ನವೆಂಬರ್ನಲ್ಲಿ ಹಂಪಿ ಉತ್ಸವ : ಸಂತೋಷ್ ಲಾಡ್
ಬಳ್ಳಾರಿ, ಆಗಸ್ಟ್ 20 : 'ನವೆಂಬರ್ ತಿಂಗಳಿನಲ್ಲಿ ಹಂಪಿ ಉತ್ಸವವನ್ನು ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ' ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
'ನವೆಂಬರ್
3,
4
ಮತ್ತು
5
ರಂದು
ಹಂಪಿ
ಉತ್ಸವವನ್ನು
ನಡೆಸಲು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಒಪ್ಪಿಗೆ
ನೀಡಿದ್ದಾರೆ.
ಹಂಪಿ
ಉತ್ಸವಕ್ಕೆ
ಸಕಲ
ಸಿದ್ಧತೆ
ಕೈಗೊಳ್ಳಲಾಗುವುದು.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಉತ್ಸವಕ್ಕೆ
ಆಗಮಿಸಲಿದ್ದಾರೆ'
ಎಂದು
ಸಚಿವರು
ತಿಳಿಸಿದರು.[ಹಂಪಿ
ಉತ್ಸವದ
ಸಂಭ್ರಮ
ಇಮ್ಮಡಿಸಿದ
ಸಾಹಸಿ
ಕಲಾವಿದರು]
ಈ ಬಾರಿ ಉತ್ಸವ ನಡೆಯುವುದು ಖಚಿತ : ಸಂತೋಷ್ ಲಾಡ್ ಅವರು ಜಿಲ್ಲೆಯ ಕೈಗಾರಿಕೋದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಉತ್ಸವ ಆಚರಣೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದರು. 50ಕ್ಕೂ ಹೆಚ್ಚು ಕಲಾವಿದರೊಂದಿಗೂ ಮಾತುಕತೆ ನಡೆಸಿದ್ದರು.[ಹಂಪಿ- ವಿಜಯನಗರ ಬೇರೆ ಬೇರೆ ಹೇಗೆ?]
ಈ ವರ್ಷ ಮೈಸೂರು ದಸರಾವನ್ನು 11 ದಿನ ನಡೆಸುವ ನಿರ್ಧಾರವನ್ನು ಸರ್ಕಾರ ಕೈಗೊಂಡ ಬಳಿಕ ಹಂಪಿ ಉತ್ಸವಕ್ಕೆ ಹಸಿರು ನಿಶಾನೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಕಳೆದ ವರ್ಷ ಬರ ಮತ್ತು ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಉತ್ಸವವನ್ನು ಆಚರಣೆ ಮಾಡಿರಲಿಲ್ಲ.