ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಬಿಟ್ಟು ಐಗೇಟ್ ಸಿಇಒ ಆಗಿದ್ದ ಅಶೋಕ್ ರಾಜೀನಾಮೆ

By Mahesh
|
Google Oneindia Kannada News

ಬೆಂಗಳೂರು, ಅ.07: ಇನ್ಫೋಸಿಸ್ ತೊರೆದು ಐಗೇಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರಾಗಿದ್ದ ಅಶೋಕ್ ವೆಮೂರಿ ಅವರು ಈಗ ಐಗೇಟ್ ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ.

ಫ್ರೆಂಚ್ ಐಟಿ ಸಂಸ್ಥೆ ಕ್ಯಾಪ್ ಜೆಮಿನಿ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಸುಮಾರು 4 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಸಂಸ್ಥೆ ಐಗೇಟ್ ಅನ್ನು ಪ್ಯಾರೀಸ್ ಮೂಲದ ಕ್ಯಾಪ್ ಜೆಮಿನಿ ಖರೀದಿಸಿತ್ತು. ಸಾಫ್ಟ್ ವೇರ್ ಕನ್ಸಲ್ಟಿಂಗ್ ಕ್ಷೇತ್ರದ ಬಹುದೊಡ್ಡ ಡೀಲ್ ಇದಾಗಿತ್ತು. ಈ ಒಪ್ಪಂದವಾದ ಆರು ತಿಂಗಳ ಬಳಿಕೆ ಐಗೇಟ್ ಸಂಸ್ಥೆಗೆ ಅಶೋಕ್ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.[ನ್ಯೂಜೆರ್ಸಿಯ ಐಗೇಟ್ ಖರೀದಿಸಿದ ಪ್ಯಾರೀಸ್ ನ ಕ್ಯಾಪ್ ಜೆಮಿನಿ]

Ashok Vemuri, CEO of IGATE quits, Capgemini

ಯುಎಸ್ ಷೇರುಪೇಟೆಗಳಲ್ಲಿ ವ್ಯವಹರಿಸುವ ಐಟಿ ಸರ್ವೀಸ್ ನೀಡುವ ಐಗೇಟ್ ಸಂಸ್ಥೆ ನ್ಯೂ ಜೆರ್ಸಿಯಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿದೆ. ಸಂಸ್ಥೆ ಆದಾಯ ಸುಮಾರು 1.3 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಮೆರಿಕ ಅಲ್ಲದೆ ಯುರೋಪ್, ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಐಗೇಟ್ ತನ್ನ ಪ್ರಾಬಲ್ಯ ಹೊಂದಿದೆ. ಕ್ಯಾಪ್ ಜೆಮಿನಿ ಮೌಲ್ಯ 12.5 ಬಿಲಿಯನ್ ಯುರೋಕ್ಕೆ ಏರಲಿದೆ. ಒಟ್ಟಾರೆ 1.9 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. [ಇನ್ಫೋಸಿಸ್ ಬಿಟ್ಟ ಅಶೋಕ್ ಈಗ ಐಗೇಟ್ ಸಿಇಒ]

ಇನ್ಫೋಸಿಸ್ ನ ಅಮೆರಿಕ ಹಾಗೂ ಜಾಗತಿಕ ಉತ್ಪಾದನಾ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. ಸಿಇಒ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದರು. ಅಮೆರಿಕದಲ್ಲಿ ಇನ್ಪೋಸಿಸ್ ಗಟ್ಟಿಯಾಗಿ ನೆಲೆಗೊಳ್ಳಲು ಹಾಗೂ ಸಂಸ್ಥೆ ಅಭಿವೃದ್ಧಿಗೊಳ್ಳಲು ವೆಮೂರಿ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು. ಅಮೆರಿಕದಿಂದ ಸಾಕಷ್ಟು ಲಾಭ ಬರುವಂತೆ ಮಾಡುವಲ್ಲಿ ಅಶೋಕ್ ಯಶಸ್ವಿಯಾಗಿದ್ದರು.

ಇತ್ತ ಫಣೀಶ್ ಮೂರ್ತಿ ಅವರು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿ ಇಅಗೇಟ್ ಸಂಸ್ಥೆ ತೊರೆದ ನಂತರ ಗೆರ್ಹಾಡ್ ವಾಜಿಂಗರ್ ಅವರು ಮಧ್ಯಂತರ ಅಧ್ಯಕ್ಷ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

English summary
French IT services company Capgemini said Ashok Vemuri, CEO of IGATE, has resigned from the company to pursue other interests outside of the company. The announcement from the IT major comes six months after it acquired U.S.-based IT services company iGATE for $4 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X