ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯ್ಲಾಕ್ ಬೆರಿಯಿಂದ 4500 ಉದ್ಯೋಗ ಕಡಿತ

By Mahesh
|
Google Oneindia Kannada News

ಬೆಂಗಳೂರು, ಸೆ.21 : ಸ್ಮಾರ್ಟ್ ಫೋನ್ ಗಳ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭುತ್ವ ಹೊಂದಿರುವ ಬ್ಲ್ಯಾಕ್ ಬೆರಿ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ಮುಂದಾಗಿದೆ. ಜಾಗತಿಕವಾಗಿ ಶೇ 40 ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿದೆ.

ಬ್ಲ್ಯಾಕ್ ಬೆರಿ ಸಂಸ್ಥೆ ಉದ್ಯೋಗ ಕಡಿತ ಸುದ್ದಿ ಹೊರಬೀಳುತ್ತಿದ್ದಂತೆ ಬ್ಲ್ಯಾಕ್ ಬೆರಿ ಷೇರುಗಳು ಶೇ 23 ರಷ್ಟು ಕುಸಿತ ಕಂಡು 8.11 ಯುಎಸ್ ಡಾಲರ್ ಗೆ ಇಳಿದಿತ್ತು. ಈ ಸಮಯಕ್ಕೆ 8.725 ಯುಎಸ್ ಡಾಲರ್ ನಂತೆ ಶೇ 17.06 ರಷ್ಟು ಕುಸಿತ ಕಂಡಿದೆ. ದಿನಪೂರ್ತಿ ಇದೇ ಪ್ರಮಾಣದಲ್ಲಿ ಕುಸಿತ ಕಾಣುವಂತೆ ಕಾಣುತ್ತದೆ.

ಕೆನಡಾ ಮೂಲದ ಕಂಪನಿ ಈ ತ್ರೈಮಾಸಿಕದಲ್ಲಿ ಸುಮಾರು 950 ಮಿಲಿಯನ್ ಡಾಲರ್ ನಿಂದ 995 ಮಿಲಿಯನ್ ಡಾಲರ್ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರತಿಸ್ಪರ್ಧಿಗಳ ಜತೆ ಪೈಪೋಟಿ ನಡೆಸಲು ಬ್ಲ್ಯಾಕ್ ಬೆರಿ ವಿಫಲವಾಗಿದೆ.

BlackBerry to to cut 4500 Jobs Q2 Loss

ಸುಮಾರು 3 ಬಿಲಿಯನ್ ಆದಾಯ ಅಂದಾಜಿಸಲಾಗಿತ್ತು ಆದರೆ 1.6 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಇದೆ. ಶೇ 47 ರಿಂದ 51 ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಸಂಸ್ಥೆ ಕಾರ್ಯನಿರ್ವಹಣೆ ವೆಚ್ಚ ಸರಿದೂಗಿಸಲು 2015ರ ಹೊತ್ತಿಗೆ ಜಾಗತಿಕವಾಗಿ ಸುಮಾರು 7000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತವಾಗಿ 4500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ.

1999ರಿಂದ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಬೆಳಗುತ್ತಿರುವ ಬ್ಲ್ಯಾಕ್ ಬೆರಿ 2007ರಲ್ಲಿ ಆಪಲ್ ಸಂಸ್ಥೆ ಐಫೋನ್ ಎದುರು ಹಾಗೂ ನಂತರ ಸ್ಯಾಮ್ ಸಂಗ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ವಿರುದ್ಧ ಸೆಣಸಾಟ ನಡೆಸಿದೆ.

ಬ್ಲ್ಯಾಕ್ ಬೆರಿ Z 10 ಹಾಗೂ Q10 ಹೊಸ ವಿನ್ಯಾಸ ಬ್ಲ್ಯಾಕ್ ಬೆರಿ ಹೊಸ ಆಪರೇಟಿಂಗ್ ಸಿಸ್ಟಮ್ ಜತೆಗೆ ಸ್ಮಾರ್ತ್ ಫೋನ್ ಗಳು ಮಾರುಕಟ್ಟೆಗೆ ಬಂದಿವೆಯಾದರೂ ಪ್ರತಿಸ್ಪರ್ಧಿ ವಿರುದ್ಧ ರೇಸ್ ನಲ್ಲಿ ಹಿಂದೆ ಬಿದ್ದಿದೆ.

English summary
Blackberry said it will lay off 4,500 employees, or 40 per cent of its global workforce, as it reports a nearly USD 1 billion second-quarter loss a week earlier than expected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X