ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ರಾಜಕೀಯ ಅಖಾಡಕ್ಕೆ, ಗುಸುಗುಸು ಪಿಸುಪಿಸು

ಮಾಜಿ ಸಚಿವ, ಶಾಸಕ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಷ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಂತೆ ಎಂಬ ಸುದ್ದಿ ಬೆಳಗಾವಿಯಲ್ಲಿ ಕೇಳಿ ಬಂದಿದೆ. ಜತೆಗೆ ನಟಿ ಸುಮಲತಾ ಅವರ ರಾಜಕೀಯ ಎಂಟ್ರಿ ಸುದ್ದಿ ಹುಬ್ಬೇರುವಂತೆ ಮಾಡಿದೆ.

By Mahesh
|
Google Oneindia Kannada News

ಬೆಳಗಾವಿ/ ಬೆಂಗಳೂರು, ನವೆಂಬರ್ 24: ಮಾಜಿ ಸಚಿವ, ಶಾಸಕ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಂತೆ ಎಂಬ ಸುದ್ದಿ 2009ರಲ್ಲೂ ಕೇಳಿ ಬಂದಿತ್ತು. ಈಗಲೂ ಬೆಳಗಾವಿಯಲ್ಲಿ ಕೇಳಿ ಬಂದಿದೆ.

ಆದರೆ, ಇದರ ಜತೆಗೆ ಅಂಬರೀಷ್ ಪತ್ನಿ ನಟಿ ಸುಮಲತಾ ಅವರ ರಾಜಕೀಯ ಎಂಟ್ರಿ ಸುದ್ದಿ ಹುಬ್ಬೇರುವಂತೆ ಮಾಡಿದೆ.[2009: ಬಿಜೆಪಿಯಿಂದ ಬೆಂಗಳೂರು ಉತ್ತರಕ್ಕೆ ಅಂಬರೀಷ್ ?]

ಬೆಳಗಾವಿಯಲ್ಲಿ ಪುಷ್ಕಳ ಭೋಜನ, ಮಾತುಕತೆ ನಂತರ ಸುವರ್ಣ ವಿಧಾನಸೌಧದ ಬಳಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಂಬರೀಶ್ ಅವರಿಗೆ ಮುಕ್ತ ಆಹ್ವಾನ, ಸ್ವಾಗತವನ್ನು ಕೋರಿದ್ದಾರೆ, ಅಂಬರೀಶ್ ಅವರು ಬಿಜೆಪಿಗೆ ಬರುವುದಾದರೆ ಮುಕ್ತವಾಗಿ ಸ್ವಾಗತಿಸುವುದಾಗಿ ಹೇಳಿದ್ದಾರೆ.[ದಯವಿಟ್ಟು ಕ್ಷಮಿಸಿ ಎಂದು ಕನ್ನಡಿಗರ ಮುಂದೆ ಕೈಮುಗಿದ ಅಂಬಿ]

ಅಂಬರೀಶ್ ಅವರ ಜತೆ ಉತ್ತಮ ಸ್ನೇಹವಿದೆ. ಮಾಧ್ಯಮಗಳಲ್ಲಿ ಈ ಸಂಬಂಧ ಸುದ್ದಿ ಬರುತ್ತಿದೆ. ಆದರೆ, ಅವರು ನನ್ನನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು. ಅಂಬರೀಶ್ ಅವರು ಮಂತ್ರಿಯಾಗಿದ್ದವರು. ಅವರ ಅನುಭವ ಪಕ್ಷಕ್ಕೆ ಅಗತ್ಯವಿದೆ. ಜನರ ಬಯಕೆಯೂ ಇದೇ ಆಗಿದೆ.

ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ

ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ

ಅಂಬರೀಶ್ ಅವರು ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಂದ ರಾಜೀನಾಮೆ ಪಡೆಯುವ ವೇಳೆ ಅವರ ಜತೆ ಮಾತನಾಡಿಲ್ಲ ಎಂಬ ಬೇಸರ ಅವರಿಗಿದೆ. ಆದರೆ, ಬಿಜೆಪಿಯ ರಾಜ್ಯ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಮೈಸೂರಿನಲ್ಲಿ ಪಕ್ಷದ ಬಲವರ್ಧನೆಗೆ ಯತ್ನ

ಮೈಸೂರಿನಲ್ಲಿ ಪಕ್ಷದ ಬಲವರ್ಧನೆಗೆ ಯತ್ನ

ಮೈಸೂರು, ಮಂಡ್ಯ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಪ್ರಭಾವಿ ಮುಖಂಡರು ಬೇಕಿದ್ದು, ಅಂಬರೀಷ್ ಸೂಕ್ತ ನಾಯಕರಾಗಿದ್ದಾರೆ. ಇನ್ನು ಮಾಜಿ ಸಚಿವ ವಿ ಶ್ರೀನಿವಾಸಪ್ರಸಾದ್ ರನ್ನು ಕೂಡಾ ಕಾಂಗ್ರೆಸ್ ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ. ಅವರು ಕೂಡಾ ಬಿಜೆಪಿ ಸೇರಲಿದ್ದಾರೆ ಎಂದರು.ಈ ಮೂಲಕ ಒಕ್ಕಲಿಗ ಹಾಗೂ ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಸಿದ್ಧತೆ ನಡೆಸಿದೆ.

ಸುಮಲತಾ ರಾಜಕೀಯ ಎಂಟ್ರಿ?

ಸುಮಲತಾ ರಾಜಕೀಯ ಎಂಟ್ರಿ?

ಸುಮಲತಾ ಅಂಬರೀಶ್ ಅವರು ಯಶವಂತಪುರದಲ್ಲಿ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆಯಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಅಶೋಕ್ ಹೇಳಿದರು. ಹಿಂದೊಮ್ಮೆ ಸುಮಲತಾ ಅವರಿಗೆ ಎಂಎಲ್ಸಿ ಸ್ಥಾನ ಸಿಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು.

ಚುನಾವಣೆ ಸ್ಪರ್ಧಿಸಲು ಸುಮಲತಾಗೆ ಆಫರ್

ಚುನಾವಣೆ ಸ್ಪರ್ಧಿಸಲು ಸುಮಲತಾಗೆ ಆಫರ್

ಅಂಬರೀಷ್ ಅವರು ಸಕ್ರಿಯ ರಾಜಕೀಯದಿಂದ ದೂರಸರಿಯುವ ಮಾತನ್ನಾಡುತ್ತಿರುವುದರಿಂದ ಸುಮಲತಾ ಅಂಬರೀಷ್ ಅವರಿಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲು ಬಿಜೆಪಿ ಮುಂದಾಗಿದೆ. ಆದರೆ, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಂಬರೀಷ್ ಅಥವಾ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದೆ. ಮುಂದೇನಾಗುವುದೋ ಕಾದುನೋಡೋಣ.

English summary
BJP Karnataka leader former DCM R Ashoka has openly invited former Congress MH Ambarish and his wife Sumalatha to join the party. The BJP feels that if these leaders join the party, it would strengthen their chances in Mandya, Mysuru area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X