ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯ ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ

|
Google Oneindia Kannada News

ಬಳ್ಳಾರಿ, ಮೇ 17 : ಮನೆಯ ಬಡತನವನ್ನು ಮೀರಿ ಬಳ್ಳಾರಿಯ ಯಶ್ವಿತಾ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ವೈದ್ಯೆಯಾಗಬೇಕು ಎಂಬ ಕನಸು ಕಂಡಿದ್ದಾಳೆ.

ಯಶ್ವಿತಾ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಚಾಗಿ ನರಸಮ್ಮ ನರಸಯ್ಯ ಪ್ರೌಢಶಾಲೆಯ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿನಿ. ಕನ್ನಡ, ಹಿಂದಿ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುವ ಯಶ್ವಿತಾ ಇಂಗ್ಲಿಷ್‌ನಲ್ಲಿ 99 ಮತ್ತು ವಿಜ್ಞಾನದಲ್ಲಿ 97 ಅಂಕಗಳನ್ನು ಪಡೆದಿದ್ದಾಳೆ. [ಬೆಳ್ತಂಗಡಿಯ ಸುಶ್ರುತ್ ರಾಜ್ಯಕ್ಕೆ ದ್ವಿತೀಯ]

sslc

ಸಾಧನೆಗೆ ಅಡ್ಡಿಯಾಗದ ಬಡತನ : ಯಶ್ವಿತಾ ಕಿಶೋರಬಾಬು ಮತ್ತು ಸುಮಿತ್ರಾ ದಂಪತಿಯ ಪುತ್ರಿ. ಕಿಶೋರಬಾಬು ಕೂಲಿ ಕೆಲಸ ಮಾಡುತ್ತಿದ್ದಾರೆ. ಸುಮಿತ್ರಾ ಅವರು ಟೈಲರಿಂಗ್ ಮಾಡುತ್ತಾರೆ. ಮನೆಯ ಬಡತನ ಯಶ್ವಿತಾ ಸಾಧನೆಗೆ ಅಡ್ಡಿಯಾಗಿಲ್ಲ. [ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ]

'624 ಅಂಕಗಳಿಸುವ ಗುರಿ ಇತ್ತು. 621 ಅಂಕ ಬಂದಿದೆ. ನನ್ನ ಭವಿಷ್ಯಕ್ಕಾಗಿ ತಾಯಿ ಹಗಲು ರಾತ್ರಿ ದುಡಿಯುತ್ತಿದ್ದಾಳೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ವೈದ್ಯೆಯಾಗಿ ಸಮಾಜ ಸೇವೆ ಮಾಡುತ್ತೇನೆ, ಕುಟುಂಬವನ್ನು ಸಾಕುತ್ತೇನೆ' ಎನ್ನುತ್ತಾರೆ ಯಶ್ವಿತಾ. [SSLC ಫಲಿತಾಂಶ : ಯಾವ ಜಿಲ್ಲೆ ಪ್ರಥಮ, ಯಾವುದು ಕೊನೆ]

ಪರಿಶ್ರಮದಿಂದ ಯಶಸ್ಸು ಸಿಕ್ಕಿದೆ : 'ಸತತವಾದ ಪರಿಶ್ರಮದಿಂದ ಯಶಸ್ಸು ಸಿಕ್ಕಿದೆ. ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಅಂದೇ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆ. ಬೆಳಗ್ಗೆ 1 ಗಂಟೆ ರಾತ್ರಿ 3 ತಾಸು ಅಭ್ಯಾಸ ಮಾಡುತ್ತಿದ್ದೆ' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ಯಶ್ವಿತಾ.

English summary
Ballari girl Yashwitha has secured 621 marks out of 625 in the SSLC examination 2016. Yashwitha a student of Chagi Narasamma Narasaiah English medium school, Siraguppa. Yashwitha morther Sumithra working as tyler and father Kishore Babu working as labour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X