ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಶೆಲ್ ಐಟಿ ಕೇಂದ್ರ ಆರಂಭ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಶೆಲ್ ಇಂಡಿಯಾ ಮಾರ್ಕೆಟ್ ಪ್ರೈ.ಲಿ, ಬೆಂಗಳೂರಿನಲ್ಲಿ ತನ್ನ ಐಟಿ ಕೇಂದ್ರವನ್ನು ಉದ್ಘಾಟಿಸಿದೆ. ಆತಂರಿಕ ಜಾಗತಿಕ ಮಾಹಿತಿ ತಂತ್ರಜ್ಞಾನ ಕೇಂದ್ರ 2016ರ ಅಂತ್ಯಕ್ಕೆ 1,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ. 2020ರ ವೇಳೆಗೆ ಇನ್ನೊಂದಷ್ಟು ಸಾವಿರ ಮಂದಿಗೆ ಉದ್ಯೋಗ ನೀಡಲಿದೆ.

ಬ್ಯಾಂಕ್ ಆಫ್ ಬರೋಡ ಅಧ್ಯಕ್ಷ ರವಿ ವೆಂಕಟೇಶನ್ ಐಟಿ ಕೇಂದ್ರವನ್ನು ಉದ್ಘಾಟಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ರಾಜ್ಯ ಐಟಿ, ಬಿಟಿ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಈ ಸಂದರ್ಭದಲ್ಲಿ ಹಾಜರಿದ್ದರು.

Shell

ಈ ಸಂದರ್ಭದಲ್ಲಿ ಮಾತನಾಡಿದ ರಾಯಲ್ ಡಚ್ ಶೆಲ್ ಮುಖ್ಯ ಮಾಹಿತಿ ಅಧಿಕಾರಿ ಜಯ್ ಕ್ರೋಟ್ಸ್, ಭಾರತೀಯ ಮಾರುಕಟ್ಟೆಯಲ್ಲಿನ ಪ್ರತಿಭೆ ಶೆಲ್‍ಗೆ ಇಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಲು ಆಕರ್ಷಿಸಿದೆ. ಶೆಲ್ ಮತ್ತು ಭವಿಷ್ಯದ ಇಂಧನ ಐಟಿ ಉತ್ತೇಜಿತ.

ಹೀಗಾಗಿ, ಐಟಿ ಕೇಂದ್ರ ಒಂದು ಮಹತ್ವದ ತಾಣ. ಐಟಿ, ಇಂಧನ ವಹಿವಾಟಿಗೆ ತಳಮಟ್ಟದ ಬೆಂಬಲ ನೀಡುತ್ತದೆ. ತಂತ್ರಜ್ಞಾನ ಪ್ರೇರಿತ ವಹಿವಾಟಿನಿಂದ ಉತ್ಕೃಷ್ಟ ಗುಣಮಟ್ಟ ಸಾಧ್ಯ. ಜೊತೆಗೆ ವಹಿವಾಟು ಬೆಳವಣಿಗೆ ಹಾಗೂ ವರ್ಗಾವಣೆಗೂ ಸಹಕಾರಿ. ಬೆಂಗಳೂರಿನ ಅತ್ಯುತ್ತಮ ಸಿಬ್ಬಂದಿ ನಮಗೆ ಬೆಂಬಲವಾಗುತ್ತಾರೆ ಎಂಬ ಭರವಸೆಯಿದೆ ಎಂದರು.

ಭಾರತೀಯ ಶೆಲ್ ಕಂಪನಿಗಳ ಅಧ್ಯಕ್ಷ ಡಾ.ಯಾಸ್ಮಿನ್ ಹಿಲ್ಟನ್ ಮಾತನಾಡಿ, ಐಟಿ ಕೇಂದ್ರದ ಔಪಚಾರಿಕ ಉದ್ಘಾಟನೆ ಹೆಮ್ಮೆಯೆನಿಸುತ್ತಿದೆ. ಭಾರತ, ವಿಶೇಷವಾಗಿ ಬೆಂಗಳೂರು ಸಂಶೋಧನೆ ಕೇಂದ್ರವೆಂದು ಸಾಬೀತಾಗಿದ್ದು ಕಳೆದ ದಶಕಗಳಿಂದ ಈ ಕ್ಷೇತ್ರದಲ್ಲಿ ಸೇವೆ ಒದಗಿಸುತ್ತಿದೆ.

ತಾಂತ್ರಿಕ ಸಂಸ್ಥೆಗಳು ಮತ್ತು ಕರ್ನಾಟಕದಲ್ಲಿನ ಪ್ರತಿಭಾನ್ವಿತರನ್ನು ಕೇಂದ್ರಿಕರಿಸಿ ಶೆಲ್ ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದ್ದು, ಭವಿಷ್ಯಕ್ಕೆ ಅಗತ್ಯ ಐಟಿ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲಿದೆ. ಇದು ನಮಗೆ ಉತ್ಕೃಷ್ಟ ಗುಣಮಟ್ಟದ ಐಟಿ ಯೋಜನೆ ನೀಡಲು ಸಹಕಾರಿ ಎಂದರು.

ಶೆಲ್, ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಭಾರತದ ಕೌಶಲ್ಯದಿಂದ ತನ್ನ ವಹಿವಾಟಿಗೆ ಬೆಂಗಳೂರು ಕೇಂದ್ರದಿಂದ ಬೃಹತ್ ಐಟಿ ಪರಿಹಾರ ಒದಗಿಸುತ್ತದೆ.

English summary
Shell India Markets Pvt. Ltd. inaugurated its IT centre in Bengaluru. The in-house global information technology centre is expected to recruit close to 1000 professionals by the end of 2016 and several thousand by 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X