ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಉದ್ಯೋಗಿಗಳಿಗೆ ಸಂಬಳ, ವೇತನ ಭತ್ಯೆ ಏರಿಕೆ

By Mahesh
|
Google Oneindia Kannada News

ಮುಂಬೈ, ಮೇ.26: ಸುಮಾರು 43 ಬ್ಯಾಂಕುಗಳ 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಭಾರತೀಯ ಬ್ಯಾಂಕುಗಳ ಒಕ್ಕೂಟದ ಹೊಸ ಒಪ್ಪಂದದಿಂದಾಗಿ ಶೇ 15ರಷ್ಟು ಸಂಬಳ, ವೇತನ ಭತ್ಯೆ ಏರಿಕೆಯಾಗಲಿದೆ.

ನೂತನ ಸಂಬಳ ಏರಿಕೆ ದರಗಳು ನವೆಂಬರ್ 1, 2012ರಿಂದ ಅನ್ವಯವಾಗಲಿದೆ. ಬಹುತೇಕ ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ಯೋಗಿಗಳಿಗೆ ಈ ಕೊಡುಗೆ ಸಿಗಲಿದೆ. ಕೆಲ ವಿದೇಶಿ ಬ್ಯಾಂಕ್ ಗಳು ಶೇ 15ರಷ್ಟು ಸಂಬಳ ಏರಿಕೆಗೆ ಸಹಿ ಹಾಕಿವೆ. ಬ್ಯಾಂಕುಗಳ ಮೇಲೆ ಇದರಿಂದ 4,275 ಕೋಟಿ ರು ಅಧಿಕ ಹೊರೆ ಬೀಳಲಿದೆ ಎಂದು ಬ್ಯಾಂಕ್ ಒಕ್ಕೂಟದ ಅಧ್ಯಕ್ಷ ಟಿಎಂ ಬಾಸಿನ್ ಹೇಳಿದ್ದಾರೆ.

ಅಧಿಕಾರಿಗಳ ಮಟ್ಟದಲ್ಲಿ ಉದಾಹರಣೆಗೆ 14,500 ರು ನಿಂದ 52,000 ರು ಸಂಬಳ ಶ್ರೇಣಿಯವರು 23,700 ರು ನಿಂದ 85,000 ರು ಶ್ರೇಣಿ ತನಕ ಸಂಬಳ ಪಡೆದುಕೊಳ್ಳಲಿದ್ದಾರೆ. [Q4: ಕೆನರಾ ಬ್ಯಾಂಕ್ ಆದಾಯ ಇಳಿಕೆ, ಲಾಭವೂ ಅಷ್ಟಕಷ್ಟೇ!]

Bank Employees to get 15% Salary Hike

ಹೊಸ ಒಪ್ಪಂದದ ಪ್ರಕಾರ ಸಿಬ್ಬಂದಿಗಳಿಗೆ ಮೂಲ ವೇತನದ ಶೇ 7.75ರಷ್ಟು ವಿಶೇಷ ಭತ್ಯೆ ಸಿಗಲಿದೆ. ಇದರ ಜೊತೆಗೆ ತುಟ್ಟಿಭತ್ಯೆ ಕೂಡಾ ತಕ್ಷಣದಿಂದಲೇ ಪಡೆಯಬಹುದು. ಅಧಿಕಾರಿ ಗಳಿಗೆ ನಾಲ್ಕಾರು ತಿಂಗಳುಗಳ ನಂತರ ಪರಿಷ್ಕೃತ ದರದ ಸಂಬಳ ಜಾರಿಯಾಗಲಿದೆ.

ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡಾ ಹೆಚ್ಚುವರಿಯಾಗಿ ರಜಾದಿನವಾಗಿ ಘೋಷಿಸಲಾಗಿದೆ.

English summary
Salaries and allowances of bank employees will increase by 15 per cent after bank unions and industry body Indian Banks’ Association (IBA) on Monday signed a wage deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X