ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.26, 27ರಂದು ಮದ್ಯ ಮಾರಾಟವಿಲ್ಲ

|
Google Oneindia Kannada News

ಬೆಳಗಾವಿ, ಮಾ. 24 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಮದ್ಯ ಮಾರಾಟಗಾರರ ಒಕ್ಕೂಟ ಮಾ.26 ಮತ್ತು 27ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಲಿದೆ. ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.

ಸರ್ಕಾರ ಮದ್ಯ ಮಾರಾಟದ ಮೇಲಿನ ವ್ಯಾಟ್ ರದ್ದು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.23ರಿಂದ 31ರ ತನಕ ವಿವಿಧ ಜಿಲ್ಲೆಗಳಲ್ಲಿ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

Liquor

ಮಾ.26 ಮತ್ತು 27ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ ಎಂ.ಬಿ.ಜಾಧವ ಹೇಳಿದ್ದಾರೆ. ಮಾ.31ರಂದು ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. [ಬೀಡಿ, ಸಿಗರೇಟು, ಹೆಂಡಕ್ಕೆ ತೆರಿಗೆ ಕಟ್ಟಿಕಟ್ಟಿ ಸುಸ್ತಾಯ್ತಾ?!]

ಮುಖ್ಯಮಂತ್ರಿಗಳು ಬಜೆಟ್‌ಗೂ ಮುನ್ನ ನಡೆಸಿದ ಸಭೆಯಲ್ಲಿ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾವನ್ನು ಮಾಡಿಲ್ಲ. ಆದ್ದರಿಂದ ಒಕ್ಕೂಟ ಪ್ರತಿಭಟನೆ ದಾರಿ ಹಿಡಿದಿದೆ ಎಂದು ಎಂ.ಬಿ.ಜಾಧವ ತಿಳಿಸಿದ್ದಾರೆ. [2015ರ ಬಜೆಟ್ ಮುಖ್ಯಾಂಶಗಳು]

ಸರ್ಕಾರ ತನ್ನ ವರಮಾನ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಗಾರರ ಮೇಲೆ ಅವೈಜ್ಞಾನಿಕ ತೆರಿಗೆ ಹೇರುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ. ಮಾರಾಟಗಾರರು ಮದ್ಯ ಖರೀದಿ ಮತ್ತು ಮಾರಾಟಕ್ಕೆ ತೆರಿಗೆ ಕಟ್ಟಬೇಕು. ವರ್ಷಕ್ಕೊಮ್ಮೆ ಪರವಾನಗಿ ನವೀಕರಣಕ್ಕೂ ತೆರಿಗೆ ಕಟ್ಟಬೇಕಾಗಿದೆ ಎಂದು ಜಾಧವ ದೂರಿದ್ದಾರೆ.

English summary
Karnataka Liquor Merchant's Association secretary M.B. Jadhav said, liquor stores may not open on March 26 and 27 across the state to protest against the recent increase in the value added tax (VAT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X