ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಚ್ಚ ಸುದೀಪ್ ಗಾಗಿ ಸಾಯೋಕೆ ಹೊರಟಿದ್ದ ಹುಡುಗ್ರು ಪೊಲೀಸರ ವಶಕ್ಕೆ

ನಟ ಸುದೀಪ್ ಅವರು ಬೆಳಗಾವಿಗೆ ಬರಬೇಕು, ನಾವು ಅವರನ್ನು ಭೇಟಿಯಾಗಬೇಕು ಎಂದು ಆಗ್ರಹಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ ಪಿಯುಸಿ ವಿದ್ಯಾರ್ಥಿಗಳು.

|
Google Oneindia Kannada News

ಬೆಳಗಾವಿ, ಮಾರ್ಚ್ 8: ನಾಳೆ ಬೆಳಗಾದರೆ ಈ ಹುಡುಗರಿಗೆ ಪಿಯುಸಿ ಪರೀಕ್ಷೆ. ನೆಟ್ಟಗೆ ಓದಿ ಪಾಸಾಗೋದು ನೋಡ್ಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಈ ಹುಡುಗರಿಗೆ ಆ ಪರೀಕ್ಷೆ ಕಡೆ ಕಿಂಚಿತ್ತೂ ಗಮನವಿಲ್ಲ. ಈ ಪಡ್ಡೆ ಹುಡುಗರು ನಟ ಸುದೀಪ್ ಗಾಗಿ ಪ್ರಾಣ ತೆರಲು ಸಿದ್ಧವಾಗಿದ್ದರು!!

ಅಂದಹಾಗೆ, ಈ ಹುಡುಗರು ಬೆಳಗಾವಿ ತಾಲೂಕಿನ ಭೂತರಾಮನ ಹಟ್ಟಿಯವರು. ಇವರಲ್ಲಿ ಒಬ್ಬನ ಹೆಸರು ಸುನಿಲ್. ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ. ನಟ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು ಹತ್ತಿಸಿಕೊಂಡವರು. ಅಭಿಮಾನ ಇಟ್ಕೊಳ್ಳೋದು ತಪ್ಪೇನಿಲ್ಲ ಬಿಡಿ. ಆದ್ರೆ, ಹುಡುಗರದ್ದು ಅತಿರೇಕದ ಅಭಿಮಾನ. [ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್]

PU student who tried to commit suicide for actor Sudeep arrested

ಓದು, ತಮ್ಮ ಮುಂದಿನ ಭವಿಷ್ಯ, ಹೆತ್ತವರು ತಮ್ಮ ಮೇಲಿಟ್ಟಿರುವ ನಂಬಿಕೆ ಬಗ್ಗೆ ಒಂಚೂರೂ ತಲೆಕೆಡಿಸಿಕೊಳ್ಳದ ಈ ಹುಡುಗರು ಬೆಳಗಾವಿಗೆ ಸುದೀಪ್ ಬರ್ತಾರೆ ಅಂತ ನಂಬಿಕೆಯಲ್ಲೇ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಕಾಯುತ್ತಿದ್ದರಂತೆ. ಆದರೆ, ಸುದೀಪ್ ಬರೋಲ್ಲ ಅನ್ನೋದು ಗೊತ್ತಾಗಿದೆ. ಅಷ್ಟೇ...[ದರ್ಶನ್-ಸುದೀಪ್ ಸ್ನೇಹ ಸಮರದ ಮಧ್ಯೆ ಶ್ರೀಮುರಳಿ 'ಉಗ್ರ'ಪ್ರತಾಪ!]

ತಮ್ಮ ನೆಚ್ಚಿನ ನಟದ ದರುಶನ ಸಿಗುವುದಿಲ್ಲ ಎಂಬ ವಿಚಾರ ತಿಳಿದು ಹತಾಶರಾದ ಈ ಹುಡುಗರು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಇಂದು (ಮಾ. 8) ಬೆಳಗ್ಗೆ ಪೆಟ್ರೋಲು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಒಡ್ಡಲು ಆರಂಭಿಸಿದ್ದಾರೆ. ಸುದೀಪ್ ಬೆಳಗಾವಿಗೆ ಬರಲೇಬೇಕು. ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತ ಬೊಬ್ಬೆಯಿಟ್ಟಿದ್ದಾರೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಕೊನೆಗೆ ಈ ಸುದ್ದಿ ತಿಳಿದ ಖಡೇ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಬಂದು ಇವರನ್ನು ಹಾಗೂ ಆತ್ಮಹತ್ಯೆ ಯತ್ನಕ್ಕೆ ಬಳಸಲಾಗಿದ್ದ ಎರಡು ಸೀಮೆಎಣ್ಣೆ ತುಂಬಿದ್ದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.[ಅಭಿಮಾನದ ಪರಾಕಾಷ್ಟೆ ಮೆರೆದು 'ಡಿ' ಬಾಸ್ ಭಕ್ತ ಬರೆದಿರುವ ಪತ್ರ ಇದು]

ಘಟನೆ ಬಗ್ಗೆ ಸುದೀಪ್ ಬೇಸರ: ಪಿಯುಸಿ ಹುಡುಗರ ಹುಚ್ಚು ಅಭಿಮಾನದ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿರುವ ಅವರು, ''ಕಾರಣಾಂತರಗಳಿಂದ ನಾನು ಕೆಲವು ಊರುಗಳಿಗೆ ಭೇಟಿ ಮಾಡಲಾಗಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಸೇಹಿತರೇ ದಯವಿಟ್ಟು ಕ್ಷಮಿಸಿ'' ಎಂದು ವಿನಮ್ರತೆಯಿಂದ ಕೇಳಿದ್ದಾರೆ.

English summary
Two PUC students tried to commit suicide in Belagavi on March 8th, when they come to know that their favorite actor Sudeep's Belagavi visit cancelled. ನಟ ಸುದೀಪ್ ಅವರ ಬೆಳಗಾವಿ ಭೇಟಿ ರದ್ದಾದ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ತಾಲೂಕಿನ ಯುವಕರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X