ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ VS ಅಮೆಜಾನ್, ಗೆದ್ದವರು ಯಾರು?

|
Google Oneindia Kannada News

ಬೆಂಗಳೂರು, ಜೂ. 30: ಇ ಕಾಮರ್ಸ್ ದೈತ್ಯ ಸಂಸ್ಥೆಗಳಲ್ಲಿ ಅತಿಹೆಚ್ಚು ವಿಸಿಟ್ ಪಡೆದುಕೊಳ್ಳುತ್ತಿರುವ ಹೆಗ್ಗಳಿಕೆ ಭಾರತದ ಮಟ್ಟಿಗೆ ಅಮೆಜಾನ್ ಪಾಲಾಗಿದೆ. ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನ್ನು ಹಿಂದಿಕ್ಕಿರುವ ಅಮೆಜಾನ್ ಮೊದಲ ಸ್ಥಾನ ಪಡೆದುಕೊಂಡಿದೆ.

ಗ್ರಾಹಕರಿಗೆ ಪ್ರಿಯವಾದ ಸೇವೆ ನೀಡುವುದರಲ್ಲಿ ಅಮೆಜಾನ್ ಎಲ್ಲರನ್ನು ಮೀರಿಸಿದ್ದು ಭಾರತದ ನಂಬರ್ ವನ್ ಇ ಕಾಮರ್ಸ್ ಜಾಲವಾಗಿ ಹೊರಹೊಮ್ಮಿದೆ. ಕಾಮ್ ಸ್ಕೋರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಅಮೆಜಾನ್ ಅಗ್ರಗಣ್ಯನಾಗಿ ಹೊರಹೊಮ್ಮಿದೆ.[ಆನ್ ಲೈನ್ ಖರೀದಿಗೆ ಗಂಟೆಗಳಷ್ಟೇ ಬಾಕಿ!]

amazon

2015ರ ಮೇಗೆ ಕೊನೆಗೊಂಡಂತೆ ಅಮೆಜಾನ್ 23.6 ಮಿಲಿಯನ್ ವಿಸಿಟರ್ ಗಳನ್ನು ಪಡೆದುಕೊಂಡರೆ, ಫ್ಲಿಪ್ ಕಾರ್ಟ್ 23.3 ಮತ್ತು ಸ್ನ್ಯಾಪ್ ಡೀಲ್ 17.9 ಮಿಲಿಯನ್ ವಿಸಿಟರ್ ಗಳನ್ನು ಹೊಂದಿದ್ದವು ಎಂದು ಕಾಮ್ ಸ್ಕೋರ್ ಪಟ್ಟಿ ತಿಳಿಸಿದೆ.

ಕಳೆದ ವರ್ಷದ ಮೇ ಅಂತ್ಯಕ್ಕೆ 13 ಮಿಲಿಯನ್ ಗ್ರಾಹಕರನ್ನು ಹೊಂದಿದ್ದ ಫ್ಲಿಪ್ ಕಾರ್ಟ್ ಮೊದಲ ಸ್ಥಾನ ಹೊಂದಿತ್ತು. ಅಮೆಜಾನ್ ಮತ್ತು ಸ್ನ್ಯಾಪ್ ಡೀಲ್ 10 ಮಿಲಿಯನ್ ವಿಸಿಟರ್ ಗಳನ್ನು ಹೊಂದಿದ್ದವು. ಈ ವರ್ಷದ ಲೆಕ್ಕಕ್ಕೆ ಹೇಳುವುದಾದರೆ ಅಮೆಜಾನ್ ಶೇ. 142 ಬೆಳವಣಿಗೆ ಹೊಂದಿದ್ದರೆ, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಶೇ. 90 ಬೆಳವಣಿಗೆ ಸಾಧಿಸಿವೆ.

ಯಾವ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ?
ಅಂತರ್ಜಾಲ ತಂತ್ರಜ್ಞರು ಹೇಳುವಂತೆ ರಿಪಿಟ್ ವಿಸಿಟರ್ ಗಳು ಬಹುಮುಖ್ಯರಾಗುತ್ತಾರೆ. ಇವರನ್ನು ಖಾಯಂ ಗ್ರಾಹಕರು ಎಂದೇ ಪರಿಗಣನೆ ಮಾಡಬಹುದು. ಯುನಿಕ್ ವಿಸಿಟರ್ ಗಳನ್ನು ಹೊಸ ಗ್ರಾಹಕರು ಎಂದು ಭಾವಿಸಲಾಗುತ್ತದೆ. ಇವರು ಮತ್ತೆ ಅದೇ ತಾಣಕ್ಕೆ ಭೇಟಿ ನೀಡುತ್ತಾರೋ? ಇಲ್ಲವೋ? ಎಂದು ಹೇಳುವುದು ಅಸಾಧ್ಯ.[ಲ್ಯಾಪ್ ಟಾಪ್ ಬದಲಾಗಿ ಕಲ್ಲು ಕಳಿಸಿದ ಫ್ಲಿಪ್ ಕಾರ್ಟ್!]

ಕೇವಲ ಒಂದು ಕ್ಲಿಕ್ ನಲ್ಲಿ ಖರೀದಿ ಸಾಧ್ಯವಾಗಿರುವುದು, ಆನ್ ಲೈನ್ ಮಾರ್ಕೆಟಿಂಗ್ ಕ್ರೇಜ್ ಹೆಚ್ಚಿರುವುದು ಈ ಬಗೆಯ ಬೆಳವಣಿಗೆಗೆ ಕಾರಣ ಎಂದು ರಿಟೈಲ್ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಅರವಿಂದ್ ಸಿಂಘಾಲ್ ಹೇಳುತ್ತಾರೆ.

ತಾಣದಲ್ಲಾದ ಒಟ್ಟು ವ್ಯಾಪಾರ
ಅಮೆಜಾನ್ ತನ್ನ ಒಟ್ಟು ವ್ಯಾಪಾರದ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ವರದಿಗಳು ಹೇಳುವಂತೆ ಸಪ್ಟೆಂಬರ್ 2014ರ ಅಂತ್ಯಕ್ಕೆ ಅಮೆಜಾನ್ 1 ಬಿಲಿಯನ್ ಡಾಲರ್ ವ್ಯಾಪಾರ ಮಾಡಿದೆ ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್ ಅಂತ್ಯಕ್ಕೆ ಫ್ಲಿಪ್ ಕಾರ್ಟ್ 8 ಬಿಲಿಯನ್ ಡಾಲರ್ ವಹಿವಾಟು ಗುರಿ ಹೊಂದಿತ್ತು. ಆದರೆ 76 ಸಾವಿರ ಕೋಟಿ ಹತ್ತಿರ ಇದೆ ಎಂದು ಹೇಳಲಾಗಿದೆ. ಸ್ನ್ಯಾಪ್ ಡೀಲ್ ಸಹ ತನ್ನ ಗುರಿ ಮುಟ್ಟಲು ಸಾಧ್ಯವಾಗದೇ ಒದ್ದಾಡುತ್ತಿದೆ.

ಭಾರತದಲ್ಲಿ ಆನ್ ಲೈನ್ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ತಾಣಗಳು ಜನರನ್ನು ತಲುಪಲು ವಿಭಿನ್ನ ಪ್ರಯತ್ನ ಮಾಡುತ್ತಿವೆ. ಅಮೆಜಾನ್, ಫ್ಲಿಪ್ ಕಾರ್ಟ್,ಜಬಾಂಗ್, ಸ್ಮ್ಯಾಪ್ ಡೀಲ್, ಮಿಂಟ್ರಾ ಸೇರಿದಂತೆ ನೂರಾರು ಕಂಪನಿಗಳು ಆಫರ್ ಗಳ ಸುರಿಮಳೆ ಸುರಿಸುತ್ತಿವೆ.

English summary
All the major e-commerce players like Flipkart, Amazon, Snapdeal have a long road to cover for becoming completely mature e-commerce players. According to the data from Internet analytics firm comScore, Amazon India now gets more traffic than Flipkart and Snapdeal. Amazon.in received 23.6 million visitors as compared to 23.5 million visitors of Flipkart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X