ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಲ್ಲಿ ಬೆಂಗಳೂರು ಐಟಿಇ.ಬಿಜ್ ಸೆಬಿಟ್ ಇಂಡಿಯಾ

By Prasad
|
Google Oneindia Kannada News

ಬೆಂಗಳೂರು, ಅ. 18 : ಬೆಂಗಳೂರಿನಲ್ಲಿ ನವೆಂಬರ್ 12ರಿಂದ 14ರವರೆಗೆ ಬೆಂಗಳೂರು ಐಟಿಇ.ಬಿಜ್ - ಸೆಬಿಟ್ ಇಂಡಿಯಾ ಐಟಿ ಸಮಾವೇಶ ನಡೆಯಲಿದೆ. ಈ ಸಮಾವೇಶ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಇಂಬು ನೀಡಲಿದ್ದು, ಜಾಗತಿಕ ಸಂಪರ್ಕಕ್ಕೆ ಸೂಕ್ತ ವೇದಿಕೆ ಕಲ್ಪಿಸಲಿದೆ.

ಈ ಬಾರಿ ಜರ್ಮನಿ ಮೂಲದ ಹನೋವರ್ ಮಿನಾಲೊ ಫೇರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಚ್‌ಎಂಎಫ್‌ಐ) ನೊಂದಿಗೆ ಸೇರಿ ಈ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ದಿಸೆಯಲ್ಲಿ ಕರ್ನಾಟಕ ಎಚ್‌ಎಂಎಫ್‌ಐ ಕಂಪನಿ ಜತೆ ಒಪ್ಪಂದಕ್ಕೆ ಸಹಿಹಾಕಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಎಸ್ಆರ್ ಪಾಟೀಲ ಅವರು ಶುಕ್ರವಾರ ಇಲ್ಲಿ ಪ್ರಕಟಿಸಿದರು.

ಬೆಂಗಳೂರು ಐಟಿಇ ಡಾಟ್ ಬಿಜ್ ಭಾರತದ ಮುಂಚೂಣಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ‍್ಯಕ್ರಮವಾಗಿದ್ದು ಕರ್ನಾಟಕ ಸರ್ಕಾರ 1998ರಲ್ಲಿ ಆರಂಭಿಸಿತ್ತು. (ಈ ಹಿಂದೆ ಇದಕ್ಕೆ ಬೆಂಗಳೂರ್ ಐಟಿಡಾಟ್‌ಕಾಮ್ ಎನ್ನಲಾಗುತ್ತಿತ್ತು.) ಸೆಬಿಟ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ಕಾರ‍್ಯಕ್ರಮವಾಗಿದ್ದು ಸೆಬಿಟ್ ಇಂಡಿಯಾ 2014 ಭಾರತದಲ್ಲಿ ಮೊದಲ ಕಾರ‍್ಯಕ್ರಮವಾಗಿದೆ. ವಿಶ್ವದ ಎರಡು ಮುಂಚೂಣಿಯ ಮಾಹಿತಿ ತಂತ್ರಜ್ಞಾನ ಕಾರ‍್ಯಕ್ರಮಗಳು ಕೈಜೋಡಿಸುತ್ತಿವೆ. [ಕರ್ನಾಟಕದ ನೂತನ ಕೈಗಾರಿಕಾ ನೀತಿ]

Bangalore ITE BIZ 2014 - CeBIT India in November

ಬೆಂಗಳೂರು ಐಟಿಇಡಾಟ್‌ಬಿಜ್ 2014 ಸೆಬಿಟ್ ಇಂಡಿಯಾದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು ಹಲವಾರು ತಂತ್ರಜ್ಞಾನ ಕಂಪನಿಗಳು ಭಾಗವಹಿಸಲಿವೆ. ಇವುಗಳಲ್ಲಿ ಜಾಗತಿಕವಾಗಿ ಅಗ್ರಮಾನ್ಯ ತಂತ್ರಜ್ಞಾನದ ಬ್ರಾಂಡ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ತಂತ್ರಜ್ಞಾನ ಕಂಪನಿಗಳು, ಜೊತೆಗೆ ಆರಂಭ ಹಂತದ ತಂತ್ರಜ್ಞಾನ ಕಂಪನಿಗಳು ಸೇರಿದ್ದು ಈ ಕಾರ‍್ಯಕ್ರಮ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್(ಬಿಐಇಸಿ)ನಲ್ಲಿ ನಡೆಯಲಿದೆ.

ಈ ಕಾರ‍್ಯಕ್ರಮ ಇತ್ತೀಚಿನ ತಂತ್ರಜ್ಞಾನಗಳನ್ನು ಮತ್ತು ನವೀನತೆಗಳನ್ನು ಪ್ರದರ್ಶಿಸಲಿದ್ದು ಚಿಂತನೆಯ ನಾಯಕತ್ವಕ್ಕೆ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರಕ್ಕೆ ಸೂಕ್ತ ವೇದಿಕೆಯನ್ನು ಸೃಷ್ಟಿಸಲಿದೆ. ಕಾರ‍್ಯಕ್ರಮದ ಮತ್ತೊಂದು ಪ್ರಮುಖ ಅಂಶ ಎಂದರೆ ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡಾಟಾ ಅನಾಲಿಟಿಕ್ಸ್, ಎಂಟರ್‌ಪ್ರೈಸ್ ಮೊಬಿಲಿಟಿ ಮತ್ತು ಸೋಷಿಯಲ್ ಬಿಸಿನೆಸ್ ಕುರಿತ ಪ್ರಮುಖ ಮಾಹಿತಿ ತಂತ್ರಜ್ಞಾನ ಒಲವುಗಳನ್ನು ಕುರಿತು ಚರ್ಚೆಗಳಾಗಿವೆ.

English summary
Minister for Information Technology, Biotechnology, Planning, Statistics, Science and Technology S R Patil announced on Friday that Bangalore ITE.Biz, India’s flagship event will jointly be held with CeBIT India at Bangalore International Exhibition Centre on November 12, 13 and 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X