ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ರೈಲ್ವೆ ಹಳಿ ಮೇಲೆ ಬಾಂಬ್ ಪತ್ತೆ

|
Google Oneindia Kannada News

ಬೆಳಗಾವಿ, ನ.20 : ಖಾನಾಪುರ ರೈಲು ನಿಲ್ದಾಣದಿಂದ 10 ಕಿ.ಮೀ.ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಎರಡು ಸಜೀವ ಬಾಂಬ್ ಪತ್ತೆಯಾಗಿದೆ. ರೈಲ್ವೆ ಹಳಿಯನ್ನು ಸ್ಫೋಟಿಸುವ ಸಂಚು ಇರಬಹುದು ಎಂದು ಶಂಕಿಸಲಾಗಿದ್ದು, ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಗುರುವಾರ ಬೆಳಗ್ಗೆ ರೈಲ್ವೆ ಹಳಿಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಖಾನಾಪುರ ರೈಲು ನಿಲ್ದಾಣದಿಂದ ಸುಮಾರು ಹತ್ತು ಕಿ.ಮೀ.ದೂರದಲ್ಲಿರುವ ಮಾಡಿಗುಂಡಿ ಗೇಟ್ ಬಳಿ ಎರಡು ಬಾಂಬ್‌ಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಈ ಕುರಿತು ಮಾಹಿತಿ ರವಾನಿಸಲಾಯಿತು.

Indian Railways,

ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಎರಡೂ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದರು. ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಲೋಂಡಾ-ಬೆಳಗಾವಿ ಮಾರ್ಗದ ರೈಲು ಸಂಚಾರವನ್ನು ಕೆಲವು ಕಾಲ ಸ್ಥಗಿತಗೊಳಿಸಲಾಗಿತ್ತು. [ಲೈಂಗಿಕ ದೌರ್ಜನ್ಯ, ಹೆಸ್ಕಾಂ ಉದ್ಯೋಗಿಗಳ ಬಂಧನ]

ಹಳಿಗಳ ಮೇಲೆ ಪತ್ತೆಯಾದ ಬಾಂಬ್‌ಗಳು ಮೊಟ್ಟೆಯಂತೆ ಕಾಣುತ್ತಿತ್ತು. ಮೇಲು ನೋಟಕ್ಕೆ ಇವುಗಳು ನಾಡಬಾಂಬ್‌ಗಳಂತೆ ಇವೆ ಎಂದು ಉತ್ತರ ವಲಯದ ಐಜಿಪಿ ಭಾಸ್ಕರ್‌ ರಾವ್ ಹೇಳಿದ್ದಾರೆ. ಖಾನಾಪುರ ಠಾಣೆಗೆ ಬಾಂಬ್ ಇರುವ ಬಗ್ಗೆ ಅನಾಮಧೇಯ ಕರೆ ಬಂದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. [ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನೊಮ್ಮೆ ಓದಿ]

English summary
Two crude bombs of low intensity were recovered next to the railway track near Kirvala village, Khanapur Taluka of Belagavi district on Thursday. November 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X