ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಸಿಇಒ ಮೆಚ್ಚಿದ 8 ವರ್ಷ ಅದ್ಭುತ ಬಾಲಕ

By Mahesh
|
Google Oneindia Kannada News

ನವದೆಹಲಿ, ಜೂನ್ 01: ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ, ಭಾರತ ಮೂಲದ ಸತ್ಯಾ ನಡೆಲ್ಲಾ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದಾಗ ಅದ್ಭುತ ಬಾಲಕನೊಬ್ಬನನ್ನು ಭೇಟಿ ಮಾಡಿದ್ದಾರೆ. ಮುಂಬೈ ಮೂಲದ 8 ವರ್ಷ ಬಾಲಕನನ್ನು ಸಾಮಾಜಿಕ ಜಾಲ ತಾಣಗಳು 'ಭವಿಷ್ಯದ ಮೈಕ್ರೋಸಾಫ್ಟ್ ಸಿಇಒ' ಎಂದು ಬಣ್ಣಿಸಿವೆ.

ಎಂಟು ವರ್ಷಕ್ಕೆ ಕ್ರಿಕೆಟ್ ಬ್ಯಾಟ್ ಹಿಡಿದು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಕ್ರಿಕೆಟ್ ಆಡುತ್ತಾ ಕಾಲಕಳೆಯುವ ಹುಡುಗರೇ ಹೆಚ್ಚಾಗಿ ಸಿಗುತ್ತಾರೆ. ಆದರೆ, ಇಲ್ಲೊಬ್ಬ ಪೋರ ಮೈಕ್ರೋಸಾಫ್ಟ್ ಸಿಇಒ ಅವರ ಮನಗೆದ್ದಿದ್ದಾರೆ. ಎಂಟು ವರ್ಷದ ವಿದ್ಯಾರ್ಥಿ ಮೆದಾಂಶ್ ಮೆಹ್ತಾ ಗೇಮ್ ಡೆವಲಪರ್ ಆಗಿ ಸತ್ಯ ಅವರ ಗಮನಸೆಳೆದಿದ್ದಾನೆ. "Let there be light' ಹೆಸರಿನಲ್ಲಿ ಅಪ್ಲಿಕೇಷನ್ ವಿನ್ಯಾಸಗೊಳಿಸಿ ಸತ್ಯ ಅವರಿಗೆ ವಿವರಿಸಿದ್ದಾನೆ.

When 8-yr-old gaming developer asked Satya Nadella, 'how he can become next Microsoft CEO'!
ಸತ್ಯ ಅವರು ತಮ್ಮ ಭಾಷಣದಲ್ಲಿ ಈ ಬಾಲಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಎಂಟು ವರ್ಷದ ಬಾಲಕನೊಬ್ಬ ದೇಶದ ಆರ್ಥಿಕ ಪ್ರಗತಿ, ಪರಿಸರ ಸಮತೋಲನದ ಬಗ್ಗೆ ತಿಳಿದುಕೊಂಡು ಅದನ್ನು ಅಪ್ಲಿಕೇಷನ್ ಮೂಲಕ ಗೇಮ್ ಆಗಿ ಪರಿವರ್ತಿಸಿ ಪ್ರಸ್ತುತಪಡಿಸಿರುವುದು ಅದ್ಭುತ ವಿಷಯ ಎಂದಿದ್ದಾರೆ.

ನಗರಗಳಲ್ಲಿ ಫ್ಯಾಕ್ಟರಿ ಹಾಗೂ ತೋಟಗಳಗಳ ನಡುವೆ ಪರಿಸರ ಮಾಲಿನ್ಯ ವಿಷಯವನ್ನು ಸಮೀಕರಿಸಿ ಮೊಬೈಲ್ ಗೇಮ್ ತಯಾರಿಸಿದ ಮೆಹ್ತಾ, ಸತ್ಯ ಅವರಿಗೆ ನಾನು ಮೈಕ್ರೋಸಾಫ್ಟ್ ಸಿಸಿಒ ಆಗುವುದು ಹೇಗೆ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಿಕ್ಕ ಉತ್ತರವೇನು? ಬಾಲಕನ ಬಗ್ಗೆ ಬಂದಿರುವ ವಿಡಿಯೋದಲ್ಲಿ ಏನಿದೆ? ಮುಂದೆ ನೋಡಿ....

ಸಿಎನ್ ಬಿಸಿ ಟಿವಿ 18 ವಾಹಿನಿಯ ಹಿರಿಯ ಪತ್ರಕರ್ತೆ ಶೆರಿನ್ ಬಾನ್ ಅವರು ಹಂಚಿಕೊಂಡಿರುವ ಈ ವಿಡಿಯೋಗೆ 49 ಸಾವಿರ ಲೈಕ್ಸ್, 3.8 ಕಾಮೆಂಟ್ಸ್, 5.1 ಮಿಲಿಯನ್ ವೀಕ್ಷಣೆ ಸಿಕ್ಕಿದೆ.

English summary
Indian-origin Microsoft CEO Satya Nadella, was left impressed when he met an eight-year-old gaming developer, during his recent visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X