ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್, 'ನೋ ವೆಬ್ ಸರ್ವೀಸ್'

By Mahesh
|
Google Oneindia Kannada News

ಬೆಂಗಳೂರು, ಜುಲೈ 07: ಫ್ಯಾಷನ್ ಇ-ರೀಟೈಲ್ ಸಂಸ್ಥೆ ಮಿಂಟ್ರಾ.ಕಾಂ ಹಾದಿಯಲ್ಲೇ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಕೂಡಾ ಸಾಗುತ್ತಿದೆ. ವೆಬ್ ಸೈಟ್ ಮೂಲಕ ಆನ್ ಲೈನ್ ಖರೀದಿ ಮಾಡುತ್ತಿದ್ದ ಗ್ರಾಹಕರಿಗೆ ಇನ್ಮುಂದೆ ಸ್ಮಾರ್ಟ್ ಫೋನ್ ಖರೀದಿಸುವುದು ಅನಿವಾರ್ಯವಾಗಲಿದೆ. ಸೆಪ್ಟೆಂಬರ್ ತಿಂಗಳಿನಿಂದ ವೆಬ್ ಸರ್ವೀಸ್ ಬಂದ್ ಮಾಡುವುದಾಗಿ ಫ್ಲಿಪ್ ಕಾರ್ಟ್ ಹೇಳಿದೆ.

ಫ್ಲಿಪ್ ಕಾರ್ಟ್ ಸಂಸ್ಥೆಯ ಉತ್ಪನ್ನ ವಿಭಾಗದ ಮುಖ್ಯ ಅಧಿಕಾರಿ ಪುನೀತ್ ಸೋನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸೆಪ್ಟೆಂಬರ್ ತಿಂಗಳಿನಿಂದ ಫ್ಲಿಪ್ ಕಾರ್ಟ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮಾತ್ರ ಕಾರ್ಯ ನಿರ್ವಹಿಸಲಿದೆ. ವೆಬ್ ಸೈಟ್ ಸೇವೆಯನ್ನು ಬಂದ್ ಮಾಡಲಾಗುವುದು ಎಂದಿದ್ದಾರೆ.

After Myntra, Flipkart to shut website, to go 'app-only' from September

ಇ ಕಾಮರ್ಸ್ ನಂತೆ ಮೊಬೈಲ್ ಕಾಮರ್ಸ್ ಕೂಡಾ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನ್ ಮೂಲಕವೇ ವ್ಯವಹಾರ ನಡೆಸಲು ನಿರ್ಧರಿಸಲಾಗಿದೆ ಎಂದರು.

ಫ್ಲಿಪ್ ಕಾರ್ಟ್ ಮೊಬೈಲ್ ಅಪ್ಲಿಕೇಷನ್ ಗ್ರಾಹಕ ಸ್ನೇಹಿಯಾಗಿದ್ದು, ಸುಲಭವಾಗಿ ವ್ಯವಹರಿಸಬಹುದಾಗಿದೆ. ಮೊಬೈಲ್ ಅಪ್ಲಿಕೇಷನ್ ಮೂಲಕವೇ ಶೇ 70 ರಿಂದ 75 ರಷ್ಟು ಜನ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ ಎಂದು ಪುನೀತ್ ಹೇಳಿದರು.

ಮಿಂಟ್ರಾ.ಕಾಂ ಕಳೆದ ಮೇ ತಿಂಗಳಿನಿಂದಲೇ ಮೊಬೈಲ್ ಮೂಲಕ ಗ್ರಾಹಕ ಸೇವೆ ನೀಡಲು ಮುಂದಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಶೇ 10ರಷ್ಟು ಮಾರಾಟ ಕೂಡಾ ತಗ್ಗಿತ್ತು. ಅದರೆ, ಭವಿಷ್ಯದ ದೃಷ್ಟಿಯಿಂದ ದಿಟ್ಟ ಹೆಜ್ಜೆ ಎಂದು ಸಂಸ್ಥೆ ನಂಬಿದೆ. ಈಗ ಫ್ಲಿಪ್ ಕಾರ್ಟ್ ಕೂಡಾ ಇದೇ ಹಾದಿಯಲ್ಲಿ ಸಾಗುತ್ತಿದೆ. (ಒನ್ ಇಂಡಿಯಾ ಸುದ್ದಿ)

English summary
Following the footsteps of fashion e-tailor Myntra, leading e-commerce platform Flipkart has decided to shut its website and join the app-only bandwagon by September this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X