ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಪಡೆಯುವಾಗ ಸಿಕ್ಕಿಬಿದ್ರು ಕೃಷ್ಣದೇವರಾಯ ವಿವಿ ಕುಲಸಚಿವ

|
Google Oneindia Kannada News

ಬಳ್ಳಾರಿ, ಮಾ. 25 : ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಕಾಟೇಪಾಗ ವಿಜಯಕುಮಾರ ಅವರನ್ನು ಮಂಗಳವಾರ ರಾತ್ರಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 1 ಲಕ್ಷ ಲಂಚ ಪಡೆಯುತ್ತಿದ್ದಾಗ ಅವರು ಸಿಕ್ಕಿಬಿದ್ದಿದ್ದಾರೆ.

ಬಳ್ಳಾರಿ ನಗರದಲ್ಲಿರುವ ರಾಯಲ್‌ ಬಿಇಡಿ ಕಾಲೇಜಿನ ಮಾನ್ಯತೆಯನ್ನು ನವೀಕರಿಸಲು ಕುಲಸಚಿವ ವಿಜಯಕುಮಾರ ಅವರು 3.50 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 1 ಲಕ್ಷ ರೂ. ಕೊಡುವಂತೆ ಕೇಳಿದ್ದರು. 1 ಲಕ್ಷ ಹಣವನ್ನು ನಿವಾಸದಲ್ಲಿ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

Katepaga Vijayakumar

ರಾಯಲ್ ಬಿಐಡಿ ಕಾಲೇಜಿನ ಆಡಳಿತ ಮಂಡಳಿಯ ಎ.ಅಹಮದ್ ಎಂಬುವವರು ಕುಲಸಚಿವರು ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಮೊದಲ ಕಂತಿನ ಹಣವನ್ನು ಪಡೆಯುವಾಗ ಕುಲಸಚಿವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. [ಎಂಟು ಸಾಧಕರಿಗೆ ವಿವಿಯಿಂದ ಡಾಕ್ಟರೇಟ್]

ಸದಾ ಸುದ್ದಿಯಲ್ಲಿದ್ದರು : ಕುಲಸಚಿವ ವಿಜಯಕುಮಾರ ಅವರು ವಿವಾದ ಕಾರಣಗಳಿಂದಲೇ ಸುದ್ದಿಯಲ್ಲಿದ್ದರು. ಶ್ರೀಕೃಷ್ಣದೇವರಾಯ ವಿವಿಯ ಮೊದಲ ಕುಲಪತಿಯಾಗಿ ಡಾ.ಮಂಜಪ್ಪ ಡಿ.ಹೊಸಮನಿ ಅವರು ಅಧಿಕಾರ ವಹಿಸಿಕೊಂಡ ಬಳಿಕ 4 ವರ್ಷಗಳವರೆಗೆ ನಾನಾ ಕಾರಣಗಳಿಗಾಗಿ ವಿವಿ ಸುದ್ದಿಯಲ್ಲಿತ್ತು. ಕುಲಸಚಿವ ವಿಜಯಕುಮಾರ ಮತ್ತು ಡಾ.ಮಂಜಪ್ಪ ಡಿ.ಹೊಸಮನಿ ಅವರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ನಡೆಯುತ್ತಿತ್ತು.

2014ರಲ್ಲಿ ನಡೆದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ನಟ ಶಿವರಾಜ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ವಿಜ್ಞಾನಿ ಯು.ಆರ್.ರಾವ್ ಸೇರಿದಂತೆ ಎಂಟು ಸಾಧಕರಿಗೆ ಗೌರವ ಡಾಕ್ಟರೇಟ್‌ ನೀಡಲಾಗಿತ್ತು.

English summary
Katepaga Vijayakumar registrar of Sri Krishnadevaraya University, Ballari was arrested by the Lokayukta police while he was accepting a bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X