ಬಳ್ಳಾರಿ ಎಸ್ ಐ ಗಾಯತ್ರಿ ಫೇಸ್ ಬುಕ್ ನಲ್ಲಿ ಬರೆದಿದ್ದೇನು?

Written by: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಆಗಸ್ಟ್ 30: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಇಲಾಖೆ ಬಗ್ಗೆ ಅಪಸ್ವರ ಎತ್ತಿ ರಾಜೀನಾಮೆ ನೀಡಿದ ಬಳಿಕ ಮತ್ತೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆ ಬಗ್ಗೆ ಫೇಸ್ ಬುಕ್ ನಲ್ಲಿ ನೋವು ತೋಡಿಕೊಂಡಿದ್ದಾರೆ.

ಆದರೆ, ನಂತರ ಫೇಸ್ ಬುಕ್ ಪೋಸ್ಟ್ ಅಳಿಸಿ ಹಾಕಿ, ಸ್ಪಷ್ಟನೆ ನೀಡುವ ಇನ್ನೊಂದು ಪೋಸ್ಟ್ ಹಾಕಿದ್ದಾರೆ. ಈ ರೀತಿ ಸುದ್ದಿಯಾಗಿರುವವರು ಬಳ್ಳಾರಿ ಪಿಎಸ್ ಐ ಗಾಯತ್ರಿ ಫರ್ಹಾನ್. [ರಾಜನಾಥ್ ಸಿಂಗ್ ಗೆ ಅನುಪಮಾ ಶೆಣೈ ದೂರು]

ಸಬ್ ಇನ್ಸ್ ಪೆಕ್ಟರ್ ಗಾಯತ್ರಿ ಫರ್ಹಾನ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಇಲಾಖೆಯಲ್ಲಿನ ಲೈಂಗಿಕ ಅಸಮಾನತೆಯ ಬಗ್ಗೆ ಬರೆದುಕೊಂಡಿದ್ದರು. ಆಗಸ್ಟ್ 26ರಂದು ಈ ಬಗ್ಗೆ ಬರೆದಿದ್ದ ಗಾಯತ್ರಿ ಅವರು..

ಈ ರೀತಿಯ ಅಸಮಾನತೆ ಕಳೆದ 12 ವರ್ಷಗಳ ನನ್ನ ಅನುಭವದಲ್ಲಿ ಕಂಡಿದ್ದೇನೆ. ಮಹಿಳೆಯ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಪುರುಷ ಅಧಿಕಾರಿಗಳಿಗೆ ಸಿಗುವ ಮನ್ನಣೆ ನಮಗೆ ಸಿಗುತ್ತಿಲ್ಲ. 24/7 ಇಲಾಖೆಗಾಗಿ ನಾವು ದುಡಿಯುವುದು ವ್ಯರ್ಥವಾಗುತ್ತಿದೆ. ನನಗೆ ಈ ವಾತಾವರಣಕ್ಕೆ ಹೊಂದಿಕೊಳ್ಳಲು 7 ವರ್ಷ ಬೇಕಾಯಿತು ಎಂದಿದ್ದಾರೆ. ಮುಂದೆ ಓದಿ....

ಬಳ್ಳಾರಿ ಪಿಎಸ್ ಐ ಗಾಯತ್ರಿ ಫರ್ಹಾನ್

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಇಲಾಖೆ ಬಗ್ಗೆ ಅಪಸ್ವರ ಎತ್ತಿ ರಾಜೀನಾಮೆ ನೀಡಿದ ಬಳಿಕ ಮತ್ತೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆ ಬಗ್ಗೆ ಫೇಸ್ ಬುಕ್ ನಲ್ಲಿ ನೋವು ತೋಡಿಕೊಂಡಿದ್ದಾರೆ.

ಆಗಸ್ಟ್ 26ರಂದು ಈ ಬಗ್ಗೆ ಬರೆದಿದ್ದ ಗಾಯತ್ರಿ

ಆಗಸ್ಟ್ 26ರಂದು ಈ ಬಗ್ಗೆ ಬರೆದಿದ್ದ ಗಾಯತ್ರಿ ಅವರು ಈ ರೀತಿಯ ಅಸಮಾನತೆ ಕಳೆದ 12 ವರ್ಷಗಳ ನನ್ನ ಅನುಭವದಲ್ಲಿ ಕಂಡಿದ್ದೇನೆ. ಮಹಿಳೆಯ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ

ನಾವು ದುಡಿಯುವುದು ವ್ಯರ್ಥವಾಗುತ್ತಿದೆ

ಪುರುಷ ಅಧಿಕಾರಿಗಳಿಗೆ ಸಿಗುವ ಮನ್ನಣೆ ನಮಗೆ ಸಿಗುತ್ತಿಲ್ಲ. 24/7 ಇಲಾಖೆಗಾಗಿ ನಾವು ದುಡಿಯುವುದು ವ್ಯರ್ಥವಾಗುತ್ತಿದೆ. ನನಗೆ ಈ ವಾತಾವರಣಕ್ಕೆ ಹೊಮ್ದಿಕೊಳ್ಳಲು 7 ವರ್ಷ ಬೇಕಾಯಿತು.

ಕೆಲವು ಸನ್ನಿವೇಶಗಳು ನನ್ನ ಕಣ್ಣಲ್ಲಿ ನೀರು ತರಿಸಿತು

ಕೆಲವು ಸನ್ನಿವೇಶಗಳು ನನ್ನ ಕಣ್ಣಲ್ಲಿ ನೀರು ತರಿಸಿತು. ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಕೆಲಸದಲ್ಲಿ ತೃಪ್ತಿ ಸಿಗುತ್ತಿಲ್ಲ. ಸೆಪ್ಟೆಂಬರ್ 1 ರಂದು ನಾನು 12ನೇ ವರ್ಷದ ಸೇವಾವಧಿಗೆ ಕಾಲಿಡುತ್ತಿದ್ದೇನೆ. ಇಲ್ಲಿ ಮಾಡೂ ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇದೆ ಎಂದು ನೋವು ತೋಡಿಕೊಂಡಿದ್ದರು.

ಯಾವುದೇ ಅಧಿಕಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ

ಆದರೆ, ಯಾವುದೇ ಅಧಿಕಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಈ ಬಗ್ಗೆ ಆಗಸ್ಟ್ 29ರಂದು ಸ್ಪಷನೆ ನೀಡುತ್ತಾ, ನಾನು ಹಾಕಿದ್ದ ಪೋಸ್ಟ್ ಸಾಮಾನ್ಯವಾದ ಸಂಗತಿ, ಇದಕ್ಕೆ ಬಣ್ಣ ಹಚ್ಚಿ ಅಪಪ್ರಚಾರ ಮಾಡಬೇಡಿ ಎಂದು ಕೋರಿದ್ದಾರೆ

English summary
Ballari Sub-inspector Gayatri Farhan took Facebook said that there was no job satisfaction even as she enters the 12th year of service.
Please Wait while comments are loading...