ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಾಮಿ ಆಸ್ತಿಯ ಅಸಲಿ, ನಕಲಿ ಮಾಲೀಕರಿಬ್ಬರಿಗೂ ಕಾದಿದೆ ಶಾಸ್ತಿ!

ಬೇನಾಮಿ ಆಸ್ತಿ ಹೊಂದಿದವರ ಅಪರಾಧ ಸಾಬೀತಾದರೆ, ಆಸ್ತಿ ಮೂಲ ಮಾಲೀಕ, ಆಸ್ತಿಯ ನಕಲಿ ಮಾಲೀಕ ಹಾಗೂ ಈ ಬೇನಾಮಿ ಆಸ್ತಿಗೆ ಸಹಕರಿಸಿದವರಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧಾರ.

|
Google Oneindia Kannada News

ನವದೆಹಲಿ, ಮಾರ್ಚ್ 3: ಕಪ್ಪು ಹಣ ಹಾಗೂ ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ, ಬೇನಾಮಿ ಆಸ್ತಿ ಹೊಂದಿರುವ ವ್ಯಕ್ತಿ ಹಾಗೂ ಆತನಿಗೆ ಸಹಕಾರ ನೀಡಿರುವವರಿಗೆ ಏಳು ವರ್ಷಗಳ ಕಠಿಣ ಸಜೆ ನೀಡಲು ಕಾನೂನು ರೂಪಿಸಿದೆ. ಇದರ ಜತೆ ಅಪರಾಧಿಗಳು ಆದಾಯ ತೆರಿಗೆ ವಂಚನೆ ಪ್ರಕರಣವನ್ನೂ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಹೇಳಿದೆ.

ಕೇಂದ್ರ ಆದಾಯ ತೆರಿಗೆ ಇಲಾಖೆಯು ಇದನ್ನು ಬಹಿರಂಗಪಡಿಸಿದ್ದು, ಇದರಿಂದ ಬೇನಾಮಿ ಆಸ್ತಿ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಯಾವುದೇ ವ್ಯಕ್ತಿ ಹಾಗೂ ಆ ಆಸ್ತಿಯನ್ನು ತನ್ನ ಹೆಸರಿನಲ್ಲಿ ಖರೀದಿಸಿ ಅಪರಾಧಿಯನ್ನು ಮರೆ ಮಾಚಲು ಸಹಕಾರ ನೀಡುವ ವ್ಯಕ್ತಿ ಹಾಗೂ ಇಂಥ ಪ್ರಕರಣಗಳಲ್ಲಿ ಈ ಇಬ್ಬರಿಗೆ ನೆರವಾಗುವ ಮಧ್ಯವರ್ತಿಗಳ ವಿರುದ್ಧವೂ ಮೊಕದ್ದಮೆ ಹೂಡಿ ತಪ್ಪಿತಸ್ಥರಿಗೆ ಏಳು ವರ್ಷ ಕಠಿಣ ವರ್ಷ ಸಜೆ ಘೋಷಿಸಲು ನಿರ್ಧರಿಸಲಾಗಿದೆ.[ಐಟಿ ಅಧಿಕಾರಿಗಳ ವಿರುದ್ಧ ಎಂಎಲ್ ಸಿ ಗೋವಿಂದರಾಜ್ ದೂರು ದಾಖಲು]

Benami Act violators to face double rigorous legal action

ಬೇನಾಮಿ ಆಸ್ತಿ ಕಾಯ್ದೆಯಡಿ ವಿಚಾರಣೆಗೊಳಪಡುವ ವ್ಯಕ್ತಿಯು ತನಿಖೆಯ ವೇಳೆ ಇಲಾಖೆಗೆ ತಪ್ಪು ಮಾಹಿತಿ ನೀಡಿದರೂ ಅವರಿಗೆ, ಐದು ವರ್ಷಗಳ ಶಿಕ್ಷೆ ಹಾಗೂ ಅವರ ಸಮಸ್ತ ಬೇನಾಮಿ ಆಸ್ತಿಯ ಒಟ್ಟು ಮೌಲ್ಯದ ಶೇ. 10ರಷ್ಟನ್ನು ದಂಡವನ್ನಾಗಿ ವಿಧಿಸಲು ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗಿದೆ.[PWD ಎಂಜಿನಿಯರ್ ರಂಗನಾಥ್ ಮನೆಯಲ್ಲಿ 60ಕೋಟಿಗೂ ಮಿಕ್ಕಿ ಆಸ್ತಿ ಪತ್ತೆ?]

English summary
The tax department on friday warned that those who undertake Benami transactions would invite Rigorous Imprisonment (RI) of up to 7 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X