ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬಜಾರ್ ನಲ್ಲೂ ಹಣ ಡ್ರಾ ಮಾಡಲು ಅನುಕೂಲ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್ ಗೆ ಈ ವಿಚಾರದಲ್ಲಿ ಸಹಾಯ ಮಾಡುತ್ತಿದೆ. ಬ್ಯಾಂಕ್ ಹಣವನ್ನು ಪಿಒಎಸ್ ಮಶೀನ್ ಬಳಸುವ ಮೂಲಕ ಪಡೆಯಬಹುದು.

|
Google Oneindia Kannada News

ಬೆಂಗಳೂರು, ನವೆಂಬರ್ 23: ನವೆಂಬರ್ 24ರಿಂದ ಬಿಗ್ ಬಜಾರ್ ನ ಸ್ಟೋರ್ಸ್ ಗಳಲ್ಲಿ ಗ್ರಾಹಕರು ಡೆಬಿಟ್/ಎಟಿಎಂ ಕಾರ್ಡ್ ಬಳಸಿ ಎರಡು ಸಾವಿರ ರುಪಾಯಿವರೆಗೆ ವಿಥ್ ಡ್ರಾ ಮಾಡಬಹುದಾಗಿದೆ. ಈ ಅನುಕೂಲ ದೇಶದಾದ್ಯಂತ ಇರುವ 258 ಬಿಗ್ ಬಜಾರ್ ಮತ್ತು ಎಫ್ ಬಿಬಿ ಸ್ಟೋರ್ಸ್ ಗಳಲ್ಲಿ ದೊರೆಯಲಿದೆ. ದೇಶದ 115 ನಗರ ಹಾಗೂ ಪಟ್ಟಣಗಳಲ್ಲಿ ಈ ಮಳಿಗೆಗಳಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್ ಗೆ ಈ ವಿಚಾರದಲ್ಲಿ ಸಹಾಯ ಮಾಡುತ್ತಿದೆ. ಬ್ಯಾಂಕ್ ಹಣವನ್ನು ಪಿಒಎಸ್ ಮಶೀನ್ ಬಳಸುವ ಮೂಲಕ ಪಡೆಯಬಹುದು. ದೇಶದ ಯಾವುದೇ ಶೆಡ್ಯೂಲ್ ಬ್ಯಾಂಕ್ ನಲ್ಲಿ ಖಾತೆಯಿರುವ ಗ್ರಾಹಕರು ನಗದು ವಿಥ್ ಡ್ರಾ ಮಾಡಬಹುದು.[ಪೆಟ್ರೋಲ್ ಬಂಕ್ ನಲ್ಲೂ ಹಣ ವಿಥ್ ಡ್ರಾಗೆ ಅವಕಾಶ]

Big bazar

ಈ ಬಗ್ಗೆ ಮಾತನಾಡಿರುವ ಫ್ಯೂಚರ್ ರೀಟೇಲ್ ಲಿಮಿಟೆಡ್ ನ ಅಧ್ಯಕ್ಷ ಕಿಶೋರ್ ಬಿಯಾನಿ, 500, 1000 ರದ್ದು ಆದ ನಂತರ ಗ್ರಾಹಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸರಕಾರದ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಎಟಿಎಂ, ಬ್ಯಾಂಕ್ ಗಳ ಮುಂದೆ ಸಾಲುಗಟ್ಟುವ ಬದಲು ಗ್ರಾಹಕರು ಬಿಗ್ ಬಜಾರ್ ಸ್ಟೋರ್ಸ್ ಗೆ ಬರಲಿ ಎನ್ನುತ್ತಾರೆ.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]

ಗ್ರಾಹಕರು ನಗದು ಕೌಂಟರ್ ಇರುವ ಸ್ಟೋರ್ಸ್ ಗೆ ಹೋಗಬೇಕು. ಅವರ ಡೆಬಿಟ್/ಎಟಿಎಂ ಕಾರ್ಡ್ ಬಳಸಿ, ಪಾಸ್ ವರ್ಡ್ ಹಾಕಬೇಕಾಗುತ್ತದೆ. ಆ ನಂತರ ಅವರ ಖಾತೆಯಿಂದ ಎರಡು ಸಾವಿರದವರೆಗೆ ಡ್ರಾ ಮಾಡಬಹುದು. ಮತ್ತು ಈ ಅನುಕೂಲ ಬಳಸಲು ಕೆಲ ನಿಯಮಗಳನ್ನು ಹಾಕಲಾಗಿದೆ. ಅಂದರೆ ಬ್ಯಾಂಕ್, ರಿಸರ್ವ್ ಬ್ಯಾಂಕ್ ಹಾಗೂ ಸರಕಾರದ ಆದೇಶಗಳು ಆಯಾ ಕಾಲಕ್ಕೆ ತಕ್ಕಂತೆ ಅನ್ವಯವಾಗುತ್ತವೆ.

English summary
Big Bazaar has announced that starting November 24, all its stores and fbb stores will allow customers to withdraw up to Rs 2,000 using their debit/ATM cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X