ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಶಾಕ್ : ಹೈದರಾಬಾದಿನಿಂದ ಬಳ್ಳಾರಿಗೆ ಬಂದಿಳಿದ ಗಾಲಿ ರೆಡ್ಡಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಎಎಂಸಿ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

By Mahesh
|
Google Oneindia Kannada News

ಬಳ್ಳಾರಿ, ನವೆಂಬರ್ 21: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಎಎಂಸಿ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಐಟಿ ದಾಳಿ ಸುದ್ದಿ ತಿಳಿದ ಬಳಿಕ ಹೈದರಾಬಾದಿನಿಂದ ವಿಶೇಷ ವಿಮಾನದಲ್ಲಿ ಜಿಂದಾಲ್ ಗೆ ನಂತರ ಬಳ್ಳಾರಿಗೆ ರೆಡ್ಡಿ ಆಗಮಿಸಿದ್ದಾರೆ.

ಬಳ್ಳಾರಿಯಲ್ಲಿರುವ ಎಎಂಸಿ, ಒಎಂಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದ ಐದು ಜನ ಅಧಿಕಾರಿಗಳ ತಂಡ ಸದ್ಯಕ್ಕೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. [ಗಾಲಿ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅನುಮತಿ!]

Ballari: Income Tax raid on Gali Janardhana Reddy's AMC Office

ಗಾಲಿ ಜನಾರ್ದನ ರೆಡ್ಡಿ ಅವರು ಈಗಷ್ಟೇ ಮಗಳು ಬ್ರಹ್ಮಣಿ ಮದುವೆ ಸಂಭ್ರಮ ಮುಗಿಸಿಕೊಂಡು ಬಳ್ಳಾರಿಗೆ ತೆರಳಿದ್ದರು. ಆದರೆ, ಸುಪ್ರೀಂಕೋರ್ಟಿನ ಆದೇಶ ಪಾಲಿಸಬೇಕಾಗಿರುವುದರಿಂದ ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ನೆಲೆಸುವಂತಿಲ್ಲ.[ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]

* 200 ಕೋಟಿ ರು ವೆಚ್ಚದ ಅದ್ದೂರಿ ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ಸ್ಪಷ್ಟನೆ ಕೋರಿರುವ ಆದಾಯ ತೆರಿಗೆ ಇಲಾಖೆ. ಆದಾಯ ತೆರಿಗೆ 133 (ಎ) ಅನ್ವಯ ವಿಚಾರಣೆ ನಡೆಸಿದೆ.[ಬ್ರಹ್ಮಣಿ ಧರಿಸಿದ್ದ ಕಣ್ಣು ಕೋರೈಸುವ ವಜ್ರಾಭರಣದ ಬೆಲೆ?]

ನವೆಂಬರ್ 8ರಂದು ಕೇಂದ್ರ ಸರ್ಕಾರ 500, 1000 ರೂಪಾಯಿ ನೋಟುಗಳ ಬಳಕೆಯನ್ನು ನಿಷೇಧಿಸಿತ್ತು. ಹೀಗಾಗಿ ಗಾಲಿ ರೆಡ್ಡಿ ಬಳಸಿದ ನೋಟುಗಳ ಬಗ್ಗೆ ಪ್ರಶ್ನೆ. ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಸಂಪಾದನೆಗೆ ಸೇರಿದಂತೆ 8ಕ್ಕೂ ಅಧಿಕ ಕೇಸುಗಳು ಗಾಲಿ ರೆಡ್ಡಿ ಅವರ ಮೇಲಿದೆ. [ಗಾಲಿ ರೆಡ್ಡಿ ಮಗಳ ಮದ್ವೆಗೆ ಪರಂ ಎಂಟ್ರಿ, ಪೊಲೀಸರು ಗರಂ]

* ಅರಮನೆ ಮೈದಾನದಲ್ಲಿ ಮದುವೆ ಸೆಟ್ ನಿರ್ಮಾಣಕ್ಕೆ 20 ಕೋಟಿ ರು
* ನೀತಾ ಲುಲ್ಲಾ ವಿನ್ಯಾಸದ ವಸ್ತ್ರ ಧರಿಸಿದ್ದ ವಧು ಬ್ರಹ್ಮಣಿ ಅವರು 90 ಕೋಟಿ ವೆಚ್ಚದ ಆಭರಣ ಧರಿಸಿದ್ದರು.
* ವಸ್ತ್ರಾಭರಣ, ಉಡುಗೆ ತೊಡುಗೆ ಖರ್ಚು 100 ಕೋಟಿ ರು
* ಭೋಜನ ವ್ಯವಸ್ಥೆ 20 ಕೋಟಿ ರು
* ಅತಿಥಿಗಳಿಗೆ ಸ್ಟಾರ್ ಹೋಟೆಲ್ ಗಳಲ್ಲಿ 1500 ರೂಮ್ ಗಳು ಬುಕ್ಕಿಂಗ್
* 1 ಕೋಟಿ ರು ವೆಚ್ಚದಲ್ಲಿ ವಿಜಯ ವಿಠಲ ದೇಗುಲದ ಪ್ರತಿರೂಪ ನಿರ್ಮಾಣ
* ಮದುವೆ ಆಯೋಜನೆಗೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ 10 ಕೋಟಿ ರು
* ಬೌನ್ಸರ್ ಹಾಗೂ ಭದ್ರತಾ ಸಿಬ್ಬಂದಿಗಳಿಗೆ 30 ಲಕ್ಷ ರು

ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿಂದ ಬಂಧಿಸಲ್ಪಟ್ಟು ಜೈಲು ಸೇರಿ ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಐದು ವರ್ಷಗಳ ಬಳಿಕ ತವರೂರು ಬಳ್ಳಾರಿಗೆ ನವೆಂಬರ್ 2ರಂದು ಕಾಲಿಟ್ಟರು. [ರೆಡ್ಡಿ ಮಗಳ ಅದ್ಧೂರಿ ಮದುವೆ: ಐಟಿಯಲ್ಲಿ ದೂರು ದಾಖಲು]

ಮಗಳ ಮದುವೆಗಾಗಿ ಬಳ್ಳಾರಿಗೆ ಹೋಗಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ನವೆಂಬರ್ 22ರ ತನಕ ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೆಲೆಸಬಹುದಾಗಿದೆ.

English summary
Just days after his daughter's lavish wedding, Income Tax officials raided mining baron Gali Janardhana Reddy's offices in Ballari. Sleuths from Income tax department raided AMC and OMC offices belonging to Janardhana Reddy on Monday(November 21). Documents are being verified by the officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X