ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ : ಕೇವಲ ಶೇ 1 ರಷ್ಟು ಮಾತ್ರ ಉದ್ಯೋಗ ಕಡಿತ!

By Mahesh
|
Google Oneindia Kannada News

ಚೆನ್ನೈ, ಜ.14: ದೇಶದ ಅತಿದೊಡ್ದ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ನಡೆಸಲು ಉದ್ದೇಶಿಸಿರುವ ಮಹಾ 'ಪಿಂಕ್ ಸ್ಲಿಪ್ ವಿತರಣೆ' ಸಂಪೂರ್ಣ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಮಹಿಳಾ ಉದ್ಯೋಗಿ ವಜಾಕ್ಕೆ ಹೈಕೋರ್ಟ್ ತಡೆ ನೀಡಿದೆ. ಈಗ ಎಚ್ಚೆತ್ತುಕೊಂಡಿರುವ ಟಿಸಿಎಸ್, ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿಲ್ಲ ಎಂದಿದೆ.

ಸುಮಾರು 20 ರಿಂದ 30 ಸಾವಿರ ಉದ್ಯೋಗಿಗಳಿಗೆ ಉಂಟಾಗಿದ್ದ ಭೀತಿ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಸುಮಾರು 2,574 ಅಥವಾ ಶೇ1 ರಷ್ಟು ಉದ್ಯೋಗಿಗಳಿಗೆ ಮಾತ್ರ ಪಿಂಕ್ ಸ್ಲಿಪ್ ನೀಡಲಾಗಿದೆ. ಮುಂದಿನ ಒಂಭತ್ತು ತಿಂಗಳಲ್ಲಿ ಸಂಸ್ಥೆ ತೊರೆಯಬೇಕಾಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ 3,000 ಮುಟ್ಟಬಹುದು ಅಷ್ಟೇ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ. [ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್]

2,574 employees asked to leave in Apr-Dec 2014, says TCS

ಪಿಂಕ್ ಸ್ಲಿಪ್ ಯೋಜನೆ ಇಲ್ಲ: ಸೆಪ್ಟೆಂಬರ್ 30,2014ಕ್ಕೆ ಅನ್ವಯವಾಗುವಂತೆ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 3,13,757 ನಷ್ಟಿದೆ. ಈಗ 2,574 ಉದ್ಯೋಗಿಗಳು ಸಂಸ್ಥೆ ತೊರೆಯುತ್ತಿರುವುದರಲ್ಲಿ ವಿಶೇಷವೇನಿಲ್ಲ. ಪ್ರತಿ ವರ್ಷ ಇದು ನಡೆದುಕೊಂಡು ಬಂದಿದೆ. ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಕ್ರಮವಾಗಿ 2,203 ಹಾಗೂ 2,132 ಉದ್ಯೋಗಿಗಳು ಸಂಸ್ಥೆ ತೊರೆದಿದ್ದರು.

ಸಾಮಾಜಿಕ ಜಾಲ ತಾಣಗಳಲ್ಲಿ ಟಿಸಿಎಸ್ ಸಂಸ್ಥೆ ಬೃಹತ್ ಪಿಂಕ್ ಸ್ಲಿಪ್ ಯೋಜನೆ ಎಂಬ ಅರ್ಥದಲ್ಲಿ ಬಂದಿರುವ ಲೇಖನಗಳೆಲ್ಲ ಸತ್ಯಕ್ಕೆ ದೂರವಾಗಿದೆ. ಈ ರೀತಿ ಯೋಜನೆ ಸದ್ಯಕ್ಕಂತೂ ಸಂಸ್ಥೆ ಯೋಚಿಸಿಲ್ಲ ಎಂದು ಟಿಸಿಎಸ್ ಹೇಳಿದೆ.

ಸುಮಾರು 13 ಬಿಲಿಯನ್ ಯುಎಸ್ ಡಾಲರ್ ವಾರ್ಷಿಕ ಆದಾಯವುಳ್ಳ 3 ಲಕ್ಷ ಉದ್ಯೋಗಿಗಳನ್ನುಳ್ಳ 46 ದೇಶಗಳಲ್ಲಿ ತನ್ನ ಛಾಪು ಮೂಡಿಸಿರುವ ಟಿಸಿಎಸ್ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಅಧಿಕ ಮಹಿಳಾ ಉದ್ಯೋಗಿಗಳಿದ್ದಾರೆ.

ಇದಕ್ಕೂ ಮುನ್ನ ಎಕ್ಸಿಟ್ ಇಂಟರ್ ವ್ಯೂ ನೀಡಿದ ಉದ್ಯೋಗಿಯೊಬ್ಬರು ಸಂಸ್ಥೆ ತೊರೆಯುವುದಕ್ಕೆ ಮುನ್ನ ನೀಡಿದ ಸಂದರ್ಶನದ ಆಡಿಯೋ ಕ್ಲಿಪ್ಪಿಂಗ್ ಸೌಂಡ್ ಕ್ಲೌಡ್ ನಿಂದ ಜಾರಿ ಫೇಸ್ ಬುಕ್ ಗೆ ಇಳಿದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. [ಮಹಿಳಾ ಉದ್ಯೋಗಿ ವಜಾ ಆದೇಶಕ್ಕೆ ಹೈ ತಡೆ]

"We are against TCS LayOff", ಎಂಬ ಫೇಸ್ ಬುಕ್ ಪುಟಕ್ಕೆ ಸುಮಾರು 16Kಗೂ ಅಧಿಕ ಲೈಕ್ಸ್ ಬಂದಿದೆ. ಈ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಎ ಹಾಗೂ ಬಿ(ಸಂಸ್ಥೆಗೆ ಹೊಸ ಸೇರ್ಪಡೆ) ಉದ್ಯೋಗಿಗಳು ನಿಮಗಿಂತ(ಸಿ) ಹೆಚ್ಚಿನ ದುಡಿಮೆ ನೀಡುತ್ತಿದ್ದಾರೆ. ನಿಮ್ಮ ಅಗತ್ಯವಿಲ್ಲ ಎಂದು ಚೆನ್ನೈ ಮೂಲದ ಎಚ್ ಆರ್ ಮ್ಯಾನೇಜರ್ ಹೇಳಿರುವುದು ಈಗ ಜಗಜ್ಜಾಹೀರಾಗಿದೆ.

English summary
Country's largest software services firm Tata Consultancy Services (TCS) has asked 2,574 employees to leave in the first nine months of this fiscal, while the total layoffs in the full year may exceed 3,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X