ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡ್ ಇನ್ ಇಂಡಿಯಾ ಜಾಗ್ವಾರ್ ಆನ್ಲೈನ್ ಬುಕ್ಕಿಂಗ್ ಶುರು

ಟಾಟಾ ಮೋಟರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ತನ್ನ ಬಹು ನಿರೀಕ್ಷಿತ ಪ್ರೀಮಿಯಂ ಬಿಸಿನೆಸ್ ಸೇಡನ್ ‍ನ ಹೊಚ್ಚ ಹೊಸ ಕಾರು ಜಾಗ್ವಾರ್ ಎಕ್ಸ್‍ಎಫ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಟಾಟಾ ಮೋಟರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ತನ್ನ ಬಹು ನಿರೀಕ್ಷಿತ ಪ್ರೀಮಿಯಂ ಬಿಸಿನೆಸ್ ಸೇಡನ್ ‍ನ ಹೊಚ್ಚ ಹೊಸ ಕಾರು ಜಾಗ್ವಾರ್ ಎಕ್ಸ್ ಎಫ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆನ್ ಲೈನ್ ಮೂಲಕ ಬುಕ್ಕಿಂಗ್ ಕೂಡಾ ಆರಂಭವಾಗಿದೆ.

ಇದರ ಬೆಲೆ (ದೆಹಲಿ ಎಕ್ಸ್ ಶೋರೂಂ ಬೆಲೆ) 47.5 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ. ಜಾಗ್ವಾರ್ ಎಕ್ಸ್ ಎಫ್ 2.0 ಲೀಟರ್ ಸಾಮರ್ಥ್ಯದ ಡೀಸೆಲ್ ಇಂಜಿನ್ ಹೊಂದಿದ್ದು, 132 ಕಿಲೋವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ, 2.0 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದ್ದು, 177 ಕಿಲೋವ್ಯಾಟ್ ಸಾಮರ್ಥ್ಯದ ಪವರ್ ಔಟ್‍ಪುಟ್ ಹೊಂದಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ ಅವರು ಈ ವಿನೂತನವಾದ ಮತ್ತು ಆಕರ್ಷಕವಾದ ಕಾರಿನ ಬಗ್ಗೆ ಮಾತನಾಡಿ,

"ಭಾರತದಲ್ಲಿ 2009 ರಲ್ಲಿ ಪರಿಚಯ ಮಾಡಿದ ದಿನದಿಂದ ಜಾಗ್ವಾರ್ ಎಕ್ಸ್‍ಎಫ್ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದು, ಸಫಲತೆ ಹೊಂದಿದೆ. ಇದೀಗ ಭಾರತದ ಮಾರುಕಟ್ಟೆಗೆ ಮತ್ತಷ್ಟು ವಿನೂತನವಾದುದನ್ನು ನೀಡುವ ನಿಟ್ಟಿನಲ್ಲಿ ಹೊಚ್ಚ ಹೊಸದಾದ ದೇಶೀಯ ಉತ್ಪಾದನೆಯಾದ ಜಾಗ್ವಾರ್ ಎಕ್ಸ್ ಎಫ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು. ಆನ್ ಲೈನ್ ಬುಕ್ಕಿಂಗ್, ಎಕ್ಸ್ ಎಫ್ ವಿಶೇಷತೆಗಳ ಬಗ್ಗೆ ಮುಂದೆ ಓದಿ...

ಜಾಗ್ವರ್ ಎಕ್ಸ್ ಎಫ್ ಮುಖ್ಯಾಂಶಗಳು

ಜಾಗ್ವರ್ ಎಕ್ಸ್ ಎಫ್ ಮುಖ್ಯಾಂಶಗಳು

* ಭಾರತೀಯ ಮಾರುಕಟ್ಟೆಯಲ್ಲಿ 47.50 ಲಕ್ಷ ರೂಪಾಯಿಗಳಿಂದ ಆರಂಭ
* ಜಾಗ್ವಾರ್ ಲ್ಯಾಂಡ್‍ ರೋವರ್ ಇಂಡಿಯಾ ಪುಣೆ ಉತ್ಪಾದನಾ ಘಟಕದಲ್ಲಿ ಜಾಗ್ವಾರ್ ಎಕ್ಸ್ ಎಫ್ ಕಾರು ತಯಾರಿಕೆ ಆರಂಭ
* ಅತ್ಯಾಕರ್ಷಕ ವಿನ್ಯಾಸ ಮತ್ತು ತಂತ್ರಜ್ಞಾನ ಅಳವಡಿಕೆ
* ದೇಶದ 24 ಜಾಗ್ವಾರ್ ರೀಟೇಲ್ ಔಟ್‍ ಲೆಟ್‍ ಗಳಲ್ಲಿ ಬುಕಿಂಗ್ ಆರಂಭ
* ಆನ್‍ಲೈನ್ ಬುಕಿಂಗ್‍ಗೆ www.findmeacar.in ಭೇಟಿ ನೀಡಬಹುದು.

ಮೈಕ್ರೋಸಾಫ್ಟ್ ಜತೆ ಜಾಗ್ವಾರ್

ಮೈಕ್ರೋಸಾಫ್ಟ್ ಜತೆ ಜಾಗ್ವಾರ್

ಕಾರು ಉದ್ಯಮದಲ್ಲಿ ಚಾಲಕ ಸ್ನೇಹಿ ತಂತ್ರಜ್ಞಾನ ಹುಟ್ಟಿದ್ದು ಈಗ ಮಾತ್ರವಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ನಮ್ಮ ಕಾರುಗಳಲ್ಲಿ ಕಾಣುವ ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ರಿವರ್ಸ್ ಪಾರ್ಕಿಂಗ್ ಎಲ್ ಸಿಡಿ ಡಿಸ್ ಪ್ಲೇ, ಆಟೋ ಗೇರ್, ಬ್ಲೂ ಟೂತ್ ಕಾಲ್ ರಿಸೀವಿಂಗ್ ಆಪ್ಷನ್... ಹೀಗೆ ಮುಂತಾದ ಹಲವಾರು ಸೌಕರ್ಯಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಜಾರಿಗೆ ಬಂದು ತುಂಬಾ ವರ್ಷಗಳೇ ಕಳೆದಿವೆ. ಈಗ, ಭಾರತದಲ್ಲಿಯೂ ಅಂಥದ್ದೊಂದು ಬೂಮ್ ಸೃಷ್ಟಿಸುವುದು ಟಾಟಾ ಕಂಪನಿಯ ಇರಾದೆಯಾಗಿದ್ದು, ಅದಕ್ಕಾಗಿಯೇ ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಕೈ ಜೋಡಿಸಿದೆ.

24 ಅಧಿಕೃತ ಔಟ್‍ಲೆಟ್

24 ಅಧಿಕೃತ ಔಟ್‍ಲೆಟ್

ಅಹ್ಮದಾಬಾದ್, ಔರಂಗಾಬಾದ್, ಬೆಂಗಳೂರು, ಭುವನೇಶ್ವರ್, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ, ಗುರುಗ್ರಾಮ, ಹೈದ್ರಾಬಾದ್, ಇಂದೋರ್, ಜೈಪುರ, ಕೊಲ್ಕತ್ತಾ, ಕೊಚ್ಚಿ, ಕರ್ನಾಲ್, ಲಕ್ನೋ, ಲೂಧಿಯಾನ, ಮಂಗಳೂರು, ಮುಂಬೈ, ನಾಗ್ಪುರ, ಪುಣೆ, ರಾಯಪುರ ಮತ್ತು ನೋಯ್ಡಾದ 24 ಅಧಿಕೃತ ಔಟ್‍ಲೆಟ್ ಗಳಲ್ಲಿ ಜಾಗ್ವಾರ್ ವಾಹನಗಳು ಲಭ್ಯವಿವೆ. ಈ ಹೊಸ ಜಾಗ್ವಾರ್ ಎಕ್ಸ್‍ಎಫ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.jaguar.in ಗೆ ಭೇಟಿ ನೀಡಿ.

ಬ್ರಿಟಿಷರ ಹೆಮ್ಮೆಯ ಕಾರಾಗಿದ್ದ ಜಾಗ್ವಾರ್

ಬ್ರಿಟಿಷರ ಹೆಮ್ಮೆಯ ಕಾರಾಗಿದ್ದ ಜಾಗ್ವಾರ್

ಒಂದು ಕಾಲದಲ್ಲಿ ಬ್ರಿಟಿಷರ ಹೆಮ್ಮೆಯ ಕಾರಾಗಿದ್ದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ ಆರ್ ) ಈಗ ಟಾಟಾ ಮೋಟರ್ಸ್ ಅಧೀನದಲ್ಲಿದ್ದು, ಭಾರತದಲ್ಲೇ ಕಾರುಗಳ ನಿರ್ಮಾಣ ನಡೆಸಲಾಗುತ್ತಿದೆ. ಭಾರತದಲ್ಲಿ ಜಾಗ್ವಾರ್ ಶ್ರೇಣಿಗಳಾದ
* ಎಫ್-ಟೈಪ್(125 ಲಕ್ಷ ರೂಗಳಿಂದ ಆರಂಭ, ಸಿಬಿಯು ಮಾದರಿ),
* Made in India XJ(99.99 ಲಕ್ಷ ರೂಗಳಿಂದ ಆರಂಭ)
* ಹೊಸ ಎಫ್-ಪೇಸ್(68.40 ಲಕ್ಷ ರೂಗಳಿಂದ ಆರಂಭ),
* ‍XF (47.50 ಲಕ್ಷ ರೂಗಳಿಂದ ಆರಂಭ)
* Made in India- XE (39.90 ಲಕ್ಷ ರೂಪಾಯಿಯಿಂದ ಆರಂಭ).
ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು.


English summary
Book Online for Made In India Jaguar XF. Tata Motors-owned British marque Jaguar Land Rover has launched the locally manufactured second-generation XF in the country at Rs 47.50 lakh (ex-showroom, New Delhi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X