ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಗೇಮ್ ಕ್ಯಾಂಡಿ ಕ್ರಶ್ ದಾಖಲೆ ಮೊತ್ತಕ್ಕೆ ಸೇಲ್

|
Google Oneindia Kannada News

ನ್ಯೂಯಾರ್ಕ್, ನವೆಂಬರ್. 04: 'ಸ್ವಾಮಿ ನನ್ನ ಫೇಸ್ ಬುಕ್ ಖಾತೆಗೆ ಆ ಕ್ಯಾಂಡಿ ಕ್ರಶ್ ರಿಕ್ವೆಸ್ಟ್ ಬರದ ಹಾಗೆ ಮಾಡಿ' ಎಂದು ನರೇಂದ್ರ ಮೋದಿ ಜುಕರ್ ಬರ್ಗ್ ಬಳಿ ಕೇಳುತ್ತಿರುವಂತಹ ಜೋಕ್ ಸಾಮಾಜಿಕ ತಾಣಗಳಲ್ಲಿ ಅನೇಕ ಸಾರಿ ಹರಿದಾಡಿದೆ. ಕೆಲವರಿಗೆ ಈ ರಿಕ್ವೆಸ್ಟ್ ಗಳನ್ನು ಡಿಲೀಟ್ ಮಾಡುವುದೇ ದೊಡ್ಡ ಹಿಂಸೆಯಾದರೆ ಇನ್ನೂ ಕೆಲವರಿಗೆ ಈ ಗೇಮ್ ಆಡುವುದೇ ಪಂಚಪ್ರಾಣ.

ಇಂತಿಪ್ಪ ಕ್ಯಾಂಡಿ ಕ್ರಶ್ ಹೊಸ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಇದೀಗ ಕ್ಯಾಂಡಿ ಕ್ರಶ್ ಬಿಲಿಯನ್ ಕಿಂಗ್, ಮೊತ್ತದಲ್ಲೂ, ಬಳಕೆದಾರರ ಸಂಖ್ಯೆಯಲ್ಲೂ!.[ಕ್ಯಾಂಡಿ ಕ್ರಷ್ ಹುಚ್ಚಾಟಕ್ಕೆ ಹೆಬ್ಬೆರಳೇ ಕ್ರಶ್!]

game

ಡಿಜಿಟಲ್ ಆಕ್ಟಿವಿಷನ್ ಬ್ಲಿಜಾರ್ಡ್ ಕಂಪನಿ ಕ್ಯಾಂಡಿ ಕ್ರಶ್ ನ್ನು 5.9 ಬಿಲಿಯನ್ ಡಾಲರ್, (38,724 ಕೋಟಿ ರು.) ಗೆ ಖರೀದಿ ಮಾಡಿದೆ. ಇಷ್ಟು ದಿನ ಕಿಂಗ್ ಡಿಜಿಟಲ್ ಒಡೆತನದಲ್ಲಿದ್ದ ಕ್ರಶ್ ಗೆ ಹೊಸ ಮಾಲೀಕ ಸಿಕ್ಕಿದ್ದಾನೆ.

ವಲ್ರ್ಡ್ ಆಫ್ ವಾರ್ ಕ್ರಾಫ್ಟ್, ಕಾಲ್ ಆಫ್ ಡ್ಯೂಟಿ, ಡಿಯಾಬ್ಲೋ ಮುಂತಾದ ಗೇಮ್ ಗಳ ಮೂಲಕ ಜನಪ್ರಿಯತೆ ಗಳಿಸಿರುವ ಆಕ್ಟಿವಿಷನ್ ಕಿಂಗ್ ಡಿಜಿಟಲ್ ಬಳಿ ಇದ್ದ ಗೇಮ್ ಅನ್ನು ಮಾರುಕಟ್ಟೆ ಬೆಲೆಗಿಂತ ಒಂದು ಬಿಲಿಯನ್ ಡಾಲರ್ ಅಧಿಕ ಮೊತ್ತ ಕೊಟ್ಟು ಖರೀದಿಸಿದೆ.[ಬಿಜೆಪಿಯವರಿಗೆ ಕ್ಯಾಂಡಿ ಕ್ರಶ್ ರಿಕ್ವೆಸ್ಟ್ ಕಳಿಸಿದ್ದು ಕಾಂಗ್ರೆಸಿಗರು!]

ಈ ಹಿಂದೆ ಡಿಸ್ನಿ 4 ಬಿಲಿಯನ್ ಡಾಲರ್‌ ನೀಡಿ ಲ್ಯೂಕಸ್ ಫಿಲ್ಮ್ ಕಂಪನಿಯನ್ನು, ಮೈಕ್ರೋಸಾಫ್ಟ್ 2.5 ಬಿಲಿಯನ್ ಡಾಲರ್ ಮೊತ್ತಕ್ಕೆ ಜಂಗ್‍ ಅನ್ನು, ಅಮೆಜಾನ್ ಟ್ವಿಚ್ ಕಂಪನಿಯನ್ನು 1 ಬಿಲಿಯನ್ ಡಾಲರ್ ಗೆ ಖರೀದಿ ಮಾಡಿದ್ದು ದಾಖಲೆಯಾಗಿತ್ತು. ಕ್ಯಾಂಡಿ ಕ್ರಶ್ ಬಳಿ 47.40 ಕೋಟಿ ಕ್ರಿಯಾತ್ಮಕ ಬಳಕೆದಾರರಿದ್ದಾರೆ. ಈ ಮಟ್ಟದಲ್ಲಿ ಗೇಮ್ ಒಂದನ್ನು ಖರೀದಿ ಮಾಡಿರುವುದು ವಾಣಿಜ್ಯ ವಲಯಯದಲ್ಲಿ ಹೊಸ ದಾಖಲೆಯಾಗಿದೆ.

English summary
Activision Blizzard finally deciding to make a big move into the mobile games segment, it's just spent nearly $6 billion to acquire King, maker of hit mobile games like Candy Crush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X