ಅರ್ನಬ್ ಗೋಸ್ವಾಮಿ ಹೊಸ ಸಾಹಸ 'ರಿಪಬ್ಲಿಕ್' ಆರಂಭ ಯಾವಾಗ?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: ಬಹು ಚರ್ಚಿತ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ಸಂಸ್ಥೆಯ ಸಂಪಾದಕ ಹುದ್ದೆ ತೊರೆದದ್ದು ನಿಮಗೆ ಗೊತ್ತಿದೆ. ಅವರು ಈಗ ಏನ್ ಮಾಡ್ತಾ ಇದಾರೆ ಎಂಬ ಕುತೂಹಲಕ್ಕೆ ಉತ್ತರ ಈಗ ಸಿಕ್ಕಿದೆ !

ಭಾರತದ ಅತ್ಯಂತ ಜನಪ್ರಿಯ ನಿರೂಪಕ ಅರ್ನಬ್ ಅವರ ಹೊಸ ಸಂಸ್ಥೆ ಬಗ್ಗೆ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. [ಅರ್ನಬ್ ಗೋಸ್ವಾಮಿ ರಾಜೀನಾಮೆ]

Arnab Goswami announces new venture ‘Republic’; social media goes berserk

ರಿಪಬ್ಲಿಕ್ ಹೆಸರಿನ ಸಂಸ್ಥೆ ಬಹುಶಃ ರಿಪಬ್ಲಿಕ್ ಡೇ(ಜನವರಿ 26) ಆರಂಭವಾಗಬಹುದು ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಈಗಾಗಲೇ ಮಾಧ್ಯಮ ಜಗತ್ತಿನಲ್ಲಿರುವ ಉದ್ಯಮಿಗಳು, ಜಾಹೀರಾತು ಸಂಸ್ಥೆಗಳು ಈ ಹೊಸ ಸಂಸ್ಥೆಯಲ್ಲಿ ಬಂಡವಾಳ ಹೂಡಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಅರ್ನಬ್ ಸ್ಥಾನಕ್ಕೆ ಜನಪ್ರಿಯ ನ್ಯೂಸ್ ಎಡಿಟರ್, ನಿರೂಪಕ ರಾಹುಲ್ ಶಿವಶಂಕರ್ ಅವರನ್ನು ಟೈಮ್ಸ್ ನೌ ಕರೆ ತಂದಿದೆ.

1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರಾಗಿದ್ದರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.

English summary
Fire brand journalist Arnab Goswami has announced his new venture named 'Republic'. In an interview to select media, the former Editor-in-Chief of Times Now reportedly said that he is in the process of building his team.
Please Wait while comments are loading...