ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದಿನದ ಬ್ಯಾಂಕ್ ಮುಷ್ಕರದಿಂದಾದ ನಷ್ಟವೆಷ್ಟು?

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಹಾಗೂ ಕೇಂದ್ರ ಸರ್ಕಾರದ ನಡುವೆ ಒಮ್ಮತ ಮೂಡದ ಕಾರಣ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಾಯಿತು. ಜುಲೈ 29ರ ಒಂದು ದಿನದ ಅಖಿಲ ಭಾರತ ಬ್ಯಾಂಕ್ ಗಳ ಮುಷ್ಕರದಿಂದ
12 ಸಾವಿರ ಕೋಟಿ ಹಾಗೂ 15 ಸಾವಿರ ಕೋಟಿ ರು ನಷ್ಟವಾಗಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್ ಬಿಐ) ಸೇರಿದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕ್ ಗಳ ಸರಿ ಸುಮಾರು 80 ಸಾವಿರಕ್ಕೂ ಅಧಿಕ ಬ್ರ್ಯಾಂಚ್ ಗಳು ಮುಚ್ಚಲಾಗಿತ್ತು. 10 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಐಸಿಐಸಿಐ ಬ್ಯಾಂಕ್ ಮಾತ್ರ ಮುಷ್ಕರದಲ್ಲಿ ಪಾಲ್ಗೊಂಡಿರಲಿಲ್ಲ. [ವಿಜಯ್ ಮಲ್ಯ ಜತೆಗೆ 5,600 ಮಂದಿ ಸುಸ್ತಿದಾರರು]

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ ಬಿಯು) ಜುಲೈ 29ರಂದು ಅಖಿಲ ಭಾರತ ಬಂದ್ ಗೆ ಕರೆ ನೀಡಿತ್ತು. ಇದಕ್ಕೆ ಉದ್ಯೋಗಿಗಳ ಒಕ್ಕೂಟ (ಎಐಬಿಇಎ) ಪೂರ್ಣ ಬೆಂಬಲ ನೀಡಿದ್ದರಿಂದ ಬಂದ್ ಯಶಸ್ವಿಯಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಮ್ ಅವರು ಹೇಳಿದ್ದಾರೆ.

ಮುಷ್ಕರ ಏಕೆ?

ಮುಷ್ಕರ ಏಕೆ?

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ, ವೇತನ ಪರಿಷ್ಕರಣೆ, ಬ್ಯಾಂಕ್ ಗಳ ವಿಲೀನಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳ ಜೊತೆಗೆ ಈ ಹಿಂದೆ ಒಕ್ಕೂಟ ನೀಡಿರುವ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನು ನೌಕರರ ಒಕ್ಕೂಟ ಹೇಳಿದೆ.

ಎಷ್ಟು ಮಂದಿ ?

ಎಷ್ಟು ಮಂದಿ ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲದೆ ಖಾಸಗಿ ಬ್ಯಾಂಕ್, ವಿದೇಶಿ ಬ್ಯಾಂಕ್ ಸರಿ ಸುಮಾರು 80,000 ಬ್ರ್ಯಾಂಚ್ ಗಳಿಂದ 10 ಲಕ್ಷಕ್ಕೂ ಅಧಿಕ ಉದ್ಯೋಗಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಏನು ಸಮಸ್ಯೆ ಆಗಿತ್ತು

ಏನು ಸಮಸ್ಯೆ ಆಗಿತ್ತು

ಚೆಕ್ ಕ್ಲಿಯರೆನ್ಸ್, ನಗದು ಜಮೆ, ವಿಥ್ ಡ್ರಾ ಸೇರಿದಂತೆ ಸರ್ಕಾರಿ ಬಾಂಡ್ ಹರಾಜು, ಖಜಾಂಚಿ ಕಾರ್ಯ ನಿರ್ವಹಣೆಗೆ ಸಮಸ್ಯೆಯಾಯಿತು. ಅದರೆ, ಕೆಲವು ಹರಾಜು ಪ್ರಕ್ರಿಯೆಗೆ ಬಿಡ್ ಮಾಡಲು ಅನುವು ಮಾಡಿಕೊಡಲಾಗಿತ್ತು.

ಬೆಂಬಲ ಸೂಚಿಸಿದ ಒಕ್ಕೂಟಗಳು

ಬೆಂಬಲ ಸೂಚಿಸಿದ ಒಕ್ಕೂಟಗಳು

ಯುಎಫ್ ಬಿಯು, ಎಐಬಿಇಎ, ಎಐಬಿಒಸಿ, ಎನ್ ಸಿಬಿಇ, ಎಐಬಿಒಎ, ಬಿಇಎಫ್ ಐ, ಐಎನ್ ಬಿಇಎಫ್, ಐಎನ್ ಬಿಒಸಿ, ಎನ್ ಒ ಬಿಡಬ್ಲ್ಯೂ, ಎನ್ ಒ ಬಿಒ ಮುಂತಾದ ಒಕ್ಕೂಟಗಳು

English summary
Services at around 80,000 bank branches in the country were hit on Friday as employees of public sector banks went on a one-day strike to protest the proposed merger of the State Bank of India (SBI) associates with the parent and other issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X