ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SIM: ಇಂಟರ್ನೆಟ್ ಬಳಸದೆ ವಿಡಿಯೋ ತೋರಿಸುವ App

By Mahesh
|
Google Oneindia Kannada News

ಬೆಂಗಳೂರು, ಡಿ.14: ಮನರಂಜನೆ ಎಂಬುದು ಇಂದು ಕೇವಲ ಟಿವಿ, ಚಿತ್ರಮಂದಿರಗಳಿಗೆ ಮಾತ್ರ ಸೀಮಿತವಾಗಿಲ್ಲ, ಮೊಬೈಲ್ ರೂಪದಲ್ಲಿ ನಮ್ಮ ಜೇಬಿಗೇ ನೇರವಾಗಿ ಲಗ್ಗೆ ಹಾಕಿದೆ. ಅದರಲ್ಲೂ ಇಂಟರ್ನೆಟ್ ಇಲ್ಲದಿದ್ದರೆ ಮೊಬೈಲ್ ನ ಬಹುತೇಕ ಆಪ್ ಗಳು ನಿರ್ಜೀವವಾಗುತ್ತವೆ. ಮೊಬೈಲ್ ನಲ್ಲಿ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕೆಂದರೆ ಇಂಟರ್ನೆಟ್ ಬೇಕೇಬೇಕು.

ಆದರೆ, ಇಂಟರ್ ನೆಟ್ ಉಪಯೋಗಿಸದಂತೆ ವಿಡಿಯೋಗಳನ್ನು ನೋಡಲು ಸಾಧ್ಯವಾಗುವಂತಿದ್ದರೆ? ಇದನ್ನು ಸಾಧ್ಯವಾಗಿಸುತ್ತಿದೆ ಹೊಚ್ಚ ಹೊಸ ಮೊಬೈಲ್ ಸೇವಾ ಸೌಲಭ್ಯ - "ಶೋ ಇನ್ ಮೊಬೈಲ್". ಇಂಟರ್ನೆಟ್ ಪ್ಯಾಕ್ ಸಹಾಯವಿಲ್ಲದೆ ವೇಗವಾಗಿ ಮನರಂಜನೆ, ಮನೋವಿಕಾಸ ಆಗುವಂತಹ ಕಾರ್ಯಕ್ರಮಗಳನ್ನು ಚಂದಾದಾರರು ಕಣ್ತುಂಬಿಕೊಳ್ಳಬಹುದು.[ರಕ್ತದಾನಕ್ಕೆ ಬ್ಲಡ್ ಫಾರ್ ಶ್ಯೂರ್]

ಸದಾ ನಮ್ಮ ಜೊತೆಗೇ ಇರುವ ವಸ್ತು ಎಂದರೆ ಅದು ಮೊಬೈಲ್. ಅದೊಂದು ರೀತಿ ಸರ್ವಾಂತರ್ಯಾಮಿ ಇದ್ದಂತೆ. ಬಸ್ಸು, ರೈಲು, ವಿಮಾನದಲ್ಲಿ ಪ್ರಯಾಣಿಸುವಾಗ, ಟಾಕ್ಸಿ-ಆಟೋದಲ್ಲಿ ಕೂತು ಎಲ್ಲಿಗೋ ಹೊರಟಾಗ ತಕ್ಷಣ ನಮ್ಮ ಕೈಗೆ ರವಾನೆಯಾಗುವ ವಸ್ತು ಎಂದರೆ ಮೊಬೈಲ್. [ಟ್ರೂ ಕಾಲರ್ ನ ಮೆಸೆಂಜರ್ ಎಂಬ 'ಸ್ಮಾರ್ಟ್' ಅಪ್ಲಿಕೇಷನ್]

ಆದರೆ, ಮೊಬೈಲ್ ನಲ್ಲಿ ವಿಡಿಯೋಗಳನ್ನು ವೀಕ್ಷಿಸಬೇಕಾದರೆ ಕೆಲವು ಪ್ರಮುಖ ಸಮಸ್ಯೆಗಳು ಎದುರಾಗುತ್ತವೆ. ಬಫರಿಂಗ್, ಕಡಿಮೆ ಗುಣಮಟ್ಟದ ವಿಡಿಯೋಗಳು, ಬ್ಯಾಟರಿ ಸಮಸ್ಯೆ ಹಾಗೂ ಅತಿ ಮುಖ್ಯವಾಗಿ ಇಂಟರ್ ನೆಟ್ ಬಳಕೆಯ ಹೆಚ್ಚಿನ ಹೊರೆ, ಖರ್ಚು ವೆಚ್ಚಗಳು ತಪ್ಪಿದ್ದಲ್ಲ. [ಮೈಕ್ರೋಸಾಫ್ಟ್ ನಿಂದ ಕಮರ್ಷಿಯಲ್ ಕ್ಲೌಡ್ ಸೇವೆ, ಏನಿದರ ಲಾಭ?]

ಇದ್ಯಾವುದೇ ಸಮಸ್ಯೆ ಇಲ್ಲದಂತೆ, ಇಂಟರ್ ನೆಟ್ ಉಪಯೋಗಿಸದಂತೆ ವಿಡಿಯೋಗಳನ್ನು, ಸಿನಿಮಾಗಳನ್ನು, ಟಿವಿ ಧಾರಾವಾಹಿಗಳನ್ನು, ರಿಯಾಲಿಟಿ ಶೋಗಳನ್ನು ನೋಡುವಂತಹ ಸೌಲಭ್ಯವನ್ನು 'ಶೋ ಇನ್ ಮೊಬೈಲ್ - (SIM )' ಒದಗಿಸುತ್ತದೆ.

ಶೋ ಇನ್ ಮೊಬೈಲ್ - (SIM )’ ಆಪ್ ಡೌನ್ ಲೋಡ್

ಶೋ ಇನ್ ಮೊಬೈಲ್ - (SIM )’ ಆಪ್ ಡೌನ್ ಲೋಡ್

ಚಂದಾದಾರರು 'ಶೋ ಇನ್ ಮೊಬೈಲ್ - (SIM )' ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು(ವೆಬ್ ಸೈಟ್ ನೋಡಿ), ತಮ್ಮ ಸಮೀಪದ 'ಆನ್ ದ ಮೂವ್' (ಓಟಿಎಂ) ಪಾಯಿಂಟ್ ಗಳಿಗೆ ಭೇಟಿ ನೀಡಿ ಕಂಟೆಂಟ್ ಸಿಂಕ್ ಮಾಡಿಕೊಳ್ಳಬಹುದು. ಸಿಂಕ್ ಮಾಡುವ ಪ್ರಕ್ರಿಯೆಯು ಅತಿ ಸುಲಭ ಹಾಗೂ ಸರಳ. ಸರಿಸುಮಾರು 3-4 ಗಂಟೆಗಳ ಕಾಲಾವಧಿಯ ಕಂಟೆಂಟನ್ನು ಕೆಲವೇ ನಿಮಿಷಗಳಲ್ಲಿ ಸಿಂಕ್ ಮಾಡಿಕೊಳ್ಳಬಹುದು.

ಗುಣಮಟ್ಟದಲ್ಲಿ ರಾಜಿ ಇಲ್ಲದ ಸುರಕ್ಷಿತ ವಿಡಿಯೋಗಳು

ಗುಣಮಟ್ಟದಲ್ಲಿ ರಾಜಿ ಇಲ್ಲದ ಸುರಕ್ಷಿತ ವಿಡಿಯೋಗಳು

ಇಲ್ಲಿನ ವಿಡಿಯೋಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಕಂಟೆಂಟ್ ಪ್ರೊವೈಡರ್ ಗಳ ಮುಖೇನ ನೇರವಾಗಿ ಮೂಲಕ ನಿಮ್ಮ ಮೊಬೈಲ್ ತಲುಪುತ್ತವೆ. ದಿನ ನಿತ್ಯದ ಪ್ರಯಾಣದಲ್ಲಿ ಚಂದಾದಾರರಿಗೆ ಅನುಕೂಲವಾಗುವಂತೆ 'ಶೋ ಇನ್ ಮೊಬೈಲ್ - (SIM )' ಓಟಿಎಂ ಸಂಪರ್ಕ ಜಾಲವನ್ನು ಆಯ್ದ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು.

ಅತಿ ಕಡಿಮೆ ವೆಚ್ಚದ ಚಂದಾದಾರ ದರ

ಅತಿ ಕಡಿಮೆ ವೆಚ್ಚದ ಚಂದಾದಾರ ದರ

ಇದಕ್ಕೆ ತಗಲುವ ವೆಚ್ಚ ತಿಂಗಳಿಗೆ ಕೇವಲ ರು. 75 ಮಾತ್ರ. ಆದರೆ, ಡಿಸೆಂಬರ್ 31, 2015ರ ವರೆಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಕಂಟೆಂಟ್ ಸಿಂಕ್ ಮಾಡಿಕೊಳ್ಳಬಹುದಾಗಿದೆ. ಡಿಸೆಂಬರ್ 1 ರಿಂದ ಅನೇಕ ಕಡೆ ಓಟಿಎಂ ಪಾಯಿಂಟ್ ಗಳು ಲಭ್ಯವಿದೆ. OTM ಪಾಲುದಾರರಾಗಲು 8150 950 100ಗೆ ಕರೆ ಮಾಡಿ, ಕಂಟೆಂಟ್ ಪ್ರೊವೈಡರ್ ಆಗಲು 8150 950 400ಗೆ ಕರೆ ಮಾಡಿ.

ನಕಲಿ ಸಿಡಿ ಹಾವಳಿಗೆ ತಡೆಯಲು ಇದು ಉಪಾಯ

ನಕಲಿ ಸಿಡಿ ಹಾವಳಿಗೆ ತಡೆಯಲು ಇದು ಉಪಾಯ

ನಕಲಿ ಸಿಡಿ ಹಾವಳಿಗೆ - ಪೈರಸಿ ಸಮಸ್ಯೆಗೆ ಇದು ಕಡಿವಾಣ ಹಾಕುವುದರ ಜೊತೆಗೆ ಅತ್ಯುತ್ತಮ ಗುಣಮಟ್ಟದ, ಒರಿಜಿನಲ್ ವಿಡಿಯೋಗಳನ್ನು ವೀಕ್ಷಿಸಬಹುದು. ಎಲ್ಲೇ ಇರಿ, ಹೇಗೇ ಇರಿ 'ಶೋ ಇನ್ ಮೊಬೈಲ್ - (SIM )' ಆಪ್ ಮೂಲಕ ಒಮ್ಮೆ ಕಂಟೆಂಟ್ ಸಿಂಕ್ ಮಾಡಿಕೊಂಡರೆ ಸಾಕು, ಯಾವುದೇ ನೆಟ್ ವರ್ಕ್ ಇಲ್ಲದಿದ್ದರೂ, ಅಡೆತಡೆ ಇಲ್ಲದಂತೆ ವಿಡಿಯೋಗಳನ್ನು ವೀಕ್ಷಿಸಬಹುದು.

ಅಜೈಲ್ ಐಡಿಸಿ ಕಂಪನಿ ಕುರಿತು

ಅಜೈಲ್ ಐಡಿಸಿ ಕಂಪನಿ ಕುರಿತು

ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನೂತನ ರೀತಿಯ ಸೇವೆಗಳು ಹಾಗೂ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿರುವ ಸಾಫ್ಟ್ ವೇರ್ ಸಂಸ್ಥೆ "Agilets Innovations Private Limited". ಇದು "AgileIDC" ಸಮೂಹದ ಅಧೀನ ಸಂಸ್ಥೆಯಾಗಿದ್ದು, ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಉದ್ಯಮಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಅತ್ಯುತ್ಕೃಷ್ಟವಾದ ಪರಿಹಾರಗಳನ್ನು ನೀಡುತ್ತಿರುವ ಸಂಸ್ಥೆ

 ಡಿಜಿಟಲ್ ಇಂಡಿಯಾ ಅಜೆಂಡ

ಡಿಜಿಟಲ್ ಇಂಡಿಯಾ ಅಜೆಂಡ

ಅಜೈಲೈಟ್ಸ್ ಇನ್ನೋವೇಷನ್ಸ್ ಹಾಗೂ ಶೋ ಇನ್ ಮೊಬೈಲ್ ಕೇವಲ ಸರ್ಕಾರದ ಡಿಜಿಟಲ್ ಇಂಡಿಯಾ ಅಜೆಂಡವನ್ನಷ್ಟೇ ಬೆಂಬಲಿಸಿದೆ, ಮಧ್ಯಪೂರ್ವ ಹಾಗೂ ಪೂರ್ವ ಏಷ್ಯಾದ ಡಿಜಿಟಲ್ ಪ್ರಪಂಚದೊಂದಿಗೂ ಕೈಜೋಡಿಸಿದ್ದು ಸರಿಸುಮಾರು 2 ಶತಕೋಟಿ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಿದೆ. ಗ್ರಾಹಕರು ಎಲ್ಲೇ ಇರಲಿ ಅವರಿಗೆ ಅತ್ಯುತ್ತಮ ಗುಣಮಟ್ಟದ ವಿಡಿಯೋಗಳನ್ನು ತಲುಪಿಸುವ ಪ್ರಯತ್ನದಲ್ಲಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದಾದಾರರಿಗೆ ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಕಂಟೆಂಟ್ ಸಿಗಲಿದೆ.ಫೇಸ್ ಬುಕ್ ಪುಟ ನೋಡಿ

English summary
AgileTS Innovations presents SHOW IN MOBILE (SIM) supports the governments Digital India agenda. A Futuristic entertainment Service. Watch Videos on the Move without using Internet. Creating new digital business models for content providers. SIM OTM (On the Move) network is now available for Public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X