ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೊ. ಮಹೇಶ್ ಚಂದ್ರ ಗುರು ವಜಾಕ್ಕೆ ರಾಜ್ಯಪಾಲರಿಗೆ ಕರಂದ್ಲಾಜೆ ಪತ್ರ

By Sachhidananda Acharya
|
Google Oneindia Kannada News

ಬಳ್ಳಾರಿ/ಮೈಸೂರು, ಜೂನ್ 27: ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಗೋಮಾಂಸ ಸೇವಿಸಿದ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರ ಗುರು ವಜಾಕ್ಕೆ ಆಗ್ರಹಿಸಿ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯಪಾಲ ವಜೂಭಾಯಿ ವಾಲಾರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಬಳ್ಳಾರಿಯಲ್ಲಿ ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದಾಜ್ಞೆ, "ಸಾಹಿತಿ ಕೆ ಎಸ್ ಭಗವಾನ ಹಾಗೂ ಪ್ರೊ. ಮಹೇಶ ಚಂದ್ರ ಗುರು ಸರ್ಕಾರಿ ಕಟ್ಟಡದಲ್ಲಿ ಗೋಮಾಂಸ ಭಕ್ಷಣೆ
ಮಾಡಿರುವುದು ಸರಿಯಲ್ಲ," ಎಂದು ಹೇಳಿದ್ದಾರೆ.

Seeking action against prof. Mahesh Chandra Guru, Karandlaje wrote a letter to Governess

"ಮಹೇಶ ಚಂದ್ರ ಗುರು ಮೈಸೂರು ವಿವಿ ಪ್ರೊಫೆಸರ್ ಆಗಿದ್ದಾರೆ. ಪ್ರೊಫೆಸರ್ ಆಗಿ ಈ ರೀತಿ ಮಾಡಿದ್ದು ಸರಿಯಲ್ಲ. ಅವರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಇದು ಸರಿಯಲ್ಲ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ," ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಜ್ಯಪಾಲರು ಮಹೇಶ್ ಚಂದ್ರ ಗುರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಭರವಸೆಯಿದೆ ಎಂದು ಕರಂದ್ಲಾಜೆ ತಿಳಿಸಿದ್ದಾರೆ.

English summary
MP Shobha Karandlaje wrote a letter to Governor seeking lawful action against prof. Mahesh Chandra Guru, who ate beef at Karnakata Kalamandir, a government building in Mysuru along with KS Bhagawan and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X