ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಗ್ರಾಮ ತಲುಪಿದ ಯೋಧ ಸಾಗರ ಕುಂಬಾರ ಮೃತದೇಹ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಆಗಸ್ಟ್ 19: ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಇಳಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಮೃತಪಟ್ಟಿದ್ದ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಕುಂಬಾರ ಗಲ್ಲಿಯ ಯೋಧ ಸಾಗರ ಬಸವರಾಜ ಕುಂಬಾರ ಅವರ ದೇಹ ಶುಕ್ರವಾರ ಸ್ವಗ್ರಾಮ ತಲುಪಿತು.[ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ]

Soldier Sagara Kumbara body reached Sankeshwara

ರಾಜಸ್ತಾನ ರೆಜಿಮೆಂಟಲ್ ನ್ಯಾಷನಲ್ ರೈಫಲ್ಸ್ ಫೋರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಗರ ಕುಂಬಾರ, ಕೆಲ ತಿಂಗಳ ಹಿಂದಷ್ಟೇ ಶ್ರೀನಗರಕ್ಕೆ ವರ್ಗಾವಣೆಯಾಗಿದ್ದರು. 2012ರಲ್ಲಿ ಕೊಪ್ಪಳದಲ್ಲಿ ಭಾರತೀಯ ಸೇನೆಗೆ ಆಯ್ಕೆ ಆಗಿದ್ದರು. ಮೃತ ಯೋಧರಿಗೆ ಇಬ್ಬರು ಸಹೋದರಿಯರು ಹಾಗೂ ತಾಯಿ ಇದ್ದಾರೆ. ವರ್ಷದ ಹಿಂದಷ್ಟೇ ಸಾಗರ್ ತಂದೆ ಬಸವರಾಜ ಮೃತಪಟ್ಟಿದ್ದರು.[ಬೆಳಗಾವಿಯಲ್ಲಿ ಮಳೆ ಅವಾಂತರ, 6 ಸೇತುವೆಗಳು ಜಲಾವೃತ]

Soldier Sagara Kumbara body reached Sankeshwara

ರಕ್ಷಾಬಂಧನಕ್ಕೆ ಅಣ್ಣನ ಕೈಗೆ ರಾಖಿ ಕಟ್ಟಬೇಕಿದ್ದ ಆತನ ತಂಗಿಯರಾದ ಸುರೇಖಾ ಹಾಗೂ ಕಾವೇರಿ ದುಃಖದಲ್ಲಿದ್ದಾರೆ. ಸೈನಿಕನ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯೋಧ ಸಾಗರ ಕುಂಬಾರ ಅವರ ಅಂತಿಮ ದರ್ಶನಕ್ಕಾಗಿ ಮಹಾಲಕ್ಷ್ಮಿ ದೇವಸ್ಥಾನದ ಎದುರಿನ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.[ಇನ್ಸ್ ಪೆಕ್ಟರ್ ಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಅವಾಜ್ ಹಾಕಿದ್ದೇಕೆ?]

English summary
Soldier Sagara Kumbara body reached his native place Sankeshwara, Belagaum district on Friday. He died in Srinagra on Independnce day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X