ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಾಯನ್ ಮಾಲ್‌ನಲ್ಲಿ ತೆರೆದುಕೊಂಡ ಕಲಾಲೋಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 06: ನೀವು ಕುಸುರಿ ಕಲೆ, ಕಲಾತ್ಮಕ ವಸ್ತುಗಳ ಪ್ರೇಮಿಗಳೇ? ಹಾಗಾದರೆ ಇನ್ನೇಕೆ ತಡ. ನೇರವಾಗಿ ಒರಾಯನ್ ಮಾಲ್ ಗೆ ಬನ್ನಿ. ಅಲ್ಲಿ ನಿಮಗಾಗಿ ಕಲಾತ್ಮಕ ವಸ್ತುಗಳ ಲೋಕವೇ ತೆರೆದುಕೊಂಡಿದೆ.

ವಿಭಿನ್ನ ಶಾಪಿಂಗ್ ಅನುಭವ ಪಡೆಯಲು ಬೆಂಗಳೂರಿನ ರಾಜಾಜಿನಗರ ಒರಾಯನ್ ಮಾಲ್ ಗೆ ಕಾಲಿರಿಸಿದರೆ ಸಾಕು. ದೇಶದ ಬಹುತೇಕ ಭಾಗಗಳ ಕುಸುರಿ ಕಲೆ, ಚಿತ್ರಕಲೆ, ಕಲಾತ್ಮಕ ಜವಳಿ ಇಲ್ಲಿ ಒಂದೇ ಕಡೆ ಲಭ್ಯವಿದೆ. ಕಾಶ್ಮೀರದ ಶಾಲುಗಳು, ಗುಜರಾತಿನ ಬಾಂಧಿನಿ, ಕೈನಲ್ಲೇ ತಯಾರಿಸಿದ ಆಭರಣಗಳು, ತಂಜಾವೂರು ಬೊಂಬೆಗಳು, ಪೇಂಟಿಂಗ್ಸ್, ಮೀನಾಕರಿ ಆಭರಣ, ಆಂಟಿಕ್ ಫರ್ನಿಚರ್ ಸೇರಿದಂತೆ ಹತ್ತು ಹಲವಾರು ಉತ್ಪನ್ ಗಳು ನಿಮ್ಮ ಮನಮೆಚ್ಚುವ ಬೆಲೆಯಲ್ಲಿ ಲಭ್ಯವಿದೆ.[ಪ್ರಮುಖ ಬ್ಯಾಂಕ್ ಗ್ರಾಹಕರಿಗೆ ರಿಯಾಯಿತಿ ಹಬ್ಬ]

bengaluru

ಮಾಲ್ ನ ಕರವನ್ ಫ್ಲೀ ಮಾರ್ಕೆಟ್ ಮೂರನೇ ಮಹಡಿಯಲ್ಲಿದ್ದು 28 ಕ್ಕೂ ಹೆಚ್ಚು ಮಳಿಗೆಗಳು ಇವೆ. ಇಲ್ಲಿ ಗ್ರಾಹಕರು ಚೌಕಾಸಿ ಮಾಡಿಲು ಅವಕಾಶವಿದೆ. ಇಂತಹ ಉತ್ಸವವನ್ನು ಆರಂಭಿಸಿ ಒಂದು ವರ್ಷವಾಗಿದ್ದು, ಗ್ರಾಹಕರು ತಮಗಿಷ್ಟವಾದ ಉತ್ಪನ್ನಗಳನ್ನು ಖರೀದಿಸುವ ನೆಚ್ಚಿನ ತಾಣವಾಗಿ ಈ ಕರವನ್ ಫ್ಲೀ ಮಾರ್ಕೆಟ್ ಪರಿರ್ತನೆಯಾಗಿದೆ.

ಹವ್ಯಾಸಿ ಕಲಾವಿದರಿಗೆ ಅಥವಾ ಸಣ್ಣ ಉದ್ಯಮಿಗಳು ತಮ್ಮ ಕಲೆ ಅಥವಾ ಉತ್ಪನ್ನಗಳನ್ನು ಜನರಿಗೆ ಪರಿಚಯ ಮಾಡಿಕೊಡುವ ಉತ್ತಮ ವೇದಿಕೆಯಾಗಿದೆ. ಇಲ್ಲಿನ ಪ್ರತಿಯೊಂದು ಮಳಿಗೆಯೂ ಜನಾಕರ್ಷಣೆಗೊಳಪಡುವಂತೆ ಮಾಡಲಾಗಿದೆ. ಉದ್ಯಮಿಗಳು ಅಥವಾ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ತಂದರೆ ಅವರಿಗೆ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡುತ್ತಿರುವುದು ಮತ್ತೊಂದು ವಿಶೇಷ.

English summary
Now you can go treasure hunting at outstanding antique outlets at the Caravan flea market at Orion mall Rajaji Nagar Bengaluru. The caravan flea market gives platform for craftsman and artisans across India to showcase their work. People can look for handicraft, art work, curios, textiles and trinkets here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X