ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಸಾವಿರ ಕೋಟಿಗೆ ಏರ್‌ಟೆಲ್‌ನಿಂದ ವಿಡಿಯೋಕಾನ್ ಸ್ಪೆಕ್ಟ್ರಂ ಖರೀದಿ

|
Google Oneindia Kannada News

ನವದೆಹಲಿ, ಮಾರ್ಚ್, 22: ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದುಕೊಂಡಿರುವ ಏರ್ ಟೆಲ್ ಇದೀಗ ವಿಡಿಯೋಕಾನ್ ನ ರೇಡಿಯೋ ಸ್ಪೆಕ್ಟ್ರಂ ಅನ್ನು ಖರೀದಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕೇಂದ್ರ ಸರ್ಕಾರ ದೂರಸಂಪರ್ಕ ಆಪರೇಟರ್ ಗಳ ನಡುವಿನ ತರಂಗ ಹಂಚಿಕೆ ನೀತಿಯನ್ನು ಸರಳ ಮಾಡಿದ ನಂತರ ಏರ್ ಟೆಲ್ ಈ ಮಹತ್ತರ ಹೆಜ್ಜೆ ಇಡಲು ಮುಂದಾಗಿದೆ. [ಸ್ಪೆಕ್ಟ್ರಂ ಹರಾಜು: ಸರ್ಕಾರಕ್ಕೆ 1.1 ಲಕ್ಷ ಕೋಟಿ ಆದಾಯ]

airtel

ವಿಡಿಯೋಕಾನ್ ಸಂಸ್ಥೆಯಿಂದ ರೇಡಿಯೋ ಸ್ಪೆಕ್ಟ್ರಂ 4 ,428 ರು. ವೆಚ್ಚದಲ್ಲಿ ಖರೀದಿ ಮಾಡಲಾಗುವುದು. ರೇಡಿಯೋ ಸ್ಪೆಕ್ಟ್ರಂ ಖರೀದಿಗೆ ಸಂಬಂಧಿಸಿದಂತೆ ಏರ್ ಟೆಲ್ ವಿಡಿಯೋಕಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಭಾರ್ತಿ ಏರ್ ಟೆಲ್ ತಿಳಿಸಿದೆ.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರದ ಕತೆ]

ಇನ್ನು ಮುಂದೆ ವಿಡಿಯೋ ಕಾನ್ ಟೆಲಿಕಮ್ಯುನಿಕೇಶನ್ಸ್ ಲಿಮಿಟೆಡ್ ನ 1,800 ಮೆಗಾ ಹರ್ಡ್ಸ್ ಬ್ಯಾಂಡ್ ವ್ಯಾಪ್ತಿಯ 2x5 ಮೆಗಾ ಹರ್ಡ್ಸ್ ಸ್ಪೆಕ್ಟ್ರಂ ನ್ನು ಏರ್ ಟೆಲ್ ಬಳಕೆ ಮಾಡಿಕೊಳ್ಳಲಿದೆ. ಒಪ್ಪಂದದ ಅನ್ವಯ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ(ಪೂರ್ವ), ಉತ್ತರಪ್ರದೇಶ(ಪಶ್ಚಿಮ) ಹಾಗೂ ಗುಜರಾತ್ ನಲ್ಲಿ ಏರ್ ಟೆಲ್ ವಿಡಿಯೋಕಾನ್ ನ ಸ್ಪೆಕ್ಟ್ರಂ ನ್ನು 2032 ವರೆಗೆ ಬಳಕೆ ಮಾಡಿಕೊಳ್ಳಲಿದೆ. ರೋಮಿಂಗ್ ಗೆ ಸಂಬಂಧಿಸಿಯೂ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ.

English summary
Bharti Airtel on Thursday said it will acquire Videocon Telecom's radio frequency spectrum in six circles for Rs.4,428 crore in yet another deal after the government liberalised the trading and sharing of scarce airwaves among operators. "Bharti Airtel has entered into a definitive agreement with Videocon Telecommunications Limited to acquire, at an aggregate consideration of Rs.4,428 crore, the rights to use 2x5 MHz spectrum in the 1,800 MHz Band," the company said in a regulatory filing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X