆಯನ್ನು ಉದ್ದೀಪನಗೊಳಿಸಿದೆ. ಈ ತ್ರೈಮಾಸಿಕದಲ್ಲಿ ಮಹತ್ವದ ಪ್ರಗತಿಯ ವರದಿ ನೀಡಲು ನಾವು ಸಂತಸ ಪಡುತ್ತೇವೆ. ಕ್ಯು2 ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ ಪಾಲಿಗೆ ತುಂಬಾ ಉತ್ತಮವಾಗಿತ್ತು ಮತ್ತು ಕಂಪನಿಯು ಮುಂದಿನ 2 ತ್ರೈಮಾಸಿಕಗಳೊಳಗೆ 6 ದಶಲಕ್ಷ ಚದರ ಅಡಿಗಳಷ್ಟು ಯೋಜನೆಗಳ ಆರಂಭದ ಯೋಜನೆಯೊಂದಿಗೆ ತನ್ನ ಕಾರ್ಯನಿರ್ವಹಣೆಯ ಪ್ರದರ್ಶನದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

2014, ಸೆಪ್ಟೆಂಬರ್ 30ರಂದು ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ, ಕಂಪನಿಯು ಒಟ್ಟಾರೆ 3,292 ದಶಲಕ್ಷ ರೂ. ಆದಾಯವನ್ನು ದಾಖಲಿಸಿದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಶೇ.100ರಷ್ಟು ಹೆಚ್ಚಾಗಿದೆ. ಚಾಲ್ತಿಯಲ್ಲಿರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಲ್ಲಿ ಮಾರಾಟವಾದ ಘಟಕಗಳಿಂದ ಗುರುತಿಸದ ಆದಾಯ 17,677 ದಶಲಕ್ಷ ರೂ. ಇದ್ದು, ಇದು ಮುಂದಿನ ತ್ರೈಮಾಸಿಕಗಳಲ್ಲಿ ಪ್ರತಿಫಲಿಸಲಿದೆ.

ಹುರುಪಿನ ರೆಸಿಡೆನ್ಶಿಯಲ್ ಮಾರಾಟ: 2014-15 ಹಣಕಾಸು ವರ್ಷದ ಕ್ಯೂ2 ಹುರುಪಿನ ಮಾರಾಟಗಳಿಗೆ ಸಾಕ್ಷಿಯಾಗಿದೆ. 4,087 ದಶಲಕ್ಷ ರೂ.ನಷ್ಟು ಮೌಲ್ಯದ 0.8 ದಶಲಕ್ಷ ಚದರ ಅಡಿಯಷ್ಟು ರಿಯಲ್ ಎಸ್ಟೇಟ್ ಸ್ಪೇಸ್ 2014ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಮಾರಾಟವಾಗಿದೆ. ವಾರ್ಷಿಕ ಬ್ರಿಗೇಡ್ ಶೋಕೇಸ್ ಕಾರ್ಯಕ್ರಮದಲ್ಲಿ, ಗ್ರಾಹಕರು ರೆಡಿ ಟು ಆಕ್ಯುಪೈ ಮನೆಗಳಿಂದ ನಿರ್ಮಾಣ ಪೂರ್ತಿಗೊಳ್ಳುತ್ತಿರುವ, ಚಾಲ್ತಿಯಲ್ಲಿರುವ ಹಾಗೂ ಕೇವಲ ಪ್ರಾಜೆಕ್ಟ್ಸ್ ಚಾಲನೆ ದೊರೆತಿರುವ ತನಕದ ವಿವಿಧ ಶ್ರೇಣಿಯ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡುವ ಅವಕಾಶವಿದ್ದು ಇದು ಯಶಸ್ವಿಗೊಂಡಿದೆ. ಈ ಪ್ರಾಜೆಕ್ಟ್ ಗಳು ವ್ಯಾಲ್ಯೂ ಹೋಮ್ಸ್, ಲಕ್ಷುರಿ ಅಪಾರ್ಟ್‍ಮೆಂಟ್‍ಗಳು, ಪ್ರೀಮಿಯಂ ರೆಸಿಡೆನ್ಶಿಯಲ್ ಎನ್‍ಕ್ಲೇವ್‍ಗಳು, ರಿಟೈರ್‍ಮೆಂಟ್ ಹೋಮ್ಸ್ ಮತ್ತು ವಿಲ್ಲಾಗಳನ್ನು ಒಳಗೊಂಡಿವೆ.

ಈ ತ್ರೈಮಾಸಿಕದ ಮಹತ್ವದ ಬೆಳವಣಿಗೆಗಳು
*1.5 ದಶಲಕ್ಷ ಚದರ ಅಡಿಯ ಒಟ್ಟು ಪ್ರದೇಶ ಹೊಂದಿರುವ ಬ್ರಿಗೇಡ್ ಆರ್ಕಾಡ್ಸ್- ಸೆಡಾರ್ ಆಂಡ್ ಡಿಯೋಡರ್, ಮತ್ತು 0.2 ದಶಲಕ್ಷ ಚದರ ಅಡಿ ಹೊಂದಿರುವ ಹಾಲಿಡೇ ಇನ್ ಎಕ್ಸ್‍ಪ್ರೆಸ್ ಹೋಟೆಲ್ ಚಾಲನೆಗೊಂಡಿವೆ.
*ಕ್ರೈಸಿಲ್ ದೂರಗಾಮಿ ಡೆಬ್ಟ್ ರೇಟಿಂಗ್ ಎ'' ಅನ್ನು ಕಂಪನಿಗೆ ನೀಡಿದ್ದು ಇದು ಉದ್ಯಮದಲ್ಲೇ ಅತಿ ಗರಿಷ್ಠವಾಗಿದೆ.
*ಕ್ರೈಸಿಲ್ ಸ್ವತಂತ್ರ ಈಕ್ವಿಟಿ ರಿಸರ್ಚ್, ಬ್ರಿಗೇಡ್ ಗ್ರೂಪ್‍ಗೆ ಫಂಡಮೆಂಟಲ್ ಗ್ರೇಡ್ ಅನ್ನು 5ರಲ್ಲಿ 4 ನೀಡಿದರೆ, ವ್ಯಾಲ್ಯುವೇಶನ್ ಗ್ರೇಡ್ ಅನ್ನು 5ರಲ್ಲಿ 5 ನೀಡಿದೆ.
*ಇಕ್ರಾ ಈಕ್ವಿಟಿ ರಿಸರ್ಚ್, ಬ್ರಿಗೇಡ್ ಗ್ರೂಪ್ ಗೆ ಫಂಡಮೆಂಟಲ್ ಗ್ರೇಡ್ ಅನ್ನು 5ರಲ್ಲಿ 4 ನೀಡಿದರೆ, ವ್ಯಾಲ್ಯುವೇಶನ್ ಗ್ರೇಡ್ ಎ'' ಅನ್ನು ನೀಡಿದೆ.
*ಬ್ರಿಗೇಡ್ ಗ್ರೂಪ್ ಮತ್ತು ಇದರ ಸಹವರ್ತಿ ಕಂಪನಿ ಜಿಐಸಿ (ಸಿಂಗಾಪುರದ ಸವರೈನ್ ವೆಲ್ತ್ ಫಂಡ್) ಜತೆ ದಕ್ಷಿಣ ಭಾರತದ ಆಯ್ದ ನಗರಗಳಲ್ಲಿ ವಸತಿ ಮತ್ತು ಮಿಶ್ರ ಬಳಕೆ ಅಭಿವೃದ್ಧಿಯಲ್ಲಿ 1,500 ಕೋಟಿ ರೂ. ಜಂಟಿಯಾಗಿ ಹೂಡಿಕೆ ಮಾಡುವ ಸಂಬಂಧ ಒಪ್ಪಂದವೊಂದಕ್ಕೆ ಬರಲಾಗಿದೆ.
*ಬ್ರಿಗೇಡ್ ಗ್ರೂಪ್ ಶೀಘ್ರದಲ್ಲೇ ಗುಜರಾತ್‍ನ ಗಿಫ್ಟ್ ಸಿಟಿಯಲ್ಲಿ 1.1 ದಶಲಕ್ಷ ಚದರ ಅಡಿಯಷ್ಟು ಕಮರ್ಷಿಯಲ್, ರೆಸಿಡೆನ್ಶಿಯಲ್, ರಿಟೈಲ್ ಮತ್ತು ಹೋಟೆಲ್ ಪ್ರಾಜೆಕ್ಟ್ ಗಳನ್ನು ಆರಂಭಿಸಲಿದೆ.

ಹಣಕಾಸು ಮುಖ್ಯಾಂಶಗಳು
ಕ್ಯೂ-ಒ-ಕ್ಯೂ ಆಧಾರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ (2014-15ನೇ ವಿತ್ತೀಯ ವರ್ಷದ ಕ್ಯೂ2 ವರ್ಸಸ್ ಕ್ಯೂ1)
*ಒಟ್ಟಾರೆ ಆದಾಯ ಶೇ.100ರಷ್ಟು ಪ್ರಗತಿಯೊಂದಿಗೆ 1,682 ದಶಲಕ್ಷ ರೂ.ನಿಂದ 3,292 ದಶಲಕ್ಷ ರೂ.ಗೆ ಏರಿದೆ.
*ಇಬಿಐಟಿಡಿಎ ಶೇ.56ರಷ್ಟು ಪ್ರಗತಿಯೊಂದಿಗೆ 595 ದಶಲಕ್ಷ ರೂ.ನಿಂದ 927 ದಶಲಕ್ಷ ರೂ.ಗೆ ಏರಿದೆ.
*ಇಬಿಐಟಿಡಿಎ ಮಾರ್ಜಿನ್ ಶೇ.36ರಿಂದ ಶೇ.28ಕ್ಕೆ ತಲುಪಿದೆ.
*ಪಿಎಟಿ 74 ದಶಲಕ್ಷ ರೂ.ನಿಂದ 215 ದಶಲಕ್ಷ ರೂ.ಗೆ ಏರಿದೆ.
*ಇಪಿಎಸ್ ಪ್ರತಿ ಷೇರಿಗೆ 0.66 ರೂ.ನಿಂದ ಪ್ರತಿ ಷೇರಿಗೆ 1.92 ರೂ.ಗೆ ಏರಿದೆ.
ವೈ-ಒ-ವೈ ಆಧಾರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ (2014-15ರ ಕ್ಯೂ2 ವರ್ಸಸ್ 2013-14ರ ಕ್ಯೂ2)
*ಒಟ್ಟು ಆದಾಯವು ಶೇ.82ರ ಪ್ರಗತಿಯೊಂದಿಗೆ 1,808 ದಶಲಕ್ಷ ರೂ.ನಿಂದ 3,292 ದಶಲಕ್ಷ ರೂ.ಗೆ ಏರಿದೆ.
*ಇಬಿಐಟಿಡಿಎ ಶೇ.39ರಷ್ಟು ಪ್ರಗತಿಯೊಂದಿಗೆ 667 ದಶಲಕ್ಷ ರೂ. ನಿಂದ 927 ದಶಲಕ್ಷ ರೂ.ಗೆ ಏರಿದೆ.
*ಇಬಿಐಟಿಡಿಎ ಮಾರ್ಜಿನ್ ಶೇ.37ರಿಂದ ಶೇ.28ಕ್ಕೆ ತಲುಪಿದೆ.
*ಪಿಎಟಿ 190 ದಶಲಕ್ಷ ರೂ.ನಿಂದ 215 ದಶಲಕ್ಷ ರೂ.ಗೆ ಏರಿದೆ.
*ಇಪಿಎಸ್ ಪ್ರತಿ ಷೇರಿಗೆ 1.69 ರೂನಿಂದ ಪ್ರತಿ ಷೇರಿಗೆ 1.92 ರೂ.ಗೆ ಏರಿದೆ.

ಕಾರ್ಯನಿರ್ವಹಣೆ ಮತ್ತು ಭವಿಷ್ಯದ ಮುನ್ನೋಟ
*2014, ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 4,087 ದಶಲಕ್ಷ ರೂ. ಮೌಲ್ಯದ 0.8 ದಶಲಕ್ಷ ಚದರ ಅಡಿಯಷ್ಟು ಒಟ್ಟು ರಿಯಲ್ ಎಸ್ಟೇಟ್ ಸ್ಪೇಸ್ ಮಾರಾಟ ಮಾಡಲಾಗಿದೆ.
*2014, ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಲೀಸ್ ರೆಂಟಲ್ ಮತ್ತು ಹಾಸ್ಪಿಟಾಲಿಟಿ ವಿಭಾಗಗಳು ಕ್ರಮವಾಗಿ 43 ದಶಲಕ್ಷ ರೂ. ಹಾಗೂ 284 ದಶಲಕ್ಷ ರೂ. ಆದಾಯ ನೀಡಿವೆ.

*ಕಂಪನಿಯ ಡೆಬ್ಟ್ ಈಕ್ವಿಟಿ ಅನುಪಾತ 0.68 : 1 ದಲ್ಲಿ ಇತ್ತು. ಶೇ.50ಕ್ಕೂ ಹೆಚ್ಚು ಸಾಲ ಆಫೀಸ್, ರಿಟೈಲ್ ಮತ್ತು ಹಾಸ್ಪಿಟಾಲಿಟಿ ಆಸ್ತಿಗಳ ಮೇಲೆ ಇದ್ದು ಇವು ತಮ್ಮ ಸಾಲಕ್ಕೆ ಪ್ರತಿಯಾಗಿ ಆದಾಯ ತರುವ ಆಸ್ತಿಗಳಾಗಿವೆ.
*2014, ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದ ವೇಳೆ ಬೆಂಗಳೂರಿನಲ್ಲಿ 1.05 ದಶಲಕ್ಷ ಚದರ ಅಡಿ ರೆಸಿಡೆನ್ಶಿಯಲ್ ಸ್ಪೇಸ್ ಗೆ ಚಾಲನೆ ನೀಡಲಾಗಿದೆ.
*2014, ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದ ವೇಳೆ ಬೆಂಗಳೂರಿನಲ್ಲಿ 0.17 ದಶಲಕ್ಷ ಚದರ ಅಡಿ ಹಾಸ್ಪಿಟಾಲಿಟಿ ಸ್ಪೇಸ್ ಗೆ ಚಾಲನೆ ನೀಡಲಾಗಿದೆ.
*2014-15ನೇ ಹಣಕಾಸು ವರ್ಷದ ಕ್ಯೂ3 ಹಾಗೂ ಕ್ಯೂ4ರಲ್ಲಿ ವಿವಿಧ ವಿಭಾಗಗಳಾದ್ಯಂತ 6 ದಶಲಕ್ಷ ಚದರ ಅಡಿಗಳಿಗೆ ಚಾಲನೆ ನೀಡುವ ಯೋಜನೆಯಿದೆ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

English summary
Bangalore-based real estate major Brigade Enterprises Ltd's net profit for the second quarter of the financial year 2014-15 has shown a 191% growth to Rs 215 million, up from Rs 74 million recorded during the immediately preceding quarter of the current fiscal. The Board of Directors of Brigade Enterprises Ltd. met on November 4thand approved the financial results for Q2 FY 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X