ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಆಶಿಕ್‌ಗೆ ಸಿಎ ಮಾಡುವ ಕನಸು

|
Google Oneindia Kannada News

ಬಳ್ಳಾರಿ, ಮೇ 30 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದ ಹುಡುಗ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಹೌದು, ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಎಂ.ಆಶಿಕ್ ನಾರಾಯಣ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆಶಿಕ್ ನಾರಾಯಣ್ 600 ಅಂಕಗಳಿಗೆ 593 ಅಂಕಗಳನ್ನು ಪಡೆದಿದ್ದಾರೆ.
ಆಶಿಕ್ ತೋರಣಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ.ನ ಅಸೋಸಿಯೇಟ್ ವೈಸ್ ಪ್ರೆಸಡೆಂಟ್ ಗಣಪತಿ ಪ್ರಸಾದ್ ಮತ್ತು ಆರ್‌ವೈಎಂಇಸಿಯಲ್ಲಿನ ಅಸೋಸಿಯೇಟ್ ಪ್ರೊಫೆಸರ್ ಆಶಾ ಭಾರತಿ ಅವರ ಪುತ್ರ. [ಅಳ್ವಾಸ್ ಕಾಲೇಜಿನ ಅನಂತ್ ರಾಜ್ಯಕ್ಕೆ ಪ್ರಥಮ]

ashik narayan

ಆಶಿಕ್ ನಾರಾಯಣ್‌ ಚಾರ್ಟೆಡ್ ಅಕೌಟೆಂಟ್ ಆಗುವ ಗುರಿ ಹೊಂದಿದ್ದಾರೆ. ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡಲಿದ್ದಾರೆ. ಬಾಲ್ಯದಿಂದಲೂ ಆಶಿಕ್ ಸಿಎ ಮಾಡುವ ಗುರಿ ಹೊಂದಿದ್ದ ಎನ್ನುತ್ತಾರೆ ಪೋಷಕರು. [ವಾಣಿಜ್ಯ ವಿಭಾಗದ ಸಾಧಕಿಗೆ ಐಎಎಸ್ ಅಧಿಕಾರಿ ಆಗುವ ಆಸೆ]

ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದ ಆಶಿಕ್ ನಾರಾಯಣ್ 625ಕ್ಕೆ 618 ಅಂಕಗಳನ್ನು ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದರು. ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಓದಿನ ಜೊತೆ ಪುಸ್ತಕ ಓದುವುದು, ಚೆಸ್ ಆಡುವುದು, ಬ್ಯಾಡ್ಮಿಂಟನ್ ಆಡುವುದು ಆಶಿಕ್ ಹವ್ಯಾಸಗಳು. ಅಬಾಕಸ್‌ನಲ್ಲಿ 10 ಲೆವಲ್‌ಅನ್ನು ಆಶಿಕ್ ಪೂರ್ಣಗೊಳಿಸಿದ್ದಾರೆ.

English summary
M.Ashik Narayan from Ballari secures second rank in state 2nd PUC exam. He has secured the second rank in state with 593 marks in commerce. Ashik Narayan student of Alva's college Moodbidri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X