ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಕೇವಲ ನಿಖಿಲ್ ತಂದೆಯಲ್ಲ, ಮುಖ್ಯಮಂತ್ರಿ ಅನ್ನೋದನ್ನ ಮರೀಬೇಡಿ: ಮಾಳವಿಕ

|
Google Oneindia Kannada News

Recommended Video

ಇವರು ರಾಜ್ಯದ ಮುಖ್ಯಮಂತ್ರಿ ಅಲ್ಲ ಬರೀ ನಿಖಿಲ್ ತಂದೆ..!? | Lok Sabha Election 2019 | Oneindia Kannada

ಬೆಂಗಳೂರು, ಏ.16: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ತನ್ನ ಜವಾಬ್ದಾರಿ ಎಲ್ಲವನ್ನೂ ಬಿಟ್ಟು ಕೇವಲ ನಿಖಿಲ್ ತಂದೆಯಾಗಿ ವರ್ತಿಸುತ್ತಿರುವುದು ತಪ್ಪು ಎಂದು ಮಾಳವಿಕ ಅವಿನಾಶ್ ತಿಳಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಸಂಸದೆ ಶೋಭಾ ಕರಂದ್ಲಾಜೆ ಅವರ ಪರವಾಗಿ ನಡೆಸಿದ ಪ್ರಚಾರ ಸಭೆಯಲ್ಲಿಪಾಲ್ಗೊಂಡು 'ಒನ್ ಇಂಡಿಯಾ' ಜೊತೆ ಮಾತನಾಡಿದ ಅವರುರಾಜ್ಯದ ಮುಖ್ಯಮಂತ್ರಿಯಾಗಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ, ಆದರೆ ಅದೆಲ್ಲವನ್ನೂ ಬದಿಗಿಟ್ಟು ಸಂಪೂರ್ಣ ಸಮಯವನ್ನು ಮಗನ ಪ್ರಚಾರದಲ್ಲಿ ತೊಡಗಿಸಿಕೊಂಡಾಗ ಸಾಮಾನ್ಯರಲ್ಲಿ ಕೆಲವು ಗೊಂದಲ ಮೂಡುವುದು ಸಹಜ ಎಂದರು.

'ಕಾಂಗ್ರೆಸ್ ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ' 'ಕಾಂಗ್ರೆಸ್ ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ'

ದೇಶ ಮೊದಲು, ಪಕ್ಷ ಎರಡನೇ ಅಂತಿಮವಾಗಿ ನಾನು ಎನ್ನವುದು ಬರುತ್ತದೆ. ಮೋದಿಯವರ ಹೆಸರು ಎಲ್ಲರಿಗಿಂತ ಪ್ರಕಾಶಮಾನವಾದದ್ದು, ಮೋದಿಯವರ ಹೆಸರನ್ನು ಹೇಳಲು ಕಾರ್ಯಕರ್ತರಾಗಿ ನಮಗ ಯಾವುದೇ ಅಳುಕಿಲ್ಲ, ಬೇಜಾರಿಲ್ಲ.

 HDK acting like Nikhils father not chief minister

ಐದು ವರ್ಷಗಳಿಂದ ಮೋದಿ ಏನು ಮಾಡಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಹಿಡಿದೇ ಮತ ಕೇಳುತ್ತಿದ್ದೇವೆ. ಅಷ್ಟೇ ಅಲ್ಲ ಬಿಜೆಪಿಯ 15 ಮಂದಿ ಸಂಸದರೂ ಕೂಡ ಐದು ವರ್ಷದಿಂದ ಸುಮ್ಮನೆ ಕುಳಿತಿಲ್ಲ, ಅವರು ಕೂಡ ಮಾಡಿದ ಉತ್ತಮ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದು ಮತಯಾಚಿಸುತ್ತಿದ್ದಾರೆ. ಎಲ್ಲಕ್ಕೂ ಮೋದಿ ಎನ್ನುವ ಮಂತ್ರವನ್ನು ಉಚ್ಛರಿಸುತ್ತಿದ್ದಾರೆ.

ಅಂಬರೀಶ್ ಅವರ ಜೊತೆಗೆ ನಾನು ಮೊದಲ ಬಾರಿಗೆ ಕಲ್ಯಾಣೋತ್ಸವ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದೆ ಅಲ್ಲಿಂದಲೂ ಅವರು ನನಗೆ ಪರಿಚಿತರು. ಬಳಿಕ ಸುಮಲತಾ ಅವರ ಪರಿಚಯವಾಗಿತ್ತು.

ಮಂಡ್ಯದಲ್ಲಿ ನಿಖಿಲ್ ಪರ ಮತಯಾಚಿಸಿದ ದೇವೇಗೌಡ, ಕುಮಾರಸ್ವಾಮಿಮಂಡ್ಯದಲ್ಲಿ ನಿಖಿಲ್ ಪರ ಮತಯಾಚಿಸಿದ ದೇವೇಗೌಡ, ಕುಮಾರಸ್ವಾಮಿ

ಅಂಬರೀಶ್ ಅವರ ಮನೆ ಬಾಗಿಲಿಗೆ ಬಂದವರಿಗೆ ಸಹಾಯ ಮಾಡಿದ್ದಾರೆ. ಬಿಜೆಪಿಯು ಕೂಡ ಸುಮಲತಾ ಅವರಿಗೆ ಬೆಂಬಲ ನೀಡಿದೆ. ನಾವು ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದರು.

English summary
BJP leader Malavika avinash opines that HDK acting like Nikhil's father not Karnataka chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X