ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಟ್ ಆಫ್ ಲೀವಿಂಗ್: ಮಲ್ಯರಿಗೂ ಮುಂಚೆ ದೇಶ ತೊರೆದವರು

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 11: ನಮ್ಮ ದೇಶದಲ್ಲಿ, ದೆಹಲಿಯಲ್ಲಿ, ಕರ್ನಾಟಕದಲ್ಲಿ, ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ ಈಗ ಚರ್ಚೆಯಾಗುತ್ತಿರುವುದು ಎರಡೇ ವಿಷಯ. ಒಂದು ರವಿಶಂಕರ್ ಗುರೂಜಿ ಅವರ ಅರ್ಟ್ ಆಫ್ ಲಿವಿಂಗ್ ಕಾರ್ಯಕ್ರಮ ಇನ್ನೊಂದು ವಿಜಯ್ ಮಲ್ಯ ಅವರ ಆರ್ಟ್ ಆಫ್ ಲೀವಿಂಗ್ ಇಂಡಿಯಾ.

'ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು ಹಾಕುತ್ತೇವೆ ಎಂದು ಭರವಸೆ ನೀಡಿತ್ತು. [ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ಆದರೆ, 9,000 ಕೋಟಿ ರು ಸಾಲ ಹೊತ್ತಿರುವ ಉದ್ಯಮಿ, ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ಅವರು ವಿದೇಶಕ್ಕೆ ಹಾರಲು ನೆರವಾಗುತ್ತಿದೆ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಲ್ಯ, ಮೋದಿ, ಸಿಬಿಐ ವಿರುದ್ಧ ಕಿಡಿಕಾರಿದ್ದು ಗೊತ್ತಿರಬಹುದು.

ಇದರ ಜೊತೆಗೆ ಮಲ್ಯ ಅವರ ವಿರುದ್ಧ ಟ್ವಿಟ್ಟರ್ ಟ್ರೆಂಡ್ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ಯಶಸ್ವಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಮತ್ತೊಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದರು. [ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಸಾಮಾಜಿಕ ಜಾಲ ತಾಣಗಳಲ್ಲಿ ಈ ಟ್ರೆಂಡ್ ವಾರ್ ನಡೆಯುತ್ತಿರುವಾಗಲೇ ಮಲ್ಯರಂತೆ ಇನ್ನೂ ಅನೇಕ ಉದ್ಯಮಿಗಳು ತನಿಖೆ ಎದುರಿಸುವಾಗ ದೇಶದಿಂದ ಪರಾರಿಯಾದ ಪಟ್ಟಿ ಹೊರ ಬಂದಿತು. ಇವರಲ್ಲಿ ಅನೇಕರು ಯುಪಿಎ ಸರ್ಕಾರದ ನೆರವು ಪಡೆದಿದ್ದು ವಿಶೇಷ. [ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ವಾಣಿಜ್ಯ ಹಗರಣಗಳು]

ವಾರೆನ್ ಆಂಡರ್ಸನ್, ಕಾಂಗ್ರೆಸ್ (1984)

ವಾರೆನ್ ಆಂಡರ್ಸನ್, ಕಾಂಗ್ರೆಸ್ (1984)

1984ರ ಡಿಸೆಂಬರ್ 2,3ರಂದು ಸಂಭವಿಸಿದ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಆಂಡರ್ಸನ್ ಭಾರತದಲ್ಲಿ ಕೇಸ್ ಎದುರಿಸುತ್ತಿದ್ದರು. ಆದರೆ ಒಮ್ಮೆಯೂ ಆಂಡರ್ಸನ್ ವಿಚಾರಣೆಗೆ ಹಾಜರಾಗಿರಲಿಲ್ಲ. ದುರಂತದ ವೇಳೆ ಅಮೆರಿಕಕ್ಕೆ ಆಂಡರ್ಸನ್ ಪರಾರಿಯಾಗಿದ್ದರು. ಆಂಡರ್ಸನ್ ನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನಿರಾಕರಿಸಿತ್ತು. ಒಮ್ಮೆ ಭಾರತಕ್ಕೆ ಬಂದಿದ್ದ ವಾರೆನ್ ಬಂಧನವಾದರೂ ಸುಲಭದಲ್ಲಿ ಜಾಮೀನು ಪಡೆದಿದ್ದ. ವಿಷಾನಿಲ ಸೋರಿಕೆಯಿಂದ 20,000 ಜನ ಸತ್ತರೆ, ಸುಮಾರು 5 ಲಕ್ಷ ಜನ, ಶಾಶ್ವತ ಅಂಗವಿಕಲರಾಗಿದ್ದಾರೆ.

 ಒಟ್ಟಾವಿಯೋ ಕ್ವಟ್ರೋಚಿ, ಕಾಂಗ್ರೆಸ್ (1990)

ಒಟ್ಟಾವಿಯೋ ಕ್ವಟ್ರೋಚಿ, ಕಾಂಗ್ರೆಸ್ (1990)

1980-90 ರ ದಶಕದ ಅತಿದೊಡ್ದ ಹಗರಣ ರುವಾರಿ ಕ್ವಟ್ರೋಚಿ ಸುಲಭವಾಗಿ ಪರಾರಿಯಾಗಿದ್ದ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೇಲೆ ಲಾಭ ಪಡೆದ ಆರೋಪ ಹೊರೆಸಲಾಗಿತ್ತು. 155 ಎಂಎಂ ಫಿರಂಗಿ ಗಳನ್ನು ಬೊಫೋರ್ಸ್ ಎಬಿ ಕಂಪನಿಯಿಂದ ಖರೀದಿಸಲು ಕಿಕ್ ಬ್ಯಾಕ್ ಪಡೆದ ಆರೋಪ. ಸ್ವೀಡಿಷ್ ಮೂಲದ ಕಂಪನಿ 640 ಮಿಲಿಯನ್ ರು (12 ಮಿಲಿಯನ್ ಯುಎಸ್ ಡಾಲರ್) ಮೊತ್ತದ ಕಿಕ್ ಬ್ಯಾಕ್ ಅನ್ನು ಹಿರಿಯ ರಾಜಕಾರಣಿಗಳಿಗೆ ನೀಡಿದ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು.

ಇಟಲಿಯ ನಾವಿಕರು, ಕಾಂಗ್ರೆಸ್ (2012)

ಇಟಲಿಯ ನಾವಿಕರು, ಕಾಂಗ್ರೆಸ್ (2012)

ಕೇರಳದ ಕಡಲ ತೀರದಲ್ಲಿ ಭಾರತೀಯ ಬೆಸ್ತರಿಬ್ಬರನ್ನು ಬೇಹುಗಾರಿಕೆ ಪಡೆಯವರು ಎಂದು ತಪ್ಪು ತಿಳಿದು ಇಟಲಿಯ ನಾವಿಕರು ಹತ್ಯೆಗೈದಿದ್ದರು. ಮಸ್ಸಿಮಿಲಿಯಾನೋ ಲೊಟೊರೆ ಹಾಗೂ ಸಾಲ್ವಟೊರೆ ಗಿರೊನೆ ವಿರುದ್ಧ ಎನ್ ಐಎ ತನಿಖೆ ನಡೆಸಿತ್ತು. ಸೆಪ್ಟೆಂಬರ್ 12, 2014ಕ್ಕೆ ಇಟಲಿಗೆ ಲೊಟೊರೆ ತೆರಳಿದರು. ವೈದ್ಯಕೀಯ ಕಾರಣ ನೀಡಿ ಇಬ್ಬರು ಇಟಲಿಗೆ ತೆರಳಿದವರು ಮತ್ತೆ ಮರಳಲಿಲ್ಲ.

ಲಲಿತ್ ಮೋದಿ, ಕಾಂಗ್ರೆಸ್ (2012)

ಲಲಿತ್ ಮೋದಿ, ಕಾಂಗ್ರೆಸ್ (2012)

ಐಪಿಎಲ್ ನಲ್ಲಿ ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ಕೇಸು ಎದುರಿಸುತ್ತಿರುವ ಐಪಿಎಲ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಲಂಡನ್ನಿಗೆ ತೆರಳಲು ಯಾರು ನೆರವಾದರು ಎಂಬುದು ಇನ್ನೂ ಚರ್ಚೆಯಲ್ಲಿದೆ. ಯುಪಿಎ ಹಾಗೂ ಎನ್ ಡಿಎ ಎರಡು ಸರ್ಕಾರದ ನೆರವು ಸಿಕ್ಕಿದೆ ಎಂಬ ಸುದ್ದಿಯೂ ಇದೆ. ರೆಡ್ ಕಾರ್ನರ್ ನೋಟಿಸ್, ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ.

English summary
Congress vice-president Rahul Gandhi on Thursday lashed out at NDA government and asked how liquor baron Vijay Mallya managed to flee the country and questioned Prime Minister Narendra Modi's commitment to bring back black money stashed in safe havens abroad.Here is the list of people who excelled from India before Vijay Mallya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X