ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಸಿಬ್ಬಂದಿಗೆ ವೈದ್ಯಕೀಯ ವೆಚ್ಚದ ತಲೆಬಿಸಿ ಇಲ್ಲ

|
Google Oneindia Kannada News

ಬೆಂಗಳೂರು, ಮೇ 29: ಇತ್ತೀಚೆಗಷ್ಟೇ ವೇತನದಲ್ಲಿ ಹೆಚ್ಚಳ ಕಂಡಿದ್ದ ಬ್ಯಾಂಕ್ ಸಿಬ್ಬಂದಿಗೆ ಮತ್ತೊಂದು ಸಿಹಿಸುದ್ದಿಯಿದೆ. ಬ್ಯಾಂಕ್‌ ಸಿಬ್ಬಂದಿ ಮತ್ತು ಕುಟುಂಬದವರಿಗೆ ನೀಡಿರುವ ಹೊಸ ವಿಮಾ ಯೋಜನೆ ಅನ್ವಯ ಶೇ. 100ರಷ್ಟು ವೈದ್ಯಕೀಯ ವೆಚ್ಚವನ್ನು ಬ್ಯಾಂಕುಗಳೇ ಭರಿಸಿಕೊಡಲಿವೆ.

ಯಾವ ಬ್ಯಾಂಕ್ ಸಿಬ್ಬಂದಿಯ ಮಾಸಿಕ ವರಮಾನ 10 ಸಾವಿರ ರೂ. ಗೆ ಮೀರಿರುವುದಿಲ್ಲವೋ ಅವರು ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಬ್ಯಾಂಕ್ ಸಿಬ್ಬಂದಿ ಮಗನ ವಯಸ್ಸು 21 ಮೀರಬಾರದು. ಮಗಳು ಮದುವೆಯಾಗುವವರೆಗೂ ವಿಮೆ ಪ್ರಯೋಜನ ಪಡೆದುಕೊಳ್ಳಬಹುದು. ನಿವೃತ್ತರಾಗಿರುವ ಬ್ಯಾಂಕ್‌ ನೌಕರರರಿಗೂ ಸೌಲಭ್ಯ ಲಭ್ಯವಾಗಲಿದೆ ಎಂದು ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟದ (ಎಐಬಿಇಎ) ಉಪಾಧ್ಯಕ್ಷ ಎನ್‌.ವೇಣುಗೋಪಾಲ್‌ ತಿಳಿಸಿದ್ದಾರೆ.[ಬ್ಯಾಂಕ್ ಉದ್ಯೋಗಿಗಳ ಸಂಬಳ, ವೇತನ ಭತ್ಯೆ ಏರಿಕೆ]

bank

ಶೇ. 75ರಷ್ಟು ಆಸ್ಪತ್ರೆ ಮತ್ತು ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತಿತ್ತು. ಸಂಪೂರ್ಣ ವೆಚ್ಚವನ್ನು ಭರಿಸಿಕೊಡುವಂತೆ ನೌಕರರು ಮತ್ತು ಸಂಘಟನೆ ಮನವಿ ಮಾಡಿತ್ತು. ಈಗ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು ವೆಚ್ಚ ಭರಿಸಲು ಐಬಿಎ ಒಪ್ಪಿಗೆ ಸೂಚಿಸಿದೆ. ಕ್ಯಾನ್ಸರ್‌, ಕಿಡ್ನಿಕಸಿಯಂತಹ ಹೆಚ್ಚು ಹಣ ಬೇಕಾಗುವ ರೋಗಗಳ ವೆಚ್ಚನ್ನು ತುಂಬಿಕೊಡಲಾಗುವುದು ಎಂದು ತಿಳಿಸಿದರು.

ನೌಕರರ ಮಕ್ಕಳ ಪರೀಕ್ಷೆ ಸಂದರ್ಭ, ಹಿರಿಯರ ಆರೈಕೆ ಮತ್ತಿತರ ಕಾರಣಗಳಿಗಾಗಿ ಗರಿಷ್ಠ 2 ವರ್ಷ ವೇತನ ಸಹಿತ ನೀಡಲು ಮನವಿ ಮಾಡಲಾಗಿತ್ತು. ಆದರೆ ಈ ಬೇಡಿಕೆಗೆ ವೇತನ ಪರಿಷ್ಕರಣೆ ಸಂದರ್ಭ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.[ಮುದ್ರಾ ಬ್ಯಾಂಕ್ ಬಂತು, ಸಾಲದ ತಲೆಬಿಸಿ ಹೋಯ್ತು]

ದೇಹದ ಅಂಗಗಳನ್ನು ಅಂದರೆ ಕಿಡ್ನಿ, ಕಣ್ಣು ದಾನ ಮಾಡಿದರೆ ಅಂಥವರಿಗೆ ಒಂದು ತಿಂಗಳ ವಿಶೇಷ ರಜೆ ನೀಡಲಾಗುವುದು. ಸಿಜೇರಿಯನ್‌ ಹೆರಿಗೆಗೆ ಮಾತ್ರ ಇದ್ದ 50 ಸಾವುರ ರೂ. ವೈದ್ಯಕೀಯ ವೆಚ್ಚವನ್ನು ಸಹಜ ಹೆರಿಗೆಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು.[ಪಡಿತರ ಸಬ್ಸಿಡಿಯೂ ನೇರವಾಗಿ ಬ್ಯಾಂಕ್ ಖಾತೆಗೆ]

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಇಲಾಖೆಗಳ ಭರವಸೆ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು. ಭಾರತೀಯ ಬ್ಯಾಂಕುಗಳ ಒಕ್ಕೂಟದ ಹೊಸ ಒಪ್ಪಂದದಿಂದಾಗಿ ಬ್ಯಾಂಕ್ ನೌಕರರ ವೇತನವನ್ನು ನವೆಂಬರ್ 1, 2012ರಿಂದ ಅನ್ವಯವಾಗುವಂತೆ ಶೇ. 15ರಷ್ಟು ಏರಿಕೆ ಮಾಡಲಾಗಿತ್ತು.

English summary
Bengaluru: Bank workers set to get 100 percent medical costs. A new insurance policy says a bank employee who under 10 thousand monthly income he will get complete medical costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X